ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲ್ಲುಗೆ ಜೈಲು, ಬೇಲು : ಕನ್ನಡ ಪತ್ರಿಕೆಗಳ ಹೆಡ್‌ಲೈನು

|
Google Oneindia Kannada News

ಬೆಂಗಳೂರು, ಮೇ 7 : 2002ರ ಹಿಟ್ ಅಂಡ್ ರನ್ ಪ್ರಕರಣದ ತೀರ್ಪನ್ನು ಬುಧವಾರ ಪ್ರಕಟಿಸಿದ ಮುಂಬೈ ಸೆಷನ್ಸ್ ಕೋರ್ಟ್ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ 5 ವರ್ಷದ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿತು. ಬಾಂಬೆ ಹೈಕೋರ್ಟ್ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿ ತಾತ್ಕಾಲಿಕ ರಿಲೀಫ್ ನೀಡಿತು.

ಬುಧವಾರ ಎಲ್ಲಾ ಮಾಧ್ಯಮಗಳಲ್ಲಿತೂ ತೀವ್ರ ಕುತೂಹಲ ಕೆರಳಿಸಿದ್ದ ಸಲ್ಮಾನ್ ಖಾನ್‌ ಪ್ರಕರಣದ ತೀರ್ಪಿನ ಸುದ್ದಿಯೇ ಪ್ರಕಟವಾಗಿದೆ. ದೇಶ ಮತ್ತು ವಿದೇಶದ ಮಾಧ್ಯಮಗಳು ಸಲ್ಮಾನ್‌ ಖಾನ್ ಸುದ್ದಿಯನ್ನು ವಿವರವಾಗಿ ಪ್ರಕಟಿಸಿವೆ. ಭಾರತದ ಬಹುತೇಕ ಪತ್ರಿಕೆಗಳ ಮುಖಪುಟದಲ್ಲಿ ಸಲ್ಮಾನ್ ಜಾಗ ಪಡೆದಿದ್ದಾರೆ. [ಕೋರ್ಟ್ ಏನೇ ಅಂದರೂ ನೀ ನಮ್ಮ ದೇವರು!]

ಸಾಮಾಜಿಕ ಜಾಲತಾಣ, ಪತ್ರಿಕೆ, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸಲ್ಮಾನ್ ಖಾನ್ ಸೆರೆಮನೆಗೆ ಹೋಗುವ ಸುದ್ದಿಯ ಬಗ್ಗೆಯೇ ವಿವರವಾದ ವರದಿಗಳು ಬರುತ್ತಿವೆ. ಬಾಂಬೆ ಹೈಕೋರ್ಟ್‌ ತಾಂತ್ರಿಕ ಕಾರಣಗಳಿಂದಾಗಿ ಎರಡು ದಿನಗಳ ಮಧ್ಯಂತರ ಜಾಮೀನನ್ನು ಸಲ್ಮಾನ್‌ ಖಾನ್‌ಗೆ ನೀಡಿದ್ದು, ತಕ್ಷಣ ಸೆರೆಮನೆ ಸೇರುವ ಸಂಕಷ್ಟದಿಂದ ಸಲ್ಲು ಪಾರಾಗಿದ್ದಾರೆ. [ಗುದ್ದೋಡು ತೀರ್ಪು: ನ್ಯಾಯಾಲಯದ ಒಳಗೆ ಏನಾಯಿತು?]

ಕನ್ನಡದ ದಿನಪತ್ರಿಕೆಗಳಲ್ಲಿಯೂ ಸಲ್ಮಾನ್ ಖಾನ್‌ಗೆ ಜೈಲು ಶಿಕ್ಷೆಯಾದ ಸುದ್ದಿ ವಿವರವಾಗಿ ಪ್ರಕಟವಾಗಿದೆ. 'ಸಲ್ಲುಗೆ 48 ಗಂಟೆ ಸಮಾಧಾನ', '5 ವರ್ಷ ಜೈಲು, 2 ದಿನ ಬೇಲು', 'ಸಲ್ಲು...ಜೈಲು...ಬೇಲು' ಮುಂತಾದ ಶೀರ್ಷಿಕೆಯೊಂದಿಗೆ ಕನ್ನಡದ ಪತ್ರಿಕೆಗಳು ಸಲ್ಲು ಸುದ್ದಿಯನ್ನು ಪ್ರಕಟಿಸಿವೆ. ಯಾವ ಪತ್ರಿಕೆ ಹೆಡ್‌ಲೈನ್ ಹೇಗಿದೆ ನೋಡಿ....

