ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ ವೈ ಕೇಸ್ ಬಲಗೊಳಿಸಲು ಸಿಎಂ ಸರ್ಕಸ್ : ಸುರೇಶ್ ವ್ಯಂಗ್ಯ

ಗೋವಿಂದ ರಾಜು ಡೈರಿ ಗೌಪ್ಯತೆಯನ್ನು ಬಿಜೆಪಿ ಬಹಿರಂಗ ಪಡಿಸಿದ ನಂತರ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಹೈಕಮಾಂಡ್ ಗೆ ನೀಡಲಾದ ಕಪ್ಪದ ಮಾಹಿತಿಯನ್ನು ಕಾಂಗ್ರೆಸ್ ಬಹಿರಂಗಪಡಿಸಿತ್ತು.

|
Google Oneindia Kannada News

ಬೆಂಗಳೂರು, ಫೆಬ್ರವರಿ 27: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪವರ ವಿರುದ್ಧದ ಕೇಸ್ ಗಳನ್ನು ಮತ್ತಷ್ಟು ಬಲಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಸರತ್ತು ನಡೆಸುತ್ತಿದ್ದಾರೆಂದು ಮಾಜಿ ಸಚಿವ, ಬಿಜೆಪಿ ನಾಯಕ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.[ಸಿಟ್ಟು, ಪಟ್ಟು ಎರಡರ ಕಾಂಬೋ ಬಿಎಸ್ ವೈಗೆ 74ನೇ ಜನ್ಮದಿನ]

ಯಡಿಯೂರಪ್ಪ ವಿರುದ್ಧದ ಕೇಸನ್ನು ರಾಜ್ಯ ಹೈಕೋರ್ಟ್ ಕೈಬಿಟ್ಟಿದೆ. ಹೀಗಿರುವಾಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಈ ಕೇಸನ್ನು ಬಲಪಡಿಸಲು ಸಿದ್ದರಾಮಯ್ಯ ಅವರು ಕಸರತ್ತು ನಡೆಸಿದ್ದಾರೆ. ಅದು ಒಳ್ಳೆಯದೇ. ಆದರೆ, ಅವರು ಎಷ್ಟೇ ಪ್ರಯತ್ನ ಪಡಲಿ, ಯಡಿಯೂರಪ್ಪ ಅವರನ್ನು ಬಗ್ಗಿಸಲು ಸಾಧ್ಯವಿಲ್ಲ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.[ಡೊನೇಷನ್ ಗೇಟ್ ಪಿತೂರಿ : ಯಾವುದು ಸತ್ಯ, ಯಾವುದು ಮಿಥ್ಯ?]

Siddaramaiah can't weaken Yeddyurappa says BJP leader Suresh Kumar

ವಿಧಾನಸಭೆ ಪರಿಷತ್ ಸದಸ್ಯ ಗೋವಿಂದ ರಾಜು ಅವರ ಡೈರಿಯಲ್ಲಿನ ಮಾಹಿತಿ ಸೋರಿಕೆಯಾಗುತ್ತಿದ್ದಂತೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಚಡಪಡಿಸುವಂತಾಗಿದೆ ಎಂದು ತಿಳಿಸಿದರು.[ಡೊನೇಷನ್ ಗೇಟ್ : ಬಿಜೆಪಿ ಬಣ್ಣ ಬಯಲು ಮಾಡಿದ ಕಾಂಗ್ರೆಸ್]

ಇದೇ ವೇಳೆಯಲ್ಲಿ ಮಾತನಾಡಿದ ಮತ್ತೊಬ್ಬ ಬಿಜೆಪಿ ನಾಯಕ ಗೋ. ಮದುಸೂದನ್, ಕೇಸ್ ಗಳು ಬದುಕಿದ್ದಿದ್ದರೆ ಜೀವ ಕೊಡಬಹುದಿತ್ತು

. ಸತ್ತಿರುವ ಕೇಸ್ ಗಳಿಗೆ ಸಿಎಂ ಜೀವ ಕೊಡೋಕೆ ಸಾಧ್ಯವಿಲ್ಲ.

ನಿಮ್ಮ ಎಲೆಯಲ್ಲಿ ಹೆಗಣ ಸತ್ತು ಬಿದ್ದಿದೆ

. ಮತ್ತೊಬ್ಬರ ಎಲೆಯಲ್ಲಿರುವ ನೊಣ ಓಡಿಸೋಕೆ ಬರ್ತಿದ್ದೀರಿ ಎಂದು ವ್ಯಂಗ್ಯವಾಡಿದರು.

ಆನಂತರ ಮಾತು ಮುಂದುವರಿಸಿ, ''ಸೋನಿಯಾ, ರಾಹುಲ್ ಗೆ ಸಾವಿರ ಕೋಟಿ ಕಪ್ಪ ಕೊಡ್ತೀರಿ

ಅವರಿಗೆ ಸಾವಿರಾರು ಕೊಟ್ಟಿದ್ದೀರ.

ನೀವು,ನಿಮ್ಮ ಮಂತ್ರಿಗಳು ಎಷ್ಟು ಸಾವಿರ ಕೋಟಿ ನುಂಗಿದ್ದೀರಿ. ಈಗ ಬಿಎಸ್ ವೈ ಮೇಲೆ ಕೇಸ್ ಹಾಕೋಕೆ ಹೊರಟಿದ್ದೀರ.

ನೀವು ಏನು ಬೇಕಾದ್ರೂ ಮಾಡಿ.

ನಿಮ್ಮ ಕಟ್ಟಾ ರೋಪ್ ಗೆ ಹೆದರೋರು ನಾವಲ್ಲ'' ಎಂದು ಮದುಸೂದನ್ ವಾಗ್ದಾಳಿ ನಡೆಸಿದರು.

English summary
Chief Minister Siddaramaiah can not weaken the former Chief Minister and BJP leader B.S.Yeddyurappa by just streanghtening the corruption case against him says former minister and bjp leader Suresh Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X