ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯಾಧೀಕರಣದ ತೀರ್ಪಿನಿಂದ ಏಳುವ ಪ್ರಶ್ನೆಗಳು.?

By ಮಹೇಶ್ ರುದ್ರಗೌಡರ
|
Google Oneindia Kannada News

ಮದ್ಯಮ/ಬೃಹತ್ ನೀರಾವರಿ ಯೋಜನೆಗಳ ಮೂಲ ಉದ್ದೇಶ ಹರಿಯುವ ನೀರನ್ನು ಆಣೆಕಟ್ಟೆ ಕಟ್ಟಿ ತಡೆಹಿಡಿದು ಗುರುತ್ವಾಕರ್ಷಣ ಅಥವಾ ಏತ ನೀರಾವರಿ ಮಾಡಿ ಕಾಲುವೆ ಮೂಲಕ ಇತರ ಪ್ರದೇಶಗಳಿಗೆ ನೀರು ವರ್ಗಾಯಿಸುವುದು.

ಕಳಸಾ ಬಂಡೂರಿ ಯೋಜನೆಯಲ್ಲಿ ಬೇರೆ ಕಣಿವೆಗೆ ಅಂದರೆ ಮಹದಾಯಿ ಕಣಿವೆಯಿಂದ ಮಲಪ್ರಭಾ ಕಣಿವೆಗೆ ನೀರನ್ನು ವರ್ಗಾಯಿಸುವುದು ಬಿಟ್ಟರೆ ಇದು ಎಲ್ಲ ನೀರಾವರಿ ಯೋಜನೆ ತರದ ಯೋಜನೆಯೇ ಆಗಿದೆ.
ಇನ್ನು, ಪರಿಸರದ ಅಸಮತೋಲನವನ್ನು ತಡೆಯಲು ಮತ್ತು ನೀರಿನ ಚಕ್ರವನ್ನು ಕಾಪಾಡಿಕೊಂಡು ಹೋಗಲು ನದಿ ನೀರು ಸಮುದ್ರ ಸೇರಬೇಕು ಎಂಬುದನ್ನು ಒಪ್ಪಿಕೊಂಡರೂ ನದಿಯಲ್ಲಿ ಹುಟ್ಟುವ ಒಟ್ಟು ಪ್ರಮಾಣದ ನೀರಿನಲ್ಲಿ ಕನಿಷ್ಟ ಹರಿವನ್ನು ಹೊರತುಪಡಿಸಿ ಉಳಿದ ನೀರನ್ನು ಬಳಸಿಕೊಳ್ಳಬಹುದು. ಆದರೆ ನದಿ ಹರಿವನ್ನು ತಡೆಯದೇ, ಕಾಮಗಾರಿ ನಡೆಸದೇ ಲಭ್ಯವಿರುವ ನೀರಿನ ಬಳಕೆ ಹೇಗೆ ಸಾದ್ಯ?

The Mahadayi Water Disputes Tribunal has rejected Karnataka's plea to divert 7.56 TMC water from the Mahadayi basin to Malaprabha river. Know why the interim plea got rejected.

ಮಹದಾಯಿ ಯೋಜನೆಗೆ ಶಾಶ್ವತ ಕಾಮಗಾರಿ ಬೇಕಾಗಿಲ್ಲ ಎಂದು ಕರ್ನಾಟಕ ವಾದ ಮಾಡಿದ್ದರೆ ಅದು ತಪ್ಪು ನಿರ್ದಾರವಲ್ಲವೇ.? ಅಣೆಕಟ್ಟೆ ನಿರ್ಮಾಣ ತಾತ್ಕಾಲಿಕ ಕಾಮಗಾರಿ ಹೇಗೆ ಆಗುತ್ತದೆ.? ಮುಂದೆ ಅಂತಿಮ ತೀರ್ಪಿನಲ್ಲಿ 45 ಟಿಎಂಸಿ ನೀರಿನ ಪಾಲು ಹೊಂದಿರುವ ಕರ್ನಾಟಕಕ್ಕೆ ಒಂದಿಷ್ಟು ನೀರು ಹಂಚಿಕೆಯಾದರೇ ಶಾಶ್ವತ ಕಾಮಗಾರಿಯನ್ನು ಮಾಡದೇ ಆ ನೀರನ್ನು ಹೇಗೆ ಬಳಸಿಕೊಳ್ಳುವುದು.?

ಇನ್ನು, ಅಂತರ್ ಕಣಿವೆ ನೀರು ವರ್ಗಾವಣೆ ಯೋಜನೆ ಇದು ಮೊದಲೇನಲ್ಲ. ತೆಲುಗು ಗಂಗಾ ಯೋಜನೆಯಲ್ಲಿ ಕೃಷ್ಣಾ ಕಣಿವೆಯಿಂದ ಪೆನ್ನಾರ್ ಕಣಿವೆ ಮೂಲಕ 406 ಕಿ.ಮೀ ದೂರದ ಚೆನ್ನೈ ನಗರಕ್ಕೆ 5 ಟಿ.ಎಂ.ಸಿ ಕುಡಿಯುವ ನೀರು ಒದಗಿಸಲಾಗಿದೆ. ಇದು ಕೂಡ ಅಂತರ್ ಕಣಿವೆ ನೀರು ವರ್ಗಾಯಿಸುವ ಕುಡಿಯುವ ನೀರಿನ ಯೋಜನೆ.

ಕೃಷ್ಣಾ ನ್ಯಾಯಾದೀಕರಣದ ಪ್ರತಿವಾದಿ ರಾಜ್ಯವೂ ಅಲ್ಲದ ತಮಿಳುನಾಡಿನ ಕುಡಿಯುವ ನೀರಿನ ಯೋಜನೆಗೆ ಅನುಮತಿ ಸಿಕ್ಕಿರುವಾಗ ತನ್ನ ರಾಜ್ಯದಲ್ಲೇ ಹರಿಯುವ ಮಹದಾಯಿ ನೀರನ್ನು ಕುಡಿಯುವ ನೀರಿನ ಯೋಜನೆಗೆ ಹತ್ತಾರು ಕಿ.ಮೀ ನೀರು ವರ್ಗಾಯಿಸಿ ಬಳಸಿಕೊಳ್ಳುವ ಹಕ್ಕು ಕರ್ನಾಟಕಕ್ಕಿಲ್ಲವೇ.? ನ್ಯಾಯಾದೀಕರಣದ ಪಾರದರ್ಶಕತೆ ಪ್ರಶ್ನೆ ಇಲ್ಲಿ ಏಳುವುದಿಲ್ಲವೇ.?

English summary
The Mahadayi Water Disputes Tribunal has rejected Karnataka's plea to divert 7.56 TMC water from the Mahadayi basin to Malaprabha river. Know why the interim plea got rejected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X