'5 ವರ್ಷ ಜೈಲು, 2 ದಿನ ಬೇಲು'

'5 ವರ್ಷ ಜೈಲು, 2 ದಿನ ಬೇಲು'

ವಿಜಯ ಕರ್ನಾಟಕ '5 ವರ್ಷ ಜೈಲು, 2 ದಿನ ಬೇಲು' ಎಂಬ ಶೀರ್ಪಿಕೆಯೊಂದಿಗೆ ಸಲ್ಮಾನ್‌ ಖಾನ್ ತೀರ್ಪಿನ ಸುದ್ದಿಯನ್ನು ಪ್ರಕಟಿಸಿದೆ. ಬುಧವಾರ ಮುಂಜಾನೆಯಿಂದ ಸಂಜೆಯ ತನಕ ನಡೆದ ಬೆಳವಣಿಗೆಗಳ ಸಮಗ್ರ ಚಿತ್ರಣವನ್ನು ಮುಖಪುಟದಲ್ಲಿ ನೀಡಿದೆ.

'ಸಲ್ಲುಗೆ 48 ಗಂಟೆ ಸಮಾಧಾನ',

'ಸಲ್ಲುಗೆ 48 ಗಂಟೆ ಸಮಾಧಾನ',

ಬಾಂಬೆ ಹೈಕೋರ್ಟ್‌ ಸಲ್ಮಾನ್‌ ಖಾನ್‌ಗೆ 2 ದಿನಗಳ ಮಧ್ಯಂತರ ಜಾಮೀನನ್ನು ನೀಡಿರುವುದನ್ನು ಕನ್ನಡ ಪ್ರಭ ಹೆಡ್‌ಲೈನ್ ಮಾಡಿಕೊಂಡಿದೆ. 'ಸಲ್ಲುಗೆ 48 ಗಂಟೆ ಸಮಾಧಾನ' ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ.

ಎರಡೂ ಆವೃತ್ತಿಗೆ ಎರಡು ಫೋಟೋ

ಎರಡೂ ಆವೃತ್ತಿಗೆ ಎರಡು ಫೋಟೋ

ಉದಯವಾಣಿ ಬೆಂಗಳೂರು ಮತ್ತು ಮಣಿಪಾಲ್ ಅವೃತ್ತಿಗಳಲ್ಲಿ ಸಲ್ಮಾನ್‌ ಖಾನ್ ಬೇರೆ-ಬೇರೆ ಚಿತ್ರಗಳನ್ನು ಬಳಸಿಕೊಂಡು ಸುದ್ದಿಯನ್ನು ಪ್ರಕಟಿಸಿದೆ. 'ಸಲ್ಲು...ಜೈಲು...ಬೇಲು..' ಎಂಬುದು ಎರಡೂ ಆವೃತ್ತಿಯ ಹೆಡ್‌ಲೈನ್ ಆಗಿದೆ.ಇದು ಬೆಂಗಳೂರು ಆವೃತ್ತಿ.

ಸಲ್ಮಾನ್‌ಗೆ 5 ವರ್ಷ ಜೈಲು

ಸಲ್ಮಾನ್‌ಗೆ 5 ವರ್ಷ ಜೈಲು

ಸಂಯುಕ್ತ ಕರ್ನಾಟಕ 'ಸಲ್ಮಾನ್‌ಗೆ 5 ವರ್ಷ ಜೈಲು' ಎಂಬ ಶೀರ್ಷಿಕೆಯಡಿ ಸುಲ್ಲು ಸುದ್ದಿಗಳನ್ನು ಪ್ರಕಟಿಸಿದೆ. ಮುಂಬೈ ಸೆಷೆನ್ಸ್ ಕೋರ್ಟ್‌ಗೆ ಸಲ್ಲು ಹೋರಾಟಗ ತಂದೆ ಬೀಳ್ಕೊಟ್ಟ ಫೋಟೋ ಮುಖಪುಟದಲ್ಲಿದೆ.

