ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು’ ರಥ ನಿಮ್ಮ ಜಿಲ್ಲೆಗೆ

ರಾಜ್ಯದ ಕಲೆ,ಸಾಹಿತ್ಯ,ಸಂಸ್ಕೃತಿ ಬಿಂಬಿಸುವ‘ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು’ಕನ್ನಡ ರಥಗ'ಳಿಗೆ ಮಂಗಳವಾರ ಸಿಎಂ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿದರು.ನ.2ರಿಂದ11 ರವರೆಗೆ ಮೂರು ಮಾರ್ಗಗಳಾಗಿ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿವೆ.

By Ramesh
|
Google Oneindia Kannada News

ಬೆಂಗಳೂರು,ನವೆಂಬರ್. 02 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಜ್ಯದ ಕಲೆ, ಸಾಹಿತ್ಯ, ಸಂಸ್ಕೃತಿ ಬಿಂಬಿಸುವ 'ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು' ಎಂಬ ಹೆಸರಿನ ಮೂರು ಪ್ರತ್ಯೇಕ 'ಕನ್ನಡ ರಥ'ಗಳು ನವೆಂಬರ್ 2 ರಿಂದ 11 ರವರೆಗೆ ಮೂರು ಮಾರ್ಗಗಳಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿವೆ.

ರಾಜ್ಯವ್ಯಾಪಿ ಸಂಚರಿಸುವ ಮೂರು ವಿಶೇಷ ಕನ್ನಡ ರಥಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವಿಧಾನ ಸೌಧದ ಮುಂಭಾಗದಲ್ಲಿ ಹಸಿರು ನಿಶಾನೆ ತೋರಿದರು. ಕಾವೇರಿ, ಕೃಷ್ಣೆ, ತುಂಗಭದ್ರಾ ಹೆಸರಿನ ಈ ರಥಗಳು ನವೆಂಬರ್ 1 ರಂದು ಬೆಂಗಳೂರಿನಿಂದ ಹೊರಟು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಕನ್ನಡದ ಹಿರಿಮೆ ಗರಿಮೆ ಬಿಂಬಿಸಲಿವೆ. [ಕರ್ನಾಟಕ ಏಕೀಕರಣಕ್ಕೆ 60ರ ಸಂಭ್ರಮ, ರಾಜ್ಯದ ಎಲ್ಲೆಡೆ ಕನ್ನಡ ರಥ]

ವಾತಾ೯ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನವೆಂಬರ್ 1 ರಿಂದ 15 ದಿನಗಳ ಕಾಲ 'ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು' 'ಕನ್ನಡ ರಥ' ವಿಶೇಷ ಪ್ರಚಾರ ಕಾಯ೯ಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಂಡಿದೆ. [ಕನ್ನಡ ನಾಡಗೀತೆ ಹೊಸ ಆವೃತ್ತಿಯ ಸಂಗೀತದಲ್ಲಿ ಕೇಳಿ ಆನಂದಿಸಿ]

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮೀ ನಾರಾಯಣ ಹಾಗೂ ಇಲಾಖೆಯ ನಿರ್ದೇಶಕರಾದ ಎನ್. ಆರ್. ವಿಶುಕುಮಾರ್ ಅವರು ಉಪಸ್ಥಿತರಿದ್ದರು. [ಕನ್ನಡ ರಾಜ್ಯೋತ್ಸವಕ್ಕೆ ನರೇಂದ್ರ ಮೋದಿ ಶುಭಾಶಯ]

ಇನ್ನು ಈ ಕನ್ನಡ ರಥ ಯಾತ್ರೆ ಯಾವ ಜಿಲ್ಲೆಗೆ ಯಾವಾಗ ತಲುಪಲಿದೆ ಎಂಬುವುದನ್ನು ತಿಳಿಯಲು ಮುಂದೆ ಓದಿ.

