ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರಕಿಹೊಳಿ ರಾಜೀನಾಮೆ ಪ್ರಹಸನ ಅಂತ್ಯ, ಖಾತೆ ಬದಲು

|
Google Oneindia Kannada News

ಬೆಂಗಳೂರು, ಜ.31 : ಮೂರು ದಿನಗಳ ಕಾಲ ನಡೆದ ಅಬಕಾರಿ ಸಚಿವ ಸತೀಶ್‌ ಜಾರಕಿಹೊಳಿ ರಾಜೀನಾಮೆ ಪ್ರಹಸನ ಶುಕ್ರವಾರ ಅಂತ್ಯಗೊಂಡಿದೆ. ತಮ್ಮ ರಾಜೀನಾಮೆಯನ್ನು ವಾಪಸ್ ಪಡೆಯುವುದಾಗಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಭರವಸೆ ನೀಡಿದ್ದಾರೆ. ಜಾರಕಿಹೊಳಿ ಅವರ ಬೇಡಿಕೆಯಂತೆ ಅಧಿವೇಶನದ ಬಳಿಕ ಬೇರೆ ಖಾತೆ ಸಿಗಲಿದೆ.

ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿರುವ ಸಚಿವ ಮಹದೇವಪ್ಪ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜಾರಕಿಹೊಳಿ ಮನವೊಲಿಸುವಲ್ಲಿ ಸಿಎಂ ಯಶಸ್ವಿಯಾಗಿದ್ದು, ಅವರು ಸಂಪುಟದಲ್ಲಿ ಮುಂದುವರೆಯಲಿದ್ದಾರೆ. [ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ರಾಜೀನಾಮೆ]

ಇನ್ನುಮುಂದೆ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ನಿರ್ಧಾರ ಕೈಗೊಳ್ಳಲಾಗುತ್ತದೆ. ನಿಮ್ಮನ್ನು ಉಪೇಕ್ಷೆ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಜಾರಕಿಹೊಳಿ ಅವರಿಗೆ ಭರವಸೆ ನೀಡಿದ್ದಾರೆ. [ಜಾರಕಿಹೊಳಿ ರಾಜೀನಾಮೆ : 7 ಪ್ರಮುಖ ಬೆಳವಣಿಗೆಗಳು]

ಸಿಎಂ ನೀಡಿದ ಭರವಸೆ ನಂತರ ಜಾರಕಿಹೊಳಿ ಸಂಪುಟದಲ್ಲಿ ಮುಂದುವರೆಯಲು ಒಪ್ಪಿಗೆ ನೀಡಿದ್ದಾರೆ. ಇದರಿಂದ ಬುಧವಾರ ಬೆಳಗ್ಗೆಯಿಂದ ನಡೆಯುತ್ತಿದ್ದ ರಾಜೀನಾಮೆ ಪ್ರಹಸನ ಅಂತ್ಯಗೊಂಡಿದ್ದು. ಜಾರಕಿಹೊಳಿ ಅವರ ಬೇಡಿಕೆ ಈಡೇರಿದಂತಾಗಿದೆ. ಶುಕ್ರವಾರದ ಬೆಳವಣಿಗೆಗಳ ಮಾಹಿತಿ ಇಲ್ಲಿದೆ ನೋಡಿ

ಸಿಎಂ, ಜಾರಕಿಹೊಳಿ ಭೇಟಿ

ಸಿಎಂ, ಜಾರಕಿಹೊಳಿ ಭೇಟಿ

ಗುರುವಾರ ಸಿಎಂ ಸಿದ್ದರಾಮಯ್ಯ ಅವರಿಗೆ ಭರವಸೆ ನೀಡಿದಂತೆ ಶುಕ್ರವಾರ ಸತೀಶ್ ಜಾರಕಿಹೊಳಿ ಸಿಎಂ ಭೇಟಿ ಮಾಡಿದರು. ಬೆಂಗಳೂರಿನಲ್ಲಿರುವ ಸಚಿವ ಮಹದೇವಪ್ಪ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜಾರಕಿಹೊಳಿ ಮನವೊಲಿಸುವಲ್ಲಿ ಸಿಎಂ ಯಶಸ್ವಿಯಾದರು.

