ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿಗೆ ಎಸ್ ಎಂ ಕೃಷ್ಣ ಗುಡ್ ಬೈ; ಯಾರ್ಯಾರು ಏನೇನು ಅಂದ್ರು?

ಕಾಂಗ್ರೆಸ್ಸಿಗೆ ಹಿರಿಯ ಮುಖಂಡ, ಮಾಜಿ ವಿದೇಶಾಂಗ ಸಚಿವ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ರಾಜೀನಾಮೆ ನೀಡಿರುವುದಕ್ಕೆ ಹಲವು ಮುಖಂಡರು ಅಚ್ಚರಿ ಪಟ್ಟರೆ, ಇನ್ನಷ್ಟು ಜನ ನಮಗೆ ಇದರ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

By Balaraj
|
Google Oneindia Kannada News

ಬೆಂಗಳೂರು, ಜ 28: ಹಿರಿಯ ಮುಖಂಡ, ಮಾಜಿ ವಿದೇಶಾಂಗ ಸಚಿವ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿರುವುದಕ್ಕೆ ಹಲವು ಮುಖಂಡರು ಅಚ್ಚರಿ ಪಟ್ಟರೆ, ಇನ್ನಷ್ಟು ಜನ ನಮಗೆ ಇದರ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಕ್ಯಾಬಿನೆಟ್ ಮೀಟಿಂಗ್ ಸಲುವಾಗಿ ಮುಖ್ಯಮಂತ್ರಿಯಾದಿಯಾಗಿ ಬಂದಿದ್ದ ಸಚಿವರುಗಳು ಕೃಷ್ಣ ರಾಜೀನಾಮೆ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. (ರಾಜಕಾರಣಕ್ಕೆ ಗುಡ್‌ಬೈ ಹೇಳಿದ ಎಸ್ಸೆಂ ಕೃಷ್ಣ)

ರಾಜಕೀಯ ಬದುಕಿನಲ್ಲಿ ಎಷ್ಟೇ ಒತ್ತಡವಿರಲಿ, ಎಷ್ಟೇ ಏರುಪೇರುಗಳಿರಲಿ ನಗುನಗುತ್ತಾ ಅವುಗಳನ್ನು ಎದುರಿಸುತ್ತಿದ್ದ ಕೃಷ್ಣ. ಬೆಂಗಳೂರು ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದರು.

ನಿವೃತ್ತಿಯ ನಂತರ ಯಾವುದೇ ರಾಜಕೀಯ ಚಟುವಟಿಕೆ ನಡೆಸುವುದಿಲ್ಲ. ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದಿಲ್ಲ ಎಂದು ಕೃಷ್ಣ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಆಶ್ವಾಸನೆ ನೀಡಿದ್ದಾರೆ.

ಕೃಷ್ಣ ರಾಜೀನಾಮೆ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸಚಿವ ಸಂಪುಟದ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ..

ಎಚ್ ಡಿ ದೇವೇಗೌಡ

ಎಚ್ ಡಿ ದೇವೇಗೌಡ

ಕೃಷ್ಣ ರಾಜೀನಾಮೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಅವರೊಬ್ಬ ಸುಸಂಸ್ಕೃತ ರಾಜಕಾರಣಿ. ಅವರ ರಾಜೀನಾಮೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದ ನಂತರ ಹೆಚ್ಚಿನ ಪ್ರತಿಕ್ರಿಯೆ ನೀಡುತ್ತೇನೆ - ದೇವೇಗೌಡ.

ಸಿದ್ದರಾಮಯ್ಯ

ಸಿದ್ದರಾಮಯ್ಯ

ರಾಜೀನಾಮೆ ಬಗ್ಗೆ ಏನೂ ಮಾಹಿತಿಯಿಲ್ಲದ ಕಾರಣ, ಹೇಗೆ ಈ ಬಗ್ಗೆ ಪ್ರತಿಕ್ರಿಯಿಸಲಿ. ಈ ಬಗ್ಗೆ ಈಗ ಏನೂ ಹೇಳಿಕೆ ನೀಡುವುದಿಲ್ಲ - ಸಿದ್ದರಾಮಯ್ಯ.

ರಾಜೀನಾಮೆ

ರಾಜೀನಾಮೆ

ಕೃಷ್ಣ ಅವರು ಪಕ್ಷದ ಹಿರಿಯ ಮುಖಂಡರು, ಅವರ ಮಾರ್ಗದರ್ಶನ ನಮಗೆ ಬೇಕಿದೆ. ಅವರ ಕಾಲದಲ್ಲಿ ಬೆಂಗಳೂರು ಬಹಳ ಅಭಿವೃದ್ದಿಗೊಂಡಿತ್ತು. ಅವರು ಪಕ್ಷ ಬಿಡಬಾರದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ - ರಾಮಲಿಂಗ ರೆಡ್ಡಿ.

ಎಚ್ ಕೆ ಪಾಟೀಲ್

ಎಚ್ ಕೆ ಪಾಟೀಲ್

ಕೃಷ್ಣ ಅವರು ಪಕ್ಷ ಬಿಡುವ ಸುದ್ದಿ ಸತ್ಯಕ್ಕೆ ದೂರವಾದದ್ದು, ಅವರನ್ನು ಪಕ್ಷದಲ್ಲಿ ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಅವರು ಪಕ್ಢದ ಹಿರಿಯ ಮುಖಂಡರೊಬ್ಬರು - ಎಚ್ ಕೆ ಪಾಟೀಲ್.

ಪರಮೇಶ್ವರ್

ಪರಮೇಶ್ವರ್

ಕೃಷ್ಣ ರಾಜೀನಾಮೆ ನೀಡಿರುವ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ನಾವು ಎಸ್ ಎಂ ಕೃಷ್ಣರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

English summary
Veteran Congress leader SM Krishna retires from active politics, who said what. Reaction of HD Deve Gowda, Siddaramaiah and others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X