ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಭಾಪುರಿ ಶ್ರೀಗಳ ಈ ವರ್ಷದ ದಸರಾ ದರ್ಬಾರ್ ಕಡೂರಿನಲ್ಲಿ

|
Google Oneindia Kannada News

ಕಡೂರು, ಮೇ 29: ರಂಭಾಪುರಿ ಸ್ವಾಮೀಜಿಯ ಈ ವರ್ಷದ ದಸರಾ ದರ್ಬಾರ್ ಕಡೂರಿನಲ್ಲಿ ನಡೆಯಲಿದೆ. ಎಲ್ಲ ಸಮುದಾಯದವರ ಸಹಕಾರ ಪಡೆದು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದಕ್ಕಾಗಿ ಎಲ್ಲ ಸಿದ್ಧತೆ ಆರಂಭವಾಗಿದೆ ಎಂದು ಶಾಸಕ ವೈಎಸ್ ವಿ ದತ್ತ ಅವರು ಹೇಳಿದ್ದಾರೆ.

ಪ್ರತಿ ವರ್ಷವೂ ಆಶ್ವೀಜ ಮಾಸದಲ್ಲಿ ದಸರಾ ದರ್ಬಾರ್ ಉತ್ಸವ ನಡೆಯುತ್ತದೆ. ಅದೇ ರೀತಿ ಈ ವರ್ಷ ಕೂಡ ನಡೆಯಲಿದೆ. ಸೆಪ್ಟೆಂಬರ್ ನಲ್ಲಿ ಈ ಬಾರಿ ಆಶ್ವೀಜ ಮಾಸ ಬರಲಿದ್ದು, ಆ ತಿಂಗಳ ಇಪ್ಪತ್ತನೇ ತಾರೀಕಿನಿಂದ ಹನ್ನೊಂದು ದಿನಗಳಗಳ ಕಾಲ ಕಾರ್ಯಕ್ರಮವು ನಡೆಯಲಿದೆ.[ರಾಜಕಾರಣಿಗಳಿಂದ ವೀರಶೈವ ಧರ್ಮದಲ್ಲಿ ಒಡಕು: ರಂಭಾಪುರಿ ಶ್ರೀ]

Rambhapuri Seer Dasara Darbar In Kadur

ರಂಭಾಪುರಿ ಸ್ವಾಮೀಜಿ ಪುರಪ್ರವೇಶದೊಂದಿಗೆ ದಸರಾ ದರ್ಬಾರ್ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಆ ನಂತರ ಶಮೀ ಪೂಜೆಯೊಂದಿಗೆ ಉತ್ಸವ ಸಮಾಪ್ತಿಯಾಗುತ್ತದೆ. ಈ ಕಾರ್ಯಕ್ರಮದ ವ್ಯವಸ್ಥೆ ಮಾಡಲು ಉಪಸಮಿತಿಗಳ ರಚನೆಯನ್ನು ಮಾಡಬೇಕಿದ್ದು, ಜೂನ್ ಆರರಂದು ಕಡೂರಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ರಂಭಾಪುರಿ ಶ್ರೀಗಳ ಸಾನ್ನಿಧ್ಯದಲ್ಲೇ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ ಎಂದು ದತ್ತ ತಿಳಿಸಿದ್ದಾರೆ.

English summary
Rambhapuri Seer Dasara Darbar In Kadur, starts from September 20th. It will be 11 day celebration, said by MLA YSV Datta in Kadur, Chikkamagalur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X