ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಿದಾದ ಕೆಆರ್‍ಎಸ್, ಮಂಡ್ಯದಲ್ಲಿ ಬತ್ತಿದ ನದಿ, ಕೆರೆಗಳು

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಮೇ 15: ಕಾವೇರಿ ಕಣಿವೆ ವರುಣನ ಅವಕೃಪೆಗೊಳಗಾಗಿ ವಾಡಿಕೆಯ ಮಳೆಯಾಗದೆ ಕೆಆರ್‍ಎಸ್ ಭರ್ತಿಯಾಗದೆ ಹೋಗಿದ್ದರಿಂದ ಅದರ ಪರಿಣಾಮ ಮಂಡ್ಯ ಜಿಲ್ಲೆಗಾಗಿದೆ.

ಸದಾ ಹಸಿರಿನಿಂದ ಕಂಗೊಳಿಸುತ್ತಾ ರೈತರ ಬದುಕನ್ನು ಹಸನುಗೊಳಿಸಬೇಕಾಗಿದ್ದ ಜಮೀನುಗಳಲ್ಲಿ ಬರದ ಛಾಯೆ ಕಂಗೊಳಿಸುತ್ತಿದೆ. ಕೆರೆಗಳು ಒಣಗಿವೆ ನದಿಗಳು ಬತ್ತಿವೆ. [ಒಣಗಿದ ಕೆಆರ್‌ಎಸ್, ಆತಂಕದಲ್ಲಿ ಮಂಡ್ಯದ ಅನ್ನದಾತ]

ಹಣದ ವ್ಯಾಮೋಹಕ್ಕೆ ಬಿದ್ದ ಮನುಷ್ಯ ನದಿಯ ಒಡಲನ್ನು ಬಗೆದು ಮರಳನ್ನು ಹೊರತೆಗೆದು ಮಾರಾಟ ಮಾಡಿದ್ದರ ಪರಿಣಾಮವೇ ನದಿಗಳು ಒಣಗಿವೆ. ಅಷ್ಟೇ ಅಲ್ಲ ಅಂತರ್ಜಲದ ಕೊರತೆಯಿಂದ ಸುಮಾರು 159 ಕೆರೆಗಳು ಒಣಗಿ ನಿಂತಿವೆ. [ಹಿನ್ನೀರಿನಲ್ಲಿ ಹಳೆ ದೇಗುಲಗಳು ಪ್ರತ್ಯಕ್ಷ]

Rivers and Lakes dried up in Mandya district

ಹಾಗೆ ನೋಡಿದರೆ ಮಂಡ್ಯದಲ್ಲಿ ಕಾವೇರಿ ಸೇರಿ ಐದು ನದಿಗಳು ಹರಿಯುತ್ತವೆ. ಅವುಗಳೆಂದರೆ ವೀರ ವೈಷ್ಣವಿ, ಶಿಂಷಾ, ಲೋಕಪಾವನಿ ಮತ್ತು ಹೇಮಾವತಿ ಇವು ಕಾವೇರಿಗೆ ಉಪನದಿಗಳು. ಮೊದಲೆಲ್ಲ ಈ ನದಿಗಳು ಬೇಸಿಗೆಯಲ್ಲಿ ಬತ್ತದೆ ಹರಿಯುತ್ತಿದ್ದವು. ಈ ಬಾರಿ ಈ ನದಿಗಳು ಒಣಗಿ ನಿಂತಿವೆ. [ಬಿರು ಬೇಸಿಗೆ, ಆಟದ ಮೈದಾನವಾದ ಕೆಆರ್ ಎಸ್ ಜಲಾಶಯ!]

