ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಚೇತರಿಕೆ: ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ

|
Google Oneindia Kannada News

ಬೆಂಗಳೂರು, ಜೂನ್ 27: ರಾಜ್ಯದಾದ್ಯಂತ ಸಾಧಾರಣ ಮಳೆಯಾಗುತ್ತಿದ್ದು, ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬರುತ್ತಿದೆ.

ಲಿಂಗನಮಕ್ಕಿ ಜಲಾಶಯದ ಗರಿಷ್ಠ ನೀರಿನ ಮಟ್ಟ, ಸಮುದ್ರ ಮಟ್ಟದಿಂದ 1819.00 ಅಡಿಯಾಗಿದ್ದರೆ, ಇಂದು (ಜೂನ್ 27) ಜಲಾಶಯದ ನೀರಿನ ಮಟ್ಟ 1750.60 ಅಡಿ ಹೆಚ್ಚಿದೆ. ನೀರಿನ ಒಳಹರಿವು 11722 ಕ್ಯೂಸೆಕ್ಸ್ ನಷ್ಟು ಹೆಚ್ಚಿದ್ದು, ಕಳೆದ ಬಾರಿ ಈ ದಿನ (ಜೂನ್ 27, 2017) ಜಲಾಶಯದ ನೀರಿನ ಮಟ್ಟ 1754.85 ಅಡಿಯಷ್ಟಿತ್ತು.

ಜೋರಾಗದ ಮುಂಗಾರು, ಕೊಡಗಿನಲ್ಲಿ ಆತಂಕ ಶುರುಜೋರಾಗದ ಮುಂಗಾರು, ಕೊಡಗಿನಲ್ಲಿ ಆತಂಕ ಶುರು

Rain and Major Resrvoir levels of Karnataka

ಹೇಮಾವತಿ ಜಲಾಶಯದಲ್ಲಿ 2330 ಕ್ಯೂಸೆಕ್ಸ್ ನಷ್ಟು ಒಳಹರಿವಿದ್ದು, ಜಲಾಶಯದ ಗರಿಷ್ಠ ಮಟ್ಟ 2922.00 ಅಡಿಯಾಗಿದ್ದರೆ, ಸದ್ಯ 2859.00 ಅಡಿಯಷ್ಟು ಅಷ್ಟು ನೀರಿನ ಮಟ್ಟ ಹೆಚ್ಚಿದೆ. ಕಳೆದ ವರ್ಷ ಜೂನ್ 27 ಕ್ಕೆ ಹೋಲಿಸಿದರೆ ಈ ವರ್ಷದ ಈ ದಿನ ಹೇಮಾವತಿ ಜಲಾಶಯದಲ್ಲಿ ನಾಲ್ಕು ಅಡಿ ನೀರು ಹೆಚ್ಚಿರುವುದು ಗಮನಾರ್ಹ.

ಮಳೆಗಾಲದ ಲೇಖನದಲ್ಲಿ ಮನಸಾರೆ ತೋಯಿರಿ...ಮಳೆಗಾಲದ ಲೇಖನದಲ್ಲಿ ಮನಸಾರೆ ತೋಯಿರಿ...

ಕೆಆರ್ ಎಸ್ ಜಲಾಶಯದ ಗರಿಷ್ಠ ಮಟ್ಟ, ನೆಲ ಮಟ್ಟದಿಂದ 124.80 ಅಡಿಯಾಗಿದ್ದರೆ, ಕಳೆದ ಬಾರಿಯ ಜೂನ್ 27 ಕ್ಕಿಂತ ಈ ಬಾರಿ 2 ಅಡಿ ಕಡಿಮೆಯಿದ್ದು, 67.88 ಅಡಿ ತಲುಪಿದೆ. ಆಲಮಟ್ಟಿ ಜಲಾಶಯದ ಗರಿಷ್ಠ ನೀರಿನ ಮಟ್ಟ 1704.81 ಅಡಿ ಆಗಿದ್ದರೆ, 1654.54 ಅಡಿಯಷ್ಟು ತಲುಪಿ ಚೇತರಿಕೆ ಕಂಡಿದೆ.
ಕಬಿನಿ ಜಲಾಶಯದ ನೀರಿನ ಮಟ್ಟವೂ 2253.02 (ಗರಿಷ್ಠ 2284) ಅಡಿಯಷ್ಟು ಹೆಚ್ಚಿ, ಕಳೆದ ಬಾರಿಗಿಂತ 7 ಅಡಿಯಷ್ಟು ನೀರು ಹೆಚ್ಚಿದೆ.

ಒಟ್ಟಿನಲ್ಲಿ ಬರದಿಂದ ಕಂಗೆಟ್ಟಿದ್ದ ಕರ್ನಾಟಕ ರಾಜ್ಯದ ಜನತೆಗೆ ಮಳೆಯಲ್ಲಿ ಚೇತರಿಕೆ ಕಂಡುಬರುತ್ತಿರುವುದು ಕೊಂಚ ಸಮಾಧಾನ ನೀಡಿದೆ.

English summary
The monsoon in Karnataka state brings smile in the faces of the farmers. Here are the statistical details about the major reservoir levels of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X