ಮಂತ್ರಿ ಪರಿಷತ್ ಸಭೆ ಕರೆದ ಸಿದ್ದರಾಮಯ್ಯ

Subscribe to Oneindia Kannada

ಬೆಂಗಳೂರು, ಜೂನ್ 13 : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿ ಪ್ರವಾಸವನ್ನು ರದ್ದುಗೊಳಿಸಿದರು. ಜೂನ್ 15ರ ಬುಧವಾರ ತುರ್ತು ಮಂತ್ರಿ ಪರಿಷತ್ ಸಭೆ ಕರೆದಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. [ಕಾಮರಾಜ ಸೂತ್ರ ಎಂದರೇನು? ಸಿಎಂ ಸಿದ್ದು ಅಳವಡಿಸಬಲ್ಲರೇ?]

ಅಧಿಕೃತ ಕಾರ್ಯಕ್ರಮದಂತೆ ಸೋಮವಾರ ಮಧ್ಯಾಹ್ನ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಬೇಕಾಗಿತ್ತು. ರಾಜ್ಯಸಭೆ ಚುನಾವಣೆಯ ಗೆಲುವಿನ ಬಗ್ಗೆ ಹೈಕಮಾಂಡ್‌ಗೆ ವರದಿ ಕೊಟ್ಟು, ಸಂಪುಟ ಪುನಾರಚನೆಗೆ ಒಪ್ಪಿಗೆ ಪಡೆಯಬೇಕಾಗಿತ್ತು. [ಸಂಪುಟ ಪುನಾರಚನೆ : ಯಾರ ಕೈ ತಪ್ಪಲಿದೆ ಸಚಿವ ಸ್ಥಾನ?]

siddaramaiah

ತಮ್ಮ ಕಾರ್ಯಕ್ರಮವನ್ನು ರದ್ದು ಮಾಡಿರುವ ಸಿದ್ದರಾಮಯ್ಯ ಅವರು, ಬುಧವಾರ ಬೆಳಗ್ಗೆ 10.30ಕ್ಕೆ ತುರ್ತು ಮಂತ್ರಿ ಪರಿಷತ್ ಸಭೆ ಕರೆದಿದ್ದಾರೆ. ವಿಧಾನಸೌಧದಲ್ಲಿ ಈ ಸಭೆ ನಡೆಯಲಿದ್ದು, ಸಭೆಯ ಬಳಿಕ ಅವರು ದೆಹಲಿ ವಿಮಾನವೇರಲಿದ್ದಾರೆ. ['ಸಚಿವ ಸಂಪುಟದಿಂದ ಕೈ ಬಿಟ್ಟರೂ ಸಂತೋಷ']

ಎಲ್ಲಾ ಸಚಿವರ ರಾಜೀನಾಮೆ? : ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಯಂತೆ ಸಿದ್ದರಾಮಯ್ಯ ಅವರು ಮಂತ್ರಿ ಪರಿಷತ್‌ ಸಭೆಯಲ್ಲಿ ಎಲ್ಲಾ ಸಚಿವರ ರಾಜೀನಾಮೆಯನ್ನು ಪಡೆದು ದೆಹಲಿಗೆ ತೆರಳಿದ್ದಾರೆ. ನಂತರ 15 ಸಚಿವರನ್ನು ಕೈ ಬಿಟ್ಟು ಸಂಪುಟ ಪುನಾರಚನೆ ಮಾಡಲಿದ್ದಾರೆ. [ಸಚಿವ ಸ್ಥಾನ ಬೇಕಾದರೆ ಮುಂಗಾರು ಮಳೆ ಬರಬೇಕು!]

ಮಂಗಳವಾರ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಲಿದ್ದು, ಮುಂಗಾರು ಮಳೆ ಆರಂಭವಾಗಿರುವ ಹಿನ್ನಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದಾರೆ. ಅಷ್ಟರ ಮಟ್ಟಿಗೆ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದೆ.

English summary
Karnataka Chief Minsiter Siddaramaiah has called a meeting of the entire council of ministers on June 13, 2016.
Please Wait while comments are loading...