ಜಾರಕಿಹೊಳಿ ಖಾತೆ ಬದಲಾವಣೆ

ಜಾರಕಿಹೊಳಿ ಖಾತೆ ಬದಲಾವಣೆ

ಸತೀಶ್ ಜಾರಕಿಹೊಳಿ ಅವರ ಬೇಡಿಕೆಯಂತೆ ಅವರಿಗೆ ಅಬಕಾರಿ ಬದಲು ಬೇರೆ ಖಾತೆ ನೀಡಲಾಗುತ್ತದೆ. ಫೆ.2ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು ಅದರ ಬಳಿಕ ಹೊಸ ಖಾತೆ ಸಿಗಲಿದೆ. ಸಣ್ಣ ಕೈಗಾರಿಕೆ ಖಾತೆ ನೀಡಲಾಗುತ್ತದೆ ಎಂಬ ಮಾಹಿತಿಯೂ ಇದೆ.

ಸಿಎಂ ಉಪೇಕ್ಷೆ ಮಾಡುವುದಿಲ್ಲ

ಸಿಎಂ ಉಪೇಕ್ಷೆ ಮಾಡುವುದಿಲ್ಲ

ಬೆಳಗಾವಿಗೆ ಸಂಬಂಧಿಸಿದ ವಿಚಾರದಲ್ಲಿ ಜಾರಕಿಹೊಳಿ ಅವರೊಂದಿಗೆ ಸಮಾಲೋಚನೆ ನಡೆಸದೇ ಯಾವುದೇ ನಿರ್ಧಾರವನ್ನು ಸಿಎಂ ಕೈಗೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರು ಇನ್ನು ಮುಂದೆ ಜಾರಕಿಹೊಳಿ ಅವರನ್ನು ಉಪೇಕ್ಷೆ ಮಾಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮೂರು ದಿನಗಳ ಪ್ರಹಸ ಅಂತ್ಯ

ಮೂರು ದಿನಗಳ ಪ್ರಹಸ ಅಂತ್ಯ

ಮಂಗಳವಾರ ಬೆಳಗ್ಗೆ ಸತೀಶ್ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬುಧವಾರ ಬೆಳಗ್ಗೆಯಿಂದ ಅವರ ಮನವೊಲಿಕೆ ಕಾರ್ಯ ಆರಂಭವಾಗಿತ್ತು. ಮೂರು ದಿನಗಳ ನಂತರ ಅವರು ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯಲು ಒಪ್ಪಿಗೆ ನೀಡಿದ್ದಾರೆ.

ಸಿಎಂ ಮನೆಗೆ ಹೋಗದ ಜಾರಕಿಹೊಳಿ

ಸಿಎಂ ಮನೆಗೆ ಹೋಗದ ಜಾರಕಿಹೊಳಿ

ಜಾರಕಿಹೊಳಿ ಅವರ ಪರವಾಗಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸಿದ್ದ ಬೆಳಗಾವಿ ಜಿಲ್ಲಾಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್‌ಕರ್, ಶಾಸಕರಾದ ಫಿರೋಜ್‌ ಶೇಟ್‌ ಮುಂತಾದ ನಾಯಕರ ನೇತೃತ್ವದ ನಿಯೋಗದ ಜೊತೆಯೇ ಸತೀಶ್ ಜಾರಕಿಹೊಳಿ ಮಹದೇವಪ್ಪಅವರ ನಿವಾಸಕ್ಕೆ ಹೋದರು. ಆದ್ದರಿಂದ ಸಿದ್ದರಾಮಯ್ಯ ಅವರು ಮಹದೇವಪ್ಪ ನಿವಾಸಕ್ಕೆ ಬಂದು ಜಾರಕಿಹೊಳಿ ಜೊತೆ ಮಾತುಕತೆ ನಡೆಸಿದರು.

English summary
Karnataka Chief Minister Siddaramaiah convinced Excise Minister Satish Jarkiholi who send his resignation for excise minister post. Satish Jarkiholi will get new portfolio soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X