ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಯುಎಸ್ ವೀಸಾ ಕೇಂದ್ರ ಸ್ಥಾಪನೆಗೆ ಮನವಿ

By Mahesh
|
Google Oneindia Kannada News

ಬೆಂಗಳೂರು, ನ.04: ಭಾರತದಲ್ಲಿನ ಯುಎಸ್‌ಎ(ಅಮೆರಿಕ) ರಾಯಭಾರಿ ರಿಚರ್ಡ್ ರಾಹುಲ್ ವರ್ಮಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಇನ್ವೆಸ್ಟ್ ಕರ್ನಾಟಕ ಹೂಡಿಕೆದಾರರ ಸಮಾವೇಶ, ವೀಸಾ ಕೇಂದ್ರ ಸ್ಥಾಪನೆ ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ರಿಚರ್ಡ್ ರಾಹುಲ್ ವರ್ಮಾ ಜೊತೆ ಮಾತುಕತೆ ನಡೆಸಿದ ಅವರು, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಅತ್ಯಂತ ಪ್ರಶಸ್ತವಾದ ವಾತಾವರಣವಿದ್ದು, ಇನ್ವೆಸ್ಟ್ ಕರ್ನಾಟಕದಲ್ಲಿ ಅಮೆರಿಕವನ್ನು ಪಾಲುದಾರ ರಾಷ್ಟ್ರವನ್ನಾಗಿ ಕಾಣಲು ಬಯಸುತ್ತೇವೆ ಎಂದರು. [ಕರ್ನಾಟಕದಲ್ಲಿ ಯಾವ ಸಂಸ್ಥೆ ಎಲ್ಲೆಲ್ಲಿ, ಎಷ್ಟು ಹೂಡಿಕೆ?]

Karnataka asks US to open a consulate in Bengaluru for ease of Visa

ಕರ್ನಾಟಕದಲ್ಲಿ ಅಮೆರಿಕ ಎರಡನೆ ಅತಿದೊಡ್ಡ ಹೂಡಿಕೆ ರಾಷ್ಟ್ರ ವಾಗಿದೆ. 2013ರ ಡಿಸೆಂಬರ್ ವೇಳೆಗೆ ರಾಜ್ಯಕ್ಕೆ 1,451.25 ದಶಲಕ್ಷ ಅಮೆರಿಕನ್ ಡಾಲರ್ ವಿದೇಶಿ ನೇರ ಬಂಡವಾಳ ಹರಿದು ಬಂದಿದೆ. ಬೆಂಗಳೂರಿನಲ್ಲಿ ಅಮೆರಿಕ ಮೂಲದ 300 ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.

ಅಮೆರಿಕ ಭಾರತದಲ್ಲಿ ಬಂಡವಾಳ ಹೂಡುವ ಆರನೆ ಅತಿದೊಡ್ಡ ರಾಷ್ಟ್ರವಾಗಿದೆ. ಭಾರತದಲ್ಲಿ 14,378 ದಶಲಕ್ಷ ಡಾಲರ್ ಎಫ್‌ಡಿಐ ಹೂಡಿಕೆಯಾಗಿದೆ. ನಿರ್ಮಾಣ, ಉಕ್ಕು, ಆಟೊಮೊಬೈಲ್, ಕಂಪ್ಯೂಟರ್ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್‌ನಲ್ಲಿ ಅಮೆರಿಕ ಹೂಡಿಕೆ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. [ನವೆಂಬರ್ ಬದಲು 2016ರ ಫೆಬ್ರವರಿಯಲ್ಲಿ ಜಿಮ್]

ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವಿನ ಸಾಮ್ಯತೆಗಳನ್ನು ಗಮನಸಿದರೆ ಇವೆರಡೂ 'ಸಹೋದರಿ ನಗರ'ಗಳಾಗಿ ಬಿಂಬಿಸಲ್ಪಡುತ್ತಿವೆ. ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ನಾವು ಒಂದೆ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವೆ. ರಾಜ್ಯದೊಂದಿಗೆ ಉತ್ತಮ ಸಂಬಂಧ ವೃದ್ಧಿಸಲು ನಾವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ರಾಹುಲ್ ವರ್ಮಾ ಹೇಳಿದ್ದಾರೆ.

English summary
The State Government has sought for a United States of America Consulate to be established in Bengaluru for ease of Visa process to the "promised land". Bengaluru, "Invest Karnataka 2016 is being held in Bengaluru from February 3 to 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X