ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಚಂದ್ರಾಪುರ ಮಠದಿಂದ 550 ಟನ್ ಮೇವು ಪೂರೈಕೆ

ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಹಸುಗಳು ಮೇವಿಲ್ಲದೆ ಸಾಯುತ್ತಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾಮಚಂದ್ರಾಪುರ ಮಠ ಮೇವು ಪೂರೈಕೆಯ ಘೋಷಣೆಯನ್ನು ಮಾಡಿದ್ದು, ಇದುವರೆಗೆ ಮಠದ ವತಿಯಿಂದ 550 ಟನ್ ಮೇವು ಪೂರೈಕೆಯಾಗಿದೆ.

By Balaraj Tantry
|
Google Oneindia Kannada News

ಕೊಳ್ಳೇಗಾಲ, ಏ 23: ತೀವ್ರವಾದ ಬರಗಾಲ ಹಾಗೂ ಅರಣ್ಯದಲ್ಲಿ ದೊಡ್ಡಿ ಹಾಕಲು ಬಿಡದ ಕಾರಣ ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಹಸುಗಳು ಮೇವಿಲ್ಲದೆ ಸಾಯುತ್ತಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾಮಚಂದ್ರಾಪುರ ಮಠ ಮೇವು ಪೂರೈಕೆಯ ಘೋಷಣೆಯನ್ನು ಮಾಡಿದೆ.

ಮಠದ ವತಿಯಿಂದ ಇದುವರೆಗೆ ಈಗಾಗಲೇ 550 ಟನ್ ಮೇವು ಪೂರೈಕೆಯಾಗಿದೆ. ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಕೌದಳ್ಳಿ, ಎರಂಬಾಡಿ, ಕೆವಿಎಂ ದೊಡ್ಡಿ, ಎಂ ಟಿ ದೊಡ್ಡಿ, ಪಚ್ಚೆದೊಡ್ಡಿ, ಮೀಣ್ಯಂ, ಗುಂಡಾಪುರ, ಚೆನ್ನೂರು, ಚೆಂಗಡಿ, ತೋಕರೆ, ದೊಡ್ಡಾಣಿ, ಪುದುನಗರ, ನಾಲರೋಡ್ ಸೇರಿ 13 ಕಡೆಯಲ್ಲಿ ಮೇವು ವಿತರಣಾ ಕೇಂದ್ರಗಳನ್ನು ಮಠದ ವತಿಯಿಂದ ವಿವಿಧ ಸ್ಥರದಲ್ಲಿ ನಡೆಸಲಾಗುತ್ತಿದೆ. (ಮೇವು ಒದಗಿಸಲಾಗುವುದಿಲ್ಲ, ಗೋವುಗಳನ್ನು ಮಾರಿಬಿಡ್ರೀ)

Ramachandrapura Math supplied 550 ton of fodder so far

ಏಪ್ರಿಲ್ 3ರಿಂದ ಏಪ್ರಿಲ್ 10ರವರೆಗೆ ಎರಂಬಾಡಿಯಲ್ಲಿ ಮೇವು ವಿತರಣೆ ಮಾಡಿದ್ದು, ಆ ಬಳಿಕ ನಿತ್ಯ ಮೂರಕ್ಕೂ ಅಧಿಕ ಕೇಂದ್ರದಲ್ಲಿ ವಿವಿಧ ರೀತಿಯ ಮೇವನ್ನು ವಿತರಿಸಲಾಗಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 22ರವರೆಗೆ 461.87 ಟನ್ ಜೋಳ, 138.70 ಟನ್ ಕಬ್ಬಿನ ದಂಡು, 14.25ಟನ್ ಹಾಳೆ ಸೇರಿ 614.82 ಟನ್ ಮೇವು ವಿತರಣೆಯನ್ನು ಮಾಡಲಾಗಿದೆ.

ನಿತ್ಯವೂ ವಿತರಣೆ ಕಾರ್ಯ ನಡೆಯುತ್ತಿದ್ದು, ಬೇರೆ ಬೇರೆ ಜಿಲ್ಲೆಗಳ ಕಾರ್ಯಕರ್ತರು ತಂಡೋಪ ತಂಡವಾಗಿ ಆಗಮಿಸಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ದೇಸೀ ಗೋವುಗಳ ರಕ್ಷಣೆಗಾಗಿ 1 ಸಾವಿರ ಟನ್ ಮೇವು ವಿತರಿಸಬೇಕೆಂಬ ರಾಘವೇಶ್ವರ ಶ್ರೀಗಳವರ ಕಲ್ಪನೆ ಎಂದು ಮಠ ತಿಳಿಸಿದೆ.

Ramachandrapura Math supplied 550 ton of fodder so far

ಇದುವರೆಗೆ ನಿತ್ಯ ವಿತರಣೆ ಪೂರೈಕೆ ಮಾಡಿರುವ ಮೇವಿನ ವಿವರ ಹೇಗಿದೆ. ಏ3 - 7.5 ಟನ್, ಏ4 - 8.13 ಟನ್, ಏ5 - 10.37 ಟನ್, ಏ6 - 7.4 ಟನ್, ಏ7 - 9.43 ಟನ್, ಏ8 - 10.96 ಟನ್, ಏ9 - 8.57 ಟನ್, ಏ10 - 9.14 ಟನ್.

ಏ11 - 31.45 ಟನ್, ಏ12 - 18.3 ಟನ್, ಏ13 - 25ಟನ್, ಏ14 -29.43 ಟನ್, ಏ15 - 26.59 ಟನ್, ಏ16 - 43.51 ಟನ್, ಏ17 - 44.26 ಟನ್, ಏ18 - 42.34 ಟನ್, ಏ19 - 67.45 ಟನ್, ಏ20 - 59.19 ಟನ್, ಏ21 - 79.12 ಟನ್, ಏ22 - 76.63 ಟನ್ ವಿತರಣೆ ಮಾಡಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

English summary
Ramachandrapura Math supplied 550 ton of fodder so far in Malai Mahadeshwara hill station area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X