ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ 9ರೊಂದಿಗೆ ಬಿಎಸ್ ವೈ ನಂಟೇನು?

|
Google Oneindia Kannada News

ಬೆಂಗಳೂರು, ಡಿ. 1 : ಡಿಸೆಂಬರ್ 9 ಕ್ಕೂ ಮಾಜಿ ಸಿಎಂ, ಬಿಜೆಪಿ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೂ ಎನೋ ಸಂಬಂಧವಿದೆ. ಇದಕ್ಕೆ ಮತ್ತಷ್ಟು ಪುರಾವೆಗಳು ಸಿಗಬೇಕೆಂದರೆ ಎರಡು ವರ್ಷದ ಹಿಂದೆ ಹೋಗಬೇಕು.

ಬಿಜೆಪಿಯಿಂದ ಸಿಡಿದೆದ್ದ ಬಿಎಸ್ ವೈ 2012 ರ ಡಿಸೆಂಬರ್ 9 ರಂದು ಕರ್ನಾಟಕ ಜನತಾ ಪಕ್ಷ ಕಟ್ಟಿದ್ದರು. ಹಾವೇರಿಯಲ್ಲಿ ಭರ್ಜರಿ ಸಮಾವೇಶ ಮಾಡಿ ಮಾತೃ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಪೆಟ್ಟು ನೀಡುವ ಮಾತುಗಳನ್ನಾಡಿದ್ದರು.[ಬಿಜೆಪಿಯಿಂದ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ]

ನಂತರ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಡಯೂರಪ್ಪಗೆ ಸಿಕ್ಕಿದ್ದು ಕೇವಲ 'ಆರು ತೆಂಗಿನಕಾಯಿ'. ಬಿಜೆಪಿ ಒಡೆದ ಮನೆಯಾಗಿದ್ದನ್ನು ತನ್ನ ಲಾಭಕ್ಕೆ ಬಳಸಿಕೊಂಡ ಕಾಂಗ್ರೆಸ್ ಅಧಿಕಾರದ ಗದ್ದುಗೆ ಮೇಲೆ ಪ್ರತಿಷ್ಠಾಪನೆಗೊಂಡಿದ್ದು ಇತಿಹಾಸ.

ಕಳೆದ ಅಂದರೆ 2013 ಡಿಸೆಂಬರ್ 9ರ ವೇಳೆಗೆ ಬಿಎಸ್ ವೈ ಮತ್ತೆ ಸುದ್ದಿಯಲ್ಲಿದ್ದರು. ಕಟ್ಟಿದ್ದ ಕೆಜೆಪಿಗೆ ಕರ್ನಾಟಕದ ಜನ ಮಣೆ ಹಾಕುವುದಿಲ್ಲ ಎಂಬುದು ಅರಿವಾಗಿತ್ತು. ಇತ್ತ ಲೋಕಸಭಾ ಚುನಾವಣೆಯೂ ಎದುರಾಗಿತ್ತು. ಎಲ್ಲವನ್ನು ಮನಗಂಡ ಬಿಎಸ್ ವೈ ಮತ್ತೆ ಬಿಜೆಪಿಗೆ ಹಿಂದಿರುಗಿದರು.[ಯಡಿಯೂರಪ್ಪಗೆ ಮತ್ತೆ ಶನಿಕಾಟ]

bsy 3

ಈಗ ಮತ್ತೆ ಡಿಸೆಂಬರ್ 9 ಎದುರಾಗಿದೆ. ಯಡಿಯೂರಪ್ಪ ಸುದ್ದಿಯಲ್ಲಿದ್ದಾರೆ. 50 ಸಾವಿರ ಬಿಜೆಪಿ ಕಾರ್ಯಕರ್ತರೊಂದಿಗೆ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ.

ತೀರ್ಥಹಳ್ಳಿ ನಂದಿತಾ ಸಾವಿನ ವೇಳೆ ಸ್ವಲ್ಪ ಮಾತಾಡಿದ್ದ ಯಡಿಯೂರಪ್ಪ ಸುಮ್ಮನೆ ಕುಳಿತುಕೊಂಡಿದ್ದರು. ಆದರೆ ಇದೀಗ ಡಿಸೆಂಬರ್ 9 ಬರುತ್ತಿದ್ದಂತೆ ಥಟ್ಟನೆ ಎದ್ದು ನಿಂತಿದ್ದಾರೆ.

ಡಿಸೆಂಬರ್ 9 ಸೋನಿಯಾ ಹುಟ್ಟುಹಬ್ಬ
ಮತ್ತೊಂದು ವಿಷಯ ಗಮನಿಸಬೇಕಾಗಿದೆ. ಡಿಸೆಂಬರ್ 9 ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹುಟ್ಟುಹಬ್ಬ. ಯಡಿಯೂರಪ್ಪ ಕೆಜೆಪಿ ಕಟ್ಟಿದ್ದ ವೇಳೆ ಕೆಲ ಬಿಜೆಪಿ ನಾಯಕರು ಇದನ್ನಿಟ್ಟುಕೊಂಡೆ ಕುಹಕವಾಡಿದ್ದರು.

English summary
Karnataka BJP leader, former Chief Minister B S Yeddyurappas connection with Date - 9 December. Read on..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X