ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿ 26ಕ್ಕೆ ರಾಮನಗರದಲ್ಲಿ 'ಜಲಾಂದೋಲನ' ಮ್ಯಾರಥಾನ್

ನೀರಿನ ಪರಿಣಾಮಕಾರಿ ಬಳಕೆ ಹಾಗೂ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಫೆಬ್ರವರಿ 26ರಂದು ರಾಮನಗರ ಜಿಲ್ಲಾಡಳಿತದಿಂದ ಮ್ಯಾರಥಾನ್ ಆಯೋಜಿಸಲಾಗಿದೆ. ಅಂದಹಾಗೆ ಈ ವರ್ಷ ರಾಮನಗರ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮಳೆಯಾಗಿದೆ

By ವಿಕ್ಕಿ
|
Google Oneindia Kannada News

ರಾಮನಗರ, ಫೆಬ್ರವರಿ 23: ಜಲಾಂದೋಲನ ಅಭಿಯಾನದ ಭಾಗವಾಗಿ ರಾಮನಗರ ಜಿಲ್ಲಾಡಳಿತದಿಂದ ಮ್ಯಾರಥಾನ್ ಆಯೋಜಿಸಲು ತೀರ್ಮಾನಿಸಲಾಗಿದೆ. ನೀರಿನ ಸಂರಕ್ಷಣೆ ಹಾಗೂ ಪರಿಣಾಮಕಾರಿ ನೀರು ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಕಾರಣದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

2016-17ರಲ್ಲಿ ರಾಮನಗರ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದ್ದು, ಇದರಿಂದ ನೀರಿನ ಸಮಸ್ಯೆ ತಾರಕಕ್ಕೇರಿದೆ. "ರಾಮನಗರ ಜಿಲ್ಲೆಯಾದ್ಯಂತ ನೀರಿನ ಸಂರಕ್ಷಣೆ ಹಾಗೂ ಪರಿಣಾಮಕಾರಿ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ಬಿ.ಆರ್.ಮಮತಾ ತಿಳಿಸಿದ್ದಾರೆ.[ಬಕೆಟ್ ನೀರಲ್ಲಿ ಸ್ನಾನ ಮಾಡಿ, ವಾರಕ್ಕೊಮ್ಮೆ ಗಾಡಿ ತೊಳೀರಿ...]

Ramnagara Marathon on Feb 26 to create water conservation awareness

ಬಾಷ್ ಫೌಂಡೇಷನ್, ಬಿಡದಿ ಕೈಗಾರಿಕಾ ಒಕ್ಕೂಟ ಮತ್ತು ರೋಟರಿ ಸಿಲ್ಕ್ ಸಹಯೋಗದಲ್ಲಿ ಜಿಲ್ಲಾಡಳಿತವು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇನ್ನು ಮ್ಯಾರಥಾನ್ ಅನ್ನು ಫೆಬ್ರವರಿ 26ರಂದು ರಾಮನಗರ ಜಿಲ್ಲಾಡಳಿತವು ಆಯೋಜಿಸಿದ್ದು, ಇದಕ್ಕೆ ಯೆಲ್ಲೋ ಮತ್ತು ರೆಡ್ ಫೌಂಡೇಷನ್ ಆಫ್ ರಾಮನಗರದ ಸಹಯೋಗವಿದೆ.[ಕೆಆರೆಸ್ ನಲ್ಲಿ ಕಾಣುತ್ತಿದೆ ನೆಲ, ಬೆಂಗಳೂರಿಗರ ಪಾಲಿಗೆ ಕೆಟ್ಟಕಾಲ]

ಜಿಲ್ಲಾಡಳಿತವು ಈಗಾಗಲೇ ಮಾಧ್ಯಮ ಜಲಾಂದೋಲನ, ಕೃಷಿ ಜಲಾಂದೋಲನ, ಶಿಕ್ಷಣ ಜಲಾಂದೋಲನ ಮತ್ತು ಮಹಿಳಾ ಜಲಾಂದೋಲನ ಎಂಬ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ.

English summary
The district administration of Ramnagara in Karnataka has decided to conduct a marathon on February 26th as part of the 'jalaandolana,' campaign, an initiative to spread awareness about water conservation and efficient water management.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X