ರಾಮನಗರ-ಚನ್ನಪಟ್ಟಣ ನಗರ ಸಾರಿಗೆ ಬಸ್‌ಗೆ ಚಾಲನೆ

Posted By:
Subscribe to Oneindia Kannada

ರಾಮನಗರ, ಆಗಸ್ಟ್ 24 : ರಾಮನಗರ ಹಾಗೂ ಚನ್ನಪಟ್ಟಣ ಜನರ ಬಹುದಿನದ ಬೇಡಿಕೆ ಈಡೇರಿದೆ. ನಗರ ಬಸ್ ಸಂಚಾರ ಸೇವೆ ಆರಂಭವಾಗಿದೆ. ರಾಮಗರ ಬಸ್ ಡಿಪೋಗೆ ಒಟ್ಟು 10 ಬಸ್ಸುಗಳು ಸೇರ್ಪಡೆಗೊಂಡಿವೆ.

ಜೆ-ನರ್ಮ್‌ ಯೋಜನೆ ಅಡಿ ಕರ್ನಾಟಕ ಸರ್ಕಾರ ಅವಳಿ ನಗರಕ್ಕೆ 10 ಬಸ್ಸುಗಳನ್ನು ನೀಡಿದ್ದು, ಶುಕ್ರವಾರದಿಂದ ಬಸ್ಸುಗಳು ಸಂಚಾರ ಆರಂಭಿಸಿವೆ. ಹಸಿರು ಬಣ್ಣ ಹೊಂದಿರುವ ಈ ಬಸ್ಸುಗಳನ್ನು ನಗರ ಸಾರಿಗೆಯ ವಿನ್ಯಾಸಕ್ಕೆ ತಕ್ಕಂತೆ ರೂಪಿಸಲಾಗಿದೆ.[ಸಿದ್ದಗಂಗಾ ನಗರ ಸಾರಿಗೆಗೆ 32 ಬಸ್ ಸೇರ್ಪಡೆ]

Ramanagara-Channapatna city bus service begins

ಸದ್ಯ, ಚನ್ನಪಟ್ಟಣ ಹಾಗೂ ರಾಮನಗರ ನಡುವೆ ನಗರ ಸಾರಿಗೆ ಬಸ್ಸುಗಳು ಸಂಚಾರ ನಡೆಸುತ್ತಿವೆ. ಇದರಿಂದಾಗಿ ಉಭಯ ನಗರಗಳ ನಡುವೆ ಸಂಚಾರ ನಡೆಸುವ ಜನರಿಗೆ ಹೆಚ್ಚು ಅನುಕೂಲವಾಗಿದೆ. ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್‌ ನಿಲುಗಡೆಗಾಗಿ ಪರದಾಡುವುದು ತಪ್ಪಿದೆ.[ಜೆ ನರ್ಮ್: ಮಂಗಳೂರು, ಉಡುಪಿಗೆ 65 ಅತ್ಯಾಧುನಿಕ ಬಸ್]

ರಾಮನಗರದಿಂದ ಗೌಸಿಯಾ ಇಂಜಿನಿಯರಿಂಗ್ ಕಾಲೇಜಿನವರೆಗೂ ಬಸ್‌ ಸೇವೆಯನ್ನು ವಿಸ್ತರಿಸಲಾಗಿದೆ. ಇದರಿಂದ ಜೂನಿಯರ್‌ ಕಾಲೇಜು, ಪದವಿ ಕಾಲೇಜು, ಐಟಿಐ ಹಾಗೂ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಅಂತೆಯೇ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಬಳಿ ನಿಲುಗಡೆಗೂ ವ್ಯವಸ್ಥೆ ಕಲ್ಪಿಸಲಾಗಿದೆ.[ಹೊಸ 241 ಟಾಟಾ ಬಸ್ ಗಳಿಗೆ ಸಿದ್ದರಾಮಯ್ಯರಿಂದ ಚಾಲನೆ]

ಈ ನಗರ ಸಾರಿಗೆ ಬಸ್ಸುಗಳು ಸುಮಾರು 30 ಆಸನ ಸಾಮರ್ಥ್ಯವನ್ನು ಹೊಂದಿವೆ. ಆಧುನಿಕ ಸಂವಹನ ಸಾಧನ, ಸ್ವಯಂಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ, ಪ್ರಯಾಣಿಕರಿಗೆ ನಿಲುಗಡೆ ಕುರಿತು ಮಾಹಿತಿ ನೀಡುವ ಡಿಜಿಟಲ್‌ ಬೋರ್ಡ್‌, ಸಿಸಿಟಿವಿ ಕ್ಯಾಮೆರಾಗಳನ್ನು ಬಸ್ ಒಳಗೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
KSRTC has started city bus service from Ramanagara to Channapatna. New bus service inaugurated on August 19, 2016.
Please Wait while comments are loading...