ಶಾಶ್ವತ ನೀರಾವರಿಗಾಗಿ ಒಕ್ಕಲಿಗರಿಂದ ಬೃಹತ್ ಸಮಾವೇಶ

Subscribe to Oneindia Kannada

ತುಮಕೂರು, ಏಪ್ರಿಲ್ 20: ಮಧ್ಯ ಕರ್ನಾಟಕದ ಕಾವೇರಿ ಮತ್ತು ಕೃಷ್ಣೆ ಕೊಳ್ಳದಲ್ಲಿನ ರೈತರಿಗೆ ನೀರಾವರಿ ವಿಚಾರದಲ್ಲಿ ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಇದೇ ಏಪ್ರಿಲ್ 23ರಂದು 'ಶಾಶ್ವತ ನೀರಾವರಿ ಹಕ್ಕೊತ್ತಾಯ ಸಮಾವೇಷ'ವನ್ನು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

ನಂಜಾವಧೂತ ಮಹಾಸ್ವಾಮಿಗಳ 38ನೇ ಜನ್ಮದಿನದಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತುಮಕೂರಿನ ಶಿರಾ ತಾಲೂಕಿಗೆ ಸೇರಿದ ಪಟ್ಟನಾಯಕನಹಳ್ಳಿಯಲ್ಲಿರುವ ಸ್ಪಟಿಕಾಪುರಿ ಮಹಾ ಸಂಸ್ಥಾನದಲ್ಲಿ ಬೆಳಿಗ್ಗೆ 10.30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ.[ಗರಿಷ್ಠ ತಾಪಮಾನದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಕಲಬುರಗಿ]

 Rally for demanding permanent water solution in Central Karnataka

ಈ ಸಂದರ್ಭದಲ್ಲಿ ನೀರಾವರಿ ಯೋಜನೆಗಳಿಗೆ ನೀಡಿದ ಸೇವೆಯನ್ನು ಗುರುತಿಸಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಅವಧೂತ ಪ್ರಜ್ಞಾ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗುತ್ತದೆ.[ಚೆಕ್ ಬೌನ್ಸ್ ಕೇಸ್ : ಮಾಜಿ ಸಚಿವ ಬಾಬುರಾವ್ ಗೆ ಸದ್ಯಕ್ಕೆ ರಿಲೀಫ್]

ಈ ಸಮಾವೇಶವನ್ನು ಬೆಂಬಲಿಸಿ ಇಂದು ಅಂದರೆ ಗುರುವಾರ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಸಂಜೆ 6.30ಕ್ಕೆ 'ನೀರಿಗಾಗಿ ಬೆಳಕು ಚೆಲ್ಲಿ' ಎಂಬ ಘೋಷ ವಾಕ್ಯದೊಂದಿಗೆ ಕ್ಯಾಂಡಲ್ ಲೈಟ್ ಅರಿವು ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.

English summary
On the 38th birthday occasion of Nanjavadhuta Mahaswamiji, a rally to demand permanent water solution in Central Karnataka has been organised in Shira talluk of Tumkur on 24th April.
Please Wait while comments are loading...