ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ: ಕಾಂಗ್ರೆಸ್‌ 3, ಬಿಜೆಪಿ 1, ಜೆಡಿಎಸ್‌ ಶೂನ್ಯ

By Madhusoodhan
|
Google Oneindia Kannada News

ಬೆಂಗಳೂರು, ಜೂನ್, 11 : ರಾಜ್ಯಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಇಲ್ಲಿಯೂ ಜೆಡಿಎಸ್ ಗೆ ಮುಖಭಂಗವಾಗಿದೆ. ಜೆಡಿಎಸ್ ಗೆ ಎಂಟು ಶಾಸಕರು ಕೈಕೊಟ್ಟಿದ್ದು ಕಾಂಗ್ರೆಸ್ ಗೆ ವರವಾಗಿ ಪರಿಣಮಿಸಿದೆ.

ಕಾಂಗ್ರೆಸ್ ನ ಜೈರಾಮ್ ರಮೇಶ್, ಆಸ್ಕರ್ ಫರ್ನಾಂಡೀಸ್ ಮತ್ತು ಕೆ.ಸಿ.ರಾಮಮೂರ್ತಿ ಗೆಲುವಿನ ನಗೆ ಬೀರಿದ್ದರೆ, ಬಿಜೆಪಿಯ ನಿರ್ಮಲಾ ಸೀತಾರಾಮನ್ ಗೆ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಜೆಡಿಎಸ್ ನ ಎಂ.ಫಾರೂಕ್ ಅವರಿಗೆ ಸೋಲಾಗಿದ್ದು ರಾಜಕೀಯದ ಚದುರಂಗದಾಟಕ್ಕೆ ಸಾಕ್ಷಿ.[ರಾಜ್ಯಸಭೆಗೆ ಸದಸ್ಯರ ಆಯ್ಕೆ ಹೇಗೆ? ಮತ ಲೆಕ್ಕಾಚಾರ ಹೇಗಿರುತ್ತೆ?]

ಗೆದ್ದವರು ಗಳಿಸಿದ ಮತಗಳ ವಿವರ
ಜೈರಾಮ್ ರಮೇಶ್- 46(ಕಾಂಗ್ರೆಸ್)
ಆಸ್ಕರ್ ಫರ್ನಾಂಡೀಸ್-46(ಕಾಂಗ್ರೆಸ್)
ಕೆ.ಸಿ.ರಾಮಮೂರ್ತಿ-52(ಕಾಂಗ್ರೆಸ್)
ನಿರ್ಮಲಾ ಸೀತಾರಾಮನ್-47(ಬಿಜೆಪಿ)

ಸೋತ ಅಭ್ಯರ್ಥಿ
ಎಂ.ಫಾರೂಕ್-33(ಜೆಡಿಎಸ್)

ಆಸ್ಕರ್ ಫರ್ನಾಂಡೀಸ್

ಆಸ್ಕರ್ ಫರ್ನಾಂಡೀಸ್

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಆಸ್ಕರ್ ಫರ್ನಾಂಡೀಸ್ ಗೆ ಜಯ ಲಭ್ಯವಾಗಿದೆ. ಕಾಂಗ್ರೆಸ್ ಹೈ ಕಮಾಂಡ್ ವಲಯದಲ್ಲಿ ಪ್ರಭಾವಿ ಮುಖಂಡ ಎಂದೇ ಗುರುತಿಸಿಕೊಂಡಿದ್ದಾರೆ.

ರಾಮಮೂರ್ತಿ

ರಾಮಮೂರ್ತಿ

ಕೆ.ಸಿ.ರಾಮಮೂರ್ತಿ ನಿವೃತ್ತ ಐಪಿಎಸ್ ಅಧಿಕಾರಿ. ಜೆಡಿಎಸ್ ಶಾಸಕರು ಅಡ್ಡ ಮತದಾನ ಮಾಡಿದ್ದು ಇವರ ಗೆಲುವನ್ನು ಸುಲಭ ಮಾಡಿತು.

ಜೈರಾಮ್ ರಮೇಶ್

ಜೈರಾಮ್ ರಮೇಶ್

ಜೈರಾಮ್ ಸಹ ಕೇಂದ್ರದಲ್ಲಿ ಸಚಿವರಾಗಿದ್ದವರು. ಕರ್ನಾಟಕದಿಂದ ಆಯ್ಕೆ ಬಯಸಿದ್ದ ರಮೇಶ್ ಗೆ ಗೆಲುವಾಗಿದೆ.

ಕೇಂದ್ರ ಸಚಿವೆ

ಕೇಂದ್ರ ಸಚಿವೆ

ಕನ್ನಡಿಗರ ಆಕ್ರೋಶದ ನಡುವೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಬದಲಾಗಿ ಸ್ಪರ್ಧೆ ಮಾಡಿದ್ದ ಕೇಂದ್ರ ವಾಣಿಜ್ಯೋದ್ಯಮ ಖಾತೆ ರಾಜ್ಯ ಸಚಿವೆ (ಸ್ವತಂತ್ರ) ನಿರ್ಮಲಾ ಸೀತಾರಾಮನ್ ಬಿಜೆಪಿಯಿಂದ ಚುನಾಯಿತರಾಗಿದ್ದಾರೆ.

ಜೆಡಿಎಸ್ ಸೋಲು

ಜೆಡಿಎಸ್ ಸೋಲು

ಜೆಡಿಎಸ್ ನ 8 ಶಾಸಕರು ಕಾಂಗ್ರೆಸ್ ನ ಮೂರನೇ ಅಭ್ಯರ್ಥಿ ಕೆಸಿ ರಾಮಮೂರ್ತಿಗೆ ಮತಚಲಾಯಿಸಿದ್ದು ಫಾರೂಕ್ ಅವರಿಗೆ ಸೋಲು ತಂದಿಟ್ಟಿತು. 40 ಶಾಸಕರಿದ್ದ ಜೆಡಿಎಸ್ ನಲ್ಲಿ 33 ಮತಗಳು ಲಭ್ಯವಾದವು.

ಹೊಸ ಹುರುಪು

ಹೊಸ ಹುರುಪು

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಈ ಗೆಲುವು ಹೊಸ ಹುರುಪು ನೀಡಿದ್ದರೆ, ಜೆಡಿಎಸ್ ಪಾಳಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

English summary
Rajya Sabha election result announced on Saturday evening June 11, 2016. Karnataka assembly members vote to elect 4 members for Rajya Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X