ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದಗ - ಬೆಟಗೇರಿ ಕುಡಿಯುವ ನೀರು ಯೋಜನೆಗೆ ಸಿಎಂ ಚಾಲನೆ

ಮನೆ ಮನೆಗೂ ನೀರು ಪೂರೈಸುವ ಮಹತ್ತರ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್ 4ರಂದು ಚಾಲನೆ ನೀಡಲಿದ್ದಾರೆ.

|
Google Oneindia Kannada News

ಗದಗ, ಜೂನ್ 5: ಗದಗ ಬೆಟಗೇರಿ ಅವಳಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸುವ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ಯ ಸಚಿವರಾದ ಎಚ್ ಕೆ ಪಾಟೀಲ್ ಅವರ ಕನಸಿನ ಯೋಜನೆಯು ಪೂರ್ಣಗೊಂಡಿದ್ದು, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಳಿನಗರದ ಅಧದಷ್ಟು ಮನೆಗಳು ದಿನದ 24 ಗಂಟೆಗಳ ಕಾಲವೂ ಕುಡಿಯುವ ನೀರು ದೊರೆಯುವ ಯೋಜನೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಈ ಮೂಲಕ ತಳಮಟ್ಟದ ಜನರಿಗೂ ಶುದ್ದ ಕುಡಿಯುವ ನೀರು ಸಿಗಬೇಕು ಎನ್ನುವ ಮಹತ್ವಾಕಾಂಕ್ಷಿ ಯೋಜನೆಯ ಹರಿಕಾರರಾಗಿರುವ ಹೆಚ್ ಕೆ ಪಾಟೀಲರ ಮತ್ತೊಂದು ಕನಸು ನನಸಾಗಲಿದೆ.

Chief Minister of Siddaramaiah

ಕಳೆದ ಹಲವು ದಶಕಗಳಿಂದ ಅವಳಿ ನಗರದ ಜನತೆ ಕುಡಿಯುವ ನೀರು ಸೌಲಭ್ಯದಿಂದ ವಂಚಿತರಾಗಿದ್ದರು. ಅಲ್ಲದೆ ಬೆಳೆಯುತ್ತಿರುವ ಜನಸಂಖ್ಯೆ ಈ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುವಂತೆ ಮಾಡಿತ್ತು.

ಇದಕ್ಕೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಸಮರ್ಥವಾದ ಯೋಜನೆಯನ್ನು ರೂಪಿಸಿರುವ ರಾಜ್ಯ ಸರಕಾರ, ದೂರದ 70 ಕಿಲೋಮೀಟರ್ ಗ ಳಿಂದ ನಗರಕ್ಕೆ ಪೈಪ್ ಲೈನ್ ಹಾಗೂ ಮೂರು ಹಂತದಲ್ಲಿ ನೀರನ್ನು ಮೇಲಕ್ಕೆತ್ತುವ ಮೂಲಕ ಗದಗ-ಬೆಟಗೇರಿ ಅವಳಿನಗರಕ್ಕೆ 24 ಗಂಟೆಗಳ ಕಾಲ ನೀರು ಸರಬರಾಜು ಮಾಡಲಿದೆ. ಇದು ದೇಶದಲ್ಲೇ ಮೊದಲ ಬಾರಿಗೆ ಇಂತಹ ಪ್ರಯತ್ನದ ಯೋಜನೆಯಾಗಿದ್ದು ಸಫಲವಾಗಿದ್ದು ನಗರದ ಜನತೆಯಲ್ಲಿ ಸಂತಸ ಮೂಡಿಸಿದೆ.

ತುಂಗಾಭದ್ರ ನದಿಯ ಹಮ್ಮಗಿ ಬ್ಯಾರೇಜಿನಿಂದ 62.78 ಕಿ.ಮೀ ಪೈಪ್‍ಲೈನ್ ಅಳವಡಿಸಿ, 45.02 ಎಮ್‍ಎಲ್‍ಡಿ ನೀರನ್ನು ರಿವರ್ಸ್ ತಂತ್ರಜ್ಞಾನದ ಮೂಲಕ ಶುದ್ದೀಕರಿಸಿ ಶುದ್ದ ಕುಡಿಯುವ ನೀರನ್ನು ಪೂರೈಸುವ ಯೋಜನೆ ಇದಾಗಿದೆ. ಅವಳಿ ನಗರದಲ್ಲಿ 300.71 ಕಿ.ಮಿ ಉದ್ದದ ಆಂತರಿಕ ನೀರು ವಿತರಣಾ ಪೈಪ್‍ಲೈನ್ ಅಳವಡಿಸಿ, 5 ಜಲಸಂಗ್ರಹಾರಗಳನ್ನು ನಿರ್ಮಿಸುವುದು ಹಾಗೂ ನಗರದ ಒಟ್ಟು 41618 ಮನೆಗಳಿಗೆ ನಲ್ಲಿಯ ಸಂಪರ್ಕವನ್ನು ಒದಗಿಸಿ 24/7 ವಾರದ 7 ದಿನಗಳೂ ದಿನದ 24 ಗಂಟೆಗಳ ಕಾಲ ನಿರಂತರವಾಗಿ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ.