ಸಲ್ಲುಗೆ 5 ವರ್ಷ ಜೈಲು

ಸಲ್ಲುಗೆ 5 ವರ್ಷ ಜೈಲು

ಮುಖಪುಟದಲ್ಲಿ ಬೆಂಗಳೂರು ಜಿಲ್ಲಾಧಿಕಾರಿ ವಿ.ಶಂಕರ್ ಸಂದರ್ಶನ ಪ್ರಕಟಿಸಿರುವ ವಿಜಯವಾಣಿ 'ಸಲ್ಲುಗೆ 5 ವರ್ಷ ಜೈಲು' ಎಂಬ ಶೀರ್ಪಿಕೆಯಲ್ಲಿ ಮುಖಪುಟದಲ್ಲಿ ಚಿಕ್ಕ ಸುದ್ದಿಯನ್ನು ಪ್ರಕಟಿಸಿದೆ. ವಿವರವಾದ ವರದಿಗಳನ್ನು 9ನೇ ಪುಟದಲ್ಲಿ ನೀಡಿದೆ.

ಸಲ್ಮಾನ್‌ಗೆ 5 ವರ್ಷ ಜೈಲು

ಸಲ್ಮಾನ್‌ಗೆ 5 ವರ್ಷ ಜೈಲು

'ಸಲ್ಮಾನ್‌ಗೆ 5 ವರ್ಷ ಜೈಲು' ಎಂಬುದು ಬಹುತೇಕ ಕನ್ನಡ ಪತ್ರಿಕೆಗಳ ಶೀರ್ಷಿಕೆಯಾಗಿದೆ. ಪ್ರಜಾವಾಣಿ ಇದೇ ಶೀರ್ಷಿಕೆಯಡಿ ಸಲ್ಲು ಸುದ್ದಿಗಳನ್ನು ಪ್ರಕಟಿಸಿದೆ.

ಸಲ್ಮಾನ್‌ಗೆ 5 ವರ್ಷ ಜೈಲು

ಸಲ್ಮಾನ್‌ಗೆ 5 ವರ್ಷ ಜೈಲು

ಹೊಸದಿಗಂತ 'ಸಲ್ಮಾನ್‌ಗೆ 5 ವರ್ಷ ಜೈಲು' ಎಂಬ ಶೀರ್ಷಿಕೆಯಡಿ ಸಲ್ಲು ಸುದ್ದಿಗಳನ್ನು ಪ್ರಕಟಿಸಿದೆ. ಸಲ್ಲು ಗುದ್ದಿದ ಕಾರಿನ ಫೋಟೋ ಮುಖಪುಟದಲ್ಲಿದೆ.

ಸಲ್ಮಾನ್‌ಗೆ 5 ವರ್ಷ ಜೈಲು ಶಿಕ್ಷೆ

ಸಲ್ಮಾನ್‌ಗೆ 5 ವರ್ಷ ಜೈಲು ಶಿಕ್ಷೆ

ವಾರ್ತಾಭಾರತಿ 'ಸಲ್ಮಾನ್‌ಗೆ 5 ವರ್ಷ ಜೈಲು ಶಿಕ್ಷೆ' ಎಂಬ ಶೀರ್ಷಿಕೆಯಡಿ ಸುದ್ದಿಗಳನ್ನು ಪ್ರಕಟಿಸಿದೆ.

ಉದಯವಾಣಿ ಮಣಿಪಾಲ್ ಆವೃತ್ತಿ

ಉದಯವಾಣಿ ಮಣಿಪಾಲ್ ಆವೃತ್ತಿ

ಉದಯವಾಣಿ ಮಣಿಪಾಲ್ ಅವೃತ್ತಿಯಲ್ಲಿ ಕೋರ್ಟ್‌ಗೆ ಹೊರಟ ಸಲ್ಮಾನ್‌ ಖಾನ್‌ನನ್ನು ತಾಯಿ ಬೀಳ್ಕೊಡುವ ಪೋಟೋವನ್ನು ಹಾಕಿದೆ. 'ಸಲ್ಲು...ಜೈಲು...ಬೇಲು..' ಎಂಬುದು ಹೆಡ್‌ಲೈನ್ ಆಗಿದೆ.

English summary
Mumbai sessions court sentenced Bollywood star Salman Khan to five years jail in 2002 hit-and-run case. Bombay High Court grants two days interim bail. Here is Kannada news paper headlines on Salman Khan verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X