ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿಯಲ್ಲಿ ಕರ್ನಾಟಕ ಕರಾವಳಿ ಮುಂದು

ಉಡುಪಿಯಲ್ಲಿ ಶೇ.90.01ರಷ್ಟು, ದಕ್ಷಿಣ ಕನ್ನಡದಲ್ಲಿ ಶೇ.89.92 ಮತ್ತು ಉತ್ತರ ಕನ್ನಡದಲ್ಲಿ ಶೇ. 71.99ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಸಾಗಿದ್ದಾರೆ.

By Prasad
|
Google Oneindia Kannada News

ಬೆಂಗಳೂರು, ಮೇ 11 : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಪ್ರಥಮ ಮೂರು ಸ್ಥಾನಗಳನ್ನು ಬಾಚಿಕೊಂಡು ಹೆಮ್ಮೆಯಿಂದ ಬೀಗುತ್ತಿವೆ.

ಕಳೆದ ಬಾರಿ 2ನೇ ಸ್ಥಾನದಲ್ಲಿದ್ದ ಉಡುಪಿ ಈ ಬಾರಿ ಪ್ರಥಮ ಸ್ಥಾನ ಗಳಿಸಿದೆ. ಹಿಂದಿನ ವರ್ಷ ಮೊದಲನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಪ್ರತಿವರ್ಷ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ಜಿದ್ದಾಜಿದ್ದಿ ಫೈಟ್ ಇದ್ದಿದ್ದೇ.[ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ಈಗ ಲಭ್ಯ]

Second PUC 2017 : Coastal Karnataka Sweeps the results

ಮೂರನೇ ಸ್ಥಾನವನ್ನು, ಕಳೆದ ಬಾರಿ 4ನೇ ಸ್ಥಾನದಲ್ಲಿದ್ದ ಉತ್ತರ ಕನ್ನಡ ಜಿಲ್ಲೆ ಪಡೆದಿದೆ. ಕೊಡಗು ಜಿಲ್ಲೆಯನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಜಯಭೇರಿ ಬಾರಿಸಿದ್ದಾರೆ.

ಉಡುಪಿಯಲ್ಲಿ ಶೇ.90.01ರಷ್ಟು, ದಕ್ಷಿಣ ಕನ್ನಡದಲ್ಲಿ ಶೇ.89.92 ಮತ್ತು ಉತ್ತರ ಕನ್ನಡದಲ್ಲಿ ಶೇ. 71.99ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ನಾಲ್ಕನೇ ಸ್ಥಾನ ಪಡೆದಿರುವ ಕೊಡಗಿನಲ್ಲಿ ಶೇ.70.83ರಷ್ಟು ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲೇರಲಿದ್ದಾರೆ.

ವಿದ್ಯಾರ್ಜನೆಯ ಕೇಂದ್ರಗಳಾಗಿರುವ ಧಾರವಾಡ (18ನೇ ಸ್ಥಾನ), ಮೈಸೂರು (14ನೇ ಸ್ಥಾನ) ಜಿಲ್ಲೆಗಳಿಗೆ ಏನಾಗಿದೆಯೋ? ಅವುಗಳ ಸ್ಥಾನ ಕುಸಿಯುತ್ತಲೇ ಇದೆ. ಕಳೆದ ವರ್ಷ 15ನೇ ಸ್ಥಾನದಲ್ಲಿದ್ದ ಧಾರವಾಡ 18ನೇ ಸ್ಥಾನಕ್ಕೆ ಕುಸಿದಿದ್ದರೆ, ಕಳೆದ ವರ್ಷ 11ನೇ ಸ್ಥಾನದಲ್ಲಿದ್ದ ಮೈಸೂರು 14ನೇ ಸ್ಥಾನಕ್ಕೆ ಕುಸಿದಿದೆ.[ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 24 ಕೊನೆ ದಿನ]

ಒಟ್ಟಾರೆ ಫಲಿತಾಂಶದಲ್ಲಿ ಮೈಸೂರಿನ ಸ್ಥಾನ ಕುಸಿದಿದ್ದರೂ ಸಂತಸದ ಸಂಗತಿಯೇನೆಂದರೆ, ವಿಜ್ಞಾನ ವಿಭಾಗದಲ್ಲಿ ಮೈಸೂರಿನ ವಿಜಯ ವಿಠಲ ಶಾಲೆಯ ಹುಡುಗ ಪ್ರಜ್ವಲ್ ವೈಆರ್ 600 ಅಂಕಗಳಲ್ಲಿ 593 ಅಂಕ ಪಡೆದಿದ್ದು, 5 ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾನೆ. ಅಭಿನಂದನೆಗಳು ಪ್ರಜ್ವಲ್.

English summary
Coastal Karnataka districts Udupi, Dakshina Kannada, Uttara Kannada have taken first 3 positions in Karnataka 2nd PUC results 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X