ಕೆರೆಯ ಕಲುಷಿತ ನೀರನ್ನು ಕುಡಿಯುವ ಮೂಲಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ ಗದಗ ಜಿಲ್ಲೆಯ ಜನತೆಗೆ ಶುದ್ದ ನೀರು ಅದೂ ಕೂಡಾ ಬಹಳ ಕಡಿಮೆ ದರದಲ್ಲಿ ನೀಡುವ ಯೋಜನೆ ಹರಿಕಾರರೆನಿಸಿಕೊಂಡಿರುವ ಶ್ರೀ ಹೆಚ್ ಕೆ ಪಾಟೀಲ್ ರವರು ಈ ಯೋಜನೆಯನ್ನು ಸಾಕಾರಗೊಳಿಸುವ ಮೂಲಕ ಜಿಲ್ಲೆಯ ಹಲವಾರು ವರ್ಷಗಳ ಸಮಸ್ಯೆನ್ನು ನೀಗಿಸಿದ್ದಾರೆ. ಇದು ನಮಗೆ ಬಹಳ ಸಂತಸ ತಂದಿದೆ ಎಂದು ಖುಷಿ ಹಂಚಿಕೊಂಡಿದ್ದು ಸ್ಥಳೀಯ ನಾಗರೀಕರು.

Plantation in Gadag

ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಂಗಟರಾಯನ ಕೆರೆ ಬಳಿ ಗದಗ ಬೆಟಗೇರಿ ಅವಳಿ ನಗರಗಳಿಗೆ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅಲ್ಲದೆ, ಅವಳಿ ನಗರಕ್ಕೆ 24/7 ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ಹಾಗೂ ಅನಿಲಭಾಗ್ಯ ಫಲಾನುಭವಿಗಳಿಗೆ ಒಲೆ ಹಾಗೂ ಸಿಲಿಂಡರ್ ವಿತರಣೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ಚಾಲನೆ ನೀಡಲಿದ್ದಾರೆ. ಹಾಗೆಯೇ, ಐತಿಹಾಸಿಕ ಲಕ್ಕಂಡಿ ಪ್ರಾಧಿಕಾರಕ್ಕೂ ಚಾಲನೆ ನೀಡಲಿದ್ದಾರೆ.

ಜಿಲ್ಲೆಯ ಪರಿಸರದ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಶ್ರೀ ಹೆಚ್ ಕೆ ಪಾಟೀಲರು, ರಸ್ತೆ ಅಗಲೀಕರಣದ ಸಂಧರ್ಭದಲ್ಲಿ ಬೆಳೆದು ನಿಂತ ಮರಗಳನ್ನು ಕತ್ತರಿಸದೇ ಬೇರೆ ಸ್ಥಳದಲ್ಲಿ ಮರಗಳನ್ನು ಸ್ಥಳಾಂತರಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.

ನಗರದ ಮುನಸಿಪಲ್ ಕಾಲೇಜ್ ಆವರಣದಲ್ಲಿ ಕಾರ್ಯಕ್ರಮದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳು ಹಾಗೂ ಅನೇಕ ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಬೃಹದ್ದಾಕಾರದ ವೇದಿಕೆ ನಿರ್ಮಾಣವಾಗುತ್ತಿದೆ. ವೇದಿಕೆಯ ಮುಂಭಾಗದಲ್ಲಿ ಸುಮಾರು ಹತ್ತಾರು ಸಾವಿರ ಜನರಿಗೆ ಆಸನದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

ಯೋಜನೆಯ ವೈಶಿಷ್ಟ್ಯತೆಗಳು:
- 41 ಸಾವಿರ ಮನೆಗಳಿಗೆ 24 ಗಂಟೆಗಳ ಕಾಲ ನೀರು ಪೂರೈಸುವ ಯೋಜನೆ
- ವಾರದ 7 ದಿನಗಳು ದಿನದ 24 ಗಂಟೆಗಳ ಕಾಲ ನೀರು
- 213 ಮೀಟರ್ ಕೆಳಮಟ್ಟದಿಂದ ನೀರನ್ನು ತರುವ ಯೋಜನೆ
- 62 ಕಿಲೋಮೀಟರ್ ಪೈಪ್ ಮೂಲಕ ಹರಿಯಲಿರುವ ತುಂಗಭದ್ರೆ
- ಮೂರು ಹಂತದಲ್ಲಿ ನೀರನ್ನು ಎತ್ತುವ ತಂತ್ರಜ್ಞಾನ
- 127.29 ಕೋಟಿ ಅಂದಾಜು ವೆಚ್ಚದ ಯೋಜನೆ
- ನದಿಗಿಂತಾ ಭೂಮಟ್ಟಕ್ಕಿಂತಾ 213 ಎತ್ತರ ಪ್ರದೇಶದಲ್ಲಿರುವ ಗದಗ ನಗರಕ್ಕೆ ನೀರು
- ದೇಶದಲ್ಲೇ ಮೊದಲು ಇಂತಹ ಯೋಜನೆ
- ಮೊದಲ ಹಂತದಲ್ಲಿ ನಾಲ್ಕು ಜೋನ್‍ಗಳ 11648 ಮನೆಗಳಿಗೆ ನೀರು

ಹೆಚ್ಚಿನ ಮಾಹಿತಿಗಾಗಿ: 94812 32345

English summary
Chief Minister of Siddaramaiah will be inaugurating the drinking water project on June 4th 2017 in Gadag. This project aims to give a permanent remedy for a water problem in Gadag and Betageri Region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X