ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಕೇಂದ್ರದಿಂದ 795.54 ಕೋಟಿ ರೂ. ಬರ ಪರಿಹಾರ

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 29: ಕೇಂದ್ರ ಸರಕಾರ ಕರ್ನಾಟಕಕ್ಕೆ ಕೊನೆಗೂ ಒಂದಷ್ಟು ಹಣ ಬಿಡುಗಡೆ ಮಾಡಿದೆ. ಬರಪೀಡಿತ ರಾಜ್ಯಕ್ಕೆ 795.54 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.

ಗೃಹಮಂತ್ರಿ ರಾಜನಾಥ್ ಸಿಂಗ್ ನೇತೃತ್ವದ ಉನ್ನತ ಸಮಿತಿ ರಾಷ್ಟ್ರೀಯ ಬರ ಪರಿಹಾರ ನಿಧಿಯಿಂದ ಕರ್ನಾಟಕಕ್ಕೆ 794.54 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ.

Rs 795.54 crore drought releif fund released to Karnataka

ಈ ಹಿಂದೆ ಕೇಂದ್ರಕ್ಕೆ 4,702 ಕೋಟಿ ಬರಪರಿಹಾರಕ್ಕಾಗಿ ಕರ್ನಾಟಕ ರಾಜ್ಯ ಸರಕಾರ ಬೇಡಿಕೆ ಇಟ್ಟಿತ್ತು. ಈ ಸಂದರ್ಭ ಕೇಂದ್ರ ಸರಕಾರ 1782.44 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಕೈ ತೊಳೆದುಕೊಂಡಿತ್ತು. ಆದರೆ ಇದು ಎಲ್ಲೂ ಸಾಲುವುದಿಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು ಹೆಚ್ಚಿನ ಹಣಕ್ಕಾಗಿ ಒತ್ತಾಯಿಸುತ್ತಲೇ ಬಂದಿದ್ದರು.

ಆದರೆ ಇದೀಗ, "ಒಟ್ಟು 3,310 ಕೋಟಿಗೆ ಕರ್ನಾಟಕ ಸರಕಾರ ಬೇಡಿಕೆ ಇಟ್ಟಿದ್ದರೂ ಕೇವಲ 794.54 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ," ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

English summary
Rs 795.54 crore drought releif fund released to Karnataka. High level committee chaired by Home minister Rajnath Singh approved assistance from NDRF for Karnataka to the tune of Rs 795.54 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X