ಕನ್ನಡ ರಥ ಸಂಚರಿಸುವ ಮಾರ್ಗ-1

ಕನ್ನಡ ರಥ ಸಂಚರಿಸುವ ಮಾರ್ಗ-1

'ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು' ರಥವು ನ. 2 ರಂದು ತುಮಕೂರು, 3 ರಂದು ಚಿತ್ರದುರ್ಗ, 4 ರಂದು ಬಳ್ಳಾರಿ, 5 ರಂದು ಕೊಪ್ಪಳ, 6 ರಂದು ಗದಗ, 7 ರಂದು ಬಾಗಲಕೋಟೆ, 8 ರಂದು ರಾಯಚೂರು, 9 ರಂದು ಯಾದಗಿರಿ, 10 ರಂದು ಕಲಬುರಗಿ, 11 ರಂದು ಬೀದರ್ ಜಿಲ್ಲೆಗಳಲ್ಲಿ ಸಂಚರಿಸಲಿದೆ.

ಕನ್ನಡ ರಥ ಯಾತ್ರೆ ಮಾರ್ಗ-2

ಕನ್ನಡ ರಥ ಯಾತ್ರೆ ಮಾರ್ಗ-2

ರಥವು ನ. 2 ರಂದು ಹಾಸನ, 3 ರಂದು ಚಿಕ್ಕಮಗಳೂರು, 4 ರಂದು ಶಿವಮೊಗ್ಗ, 5 ರಂದು ದಾವಣಗೆರೆ, 6 ರಂದು ಹಾವೇರಿ, 7 ರಂದು ಉತ್ತರಕನ್ನಡ, 8 ರಂದು ಧಾರವಾಡ, 9 ರಂದು ಬೆಳಗಾವಿ, 10 ರಂದು ವಿಜಯಪುರ ಜಿಲ್ಲೆಯಲ್ಲಿ ಸಂಚರಿಸಲಿದೆ.

ಕನ್ನಡ ರಥ ಮಾರ್ಗ-3

ಕನ್ನಡ ರಥ ಮಾರ್ಗ-3

ರಥವು ನ. 2 ರಂದು ಕೋಲಾರ, 3 ರಂದು ಚಿಕ್ಕಬಳ್ಳಾಪುರ, 4 ರಂದು ರಾಮನಗರ, 5 ರಂದು ಮಂಡ್ಯ, 6 ರಂದು ಚಾಮರಾಜನಗರ, 7 ರಂದು ಮೈಸೂರು, 8 ರಂದು ಮಡಿಕೇರಿ, 9 ರಂದು ಮಂಗಳೂರು, ನ. 10 ರಂದು ಉಡುಪಿ ಜಿಲ್ಲೆಗಳಲ್ಲಿ ಸಂಚರಿಸಲಿದೆ.

‘ಗಾನ-ಯಾನ’ ಕಾರ್ಯಕ್ರಮ

‘ಗಾನ-ಯಾನ’ ಕಾರ್ಯಕ್ರಮ

'ಗಾನ-ಯಾನ' ಕನ್ನಡ ರಥವು ತಂಗಲಿರುವ ಜಿಲ್ಲೆಗಳ ಜಿಲ್ಲಾ ಕೇಂದ್ರದಲ್ಲಿ, ಕನ್ನಡ ಏಕೀಕರಣವನ್ನು ನೆನಪಿಸುವ ರೀತಿಯಲ್ಲಿ ರಾಜ್ಯದ ಖ್ಯಾತ ಗಾಯಕರುಗಳಿಂದ ಕನ್ನಡ ಹಾಡುಗಳನ್ನು ಪ್ರಸ್ತುತಪಡಿಸುವ 'ಗಾನ-ಯಾನ' ಕಾರ್ಯಕ್ರಮ ಸಹ ಆಯಾ ಆಯಾ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಯೋಜಿಸಲಾಗಿದೆ.

ಅರ್ಥಪೂರ್ಣವಾಗಿ ಆಚರಿಸುವಂತೆ ಕೋರಿಕೆ

ಅರ್ಥಪೂರ್ಣವಾಗಿ ಆಚರಿಸುವಂತೆ ಕೋರಿಕೆ

ಕನ್ನಡ ರಥ ಆಗಮಿಸುವ ಜಿಲ್ಲೆಗಳಲ್ಲಿ, ಆಯಾ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸ್ಥಳೀಯ ಸಂಘ ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು, ರಥವನ್ನು ಸ್ವಾಗತಿಸಿ, ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್ ಅವರು ಕೋರಿದ್ದಾರೆ.

English summary
Tableaux celebrating the 60 years of the unification of Karnataka state. The "Ekeekarana Tableaux" flagged off by Chief Minister Siddaramaiah on November 02 in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X