ಕಾವೇರಿಯು ಶ್ರೀರಂಗಪಟ್ಟಣ, ಪಾಂಡವಪುರ ಮತ್ತು ಮಳವಳ್ಳಿ ತಾಲೂಕುಗಳಲ್ಲಿನ ಸಹಸ್ರಾರು ಹೆಕ್ಟೇರ್ ಪ್ರದೇಶಗಳಿಗೆ ನೀರೊದಗಿಸಿದರೆ, ನಾಗಮಂಗಲ, ಮದ್ದೂರು ಮತ್ತು ಮಳವಳ್ಳಿಯ ಜಮೀನುಗಳಿಗೆ ಶಿಂಷೆ ಅನ್ನದಾತೆ.[ಸಮೃದ್ಧ ಮಳೆಗಾಗಿ ತಲಕಾವೇರಿಯಲ್ಲಿ ವಿಶೇಷ ಪೂಜೆ]

ಉಳಿದಂತೆ ಕೆ.ಆರ್.ಪೇಟೆ ಮತ್ತು ನಾಗಮಂಗಲದಲ್ಲಿ ಹೇಮಾವತಿ, ವೀರ ವೈಷ್ಣವಿ ನಾಗಮಂಗಲ ಮತ್ತು ಮದ್ದೂರು ವ್ಯಾಪ್ತಿಗೆ, ಲೋಕಪಾವನಿಯು ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣದಲ್ಲಿ ಹರಿದು ರೈತರ ಬದುಕನ್ನು ಹಸನುಗೊಳಿಸುತ್ತಿದ್ದವು.

Rivers and Lakes dried up in Mandya district

ಈ ನದಿಗಳೆಲ್ಲವೂ ತುಂಬಿ ಹರಿಯುತ್ತಿದ್ದಾಗ ಮಂಡ್ಯ ಹಸಿರಿನಿಂದ ನಳನಳಿಸುತ್ತಿತ್ತು. ಈ ಬಾರಿ ವೀರ ವೈಷ್ಣವಿ, ಲೋಕಪಾವನಿ ನದಿಗಳು ಬತ್ತಿವೆ. [ಬಕ್ಕ ಬರಿದಾದ ಕೆಆರ್‌ಎಸ್, ಕೊಡಗಿನಲ್ಲಿ ಮಳೆ ಸಿಂಚನ]

ಇದಕ್ಕೆಲ್ಲ ಈ ನದಿಗಳ ಒಡಲು ಬಗೆದು ಹೊರಕ್ಕೆ ಮರಳು ತೆಗೆಯುತ್ತಿರುವುದೇ ಕಾರಣ ಎಂದರೆ ತಪ್ಪಾಗಲಾರದು. ಕೆಲವರಿಗೆ ನದಿ ಬತ್ತಿರುವುದು ಇನ್ನಷ್ಟು ಅನುಕೂಲವೇ ಆಗಿದ್ದು, ಫಿಲ್ಟರ್ ಮರಳು ದಂಧೆಗೆ ಇದರಿಂದ ಸಹಕಾರಿಯಾಗಿದೆ.

ಪ್ರಸಕ್ತ ವರ್ಷದ ಬರ ಜನತೆಗೆ ತಕ್ಕ ಪಾಠ ಕಲಿಸಿದೆ. ಇನ್ನು ಮುಂದೆಯಾದರೂ ಜನ ಎಚ್ಚೆತ್ತುಕೊಂಡು ನದಿಯಿಂದ ಮರಳು ತೆಗೆಯುವುದನ್ನು ತಡೆಗಟ್ಟಬೇಕು. ಅಷ್ಟೇ ಅಲ್ಲ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನದಿ ನೀರನ್ನು ಸುತ್ತಮುತ್ತಲ ಕೆರೆಗಳಿಗೆ ತುಂಬಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವಂತೆ ಮಾಡಬೇಕು. ಆದರೆ ಅದು ಸಾಧ್ಯವಾಗುತ್ತಾ ಎನ್ನುವುದೇ ಸದ್ಯದ ಪ್ರಶ್ನೆಯಾಗಿದೆ.

English summary
As the water at the Krishna Raja Sagara reserviour drying up, rivers and lakes also dried up in Mandya district causing the adverse impact on farming activities, livestock in the region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X