ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಪ್ ಸಹಾಯವಾಣಿ ತೆರೆದ ರೈಲ್ವೆ ಪೊಲೀಸರು

|
Google Oneindia Kannada News

ಬೆಂಗಳೂರು, ಫೆ. 20 : ರೈಲ್ವೆ ಪೊಲೀಸರು ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆಗೆ ಮುಂದಾಗಿದ್ದು ದೇಶದಲ್ಲೇ ಮೊದಲ ಬಾರಿಗೆ ವಾಟ್ಸಪ್ ಸಹಾಯವಾಣಿ ತೆರೆದಿದ್ದಾರೆ. ಆನೇಕಲ್ ಬಳಿ ನಡೆದ ರೈಲ್ವೆ ದುರಂತದಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ಹೊಸ ಕ್ರಮಕ್ಕೆ ಮುಂದಾಗಿದ್ದಾರೆ.

ರೈಲ್ವೆ ನಿಲ್ದಾಣಗಳು, ಹಳಿಗಳು ಹಾಗೂ ಇಲಾಖೆಗೆ ಸಂಬಂಧಿಸಿದ ಯಾವುದೇ ಸ್ಥಳಗಳಲ್ಲಿ ದುರ್ಘಟನೆ ನಡೆದಿದ್ದರೆ, ಅನುಮಾನಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳು ಕಂಡುಬಂದರೆ ಕೂಡಲೇ ನಾಗರಿಕರು 9480802140 ವಾಟ್ಸಪ್ ಗೆ ಸಂದೇಶ ಕಳುಹಿಸಬಹುದು.

whatsapp

ಟೋಲ್‌ಫ್ರೀ ಸಹಾಯವಾಣಿ 18004251363 ಗೂ ದೂರು ದಾಖಲಿಸಬಹುದು. ವಾಯ್ಸ್ ಅನ್‌ಲಾಗ್ ವ್ಯವಸ್ಥೆ, ಸಿಸಿ ಟಿವಿ ಚಲನವಲನ ನಿಗಾಘಟಕ ಮತ್ತು ತರಬೇತಿ ಹೊಂದಿದ್ದ ಸಿಬ್ಬಂದಿ ನೇಮಿಸಿ ರೈಲ್ವೆ ಇಲಾಖೆ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ರೈಲ್ವೆ ನಿಲ್ದಾಣಗಳಲ್ಲಿ ದಿನದ 24/7 ಸಿಸಿಟಿವಿ ಅಳವಡಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

1977ರಿಂದ ಈವರೆಗೂ ಹೊಸದಾಗಿ ಸಿಬ್ಬಂದಿ ನೇಮಕವಾಗಿಲ್ಲ. ಇದು ಸುರಕ್ಷತೆಗೆ ಸಮಸ್ಯೆಯಾಗಿ ಪರಿಣಮಿಸಿದೆ. ಹಾಗಾಗಿ ಆಧುನಿಕ ತಂತ್ರಜ್ಞಾನದ ಜತೆ 300 ಮಂದಿ ನಾಗರಿಕ ಪೊಲೀಸರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇದು ಕೊಂಚ ಪ್ರಮಾಣದಲ್ಲಿ ಒತ್ತಡ ಕಡಿಮೆಮಾಡಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

English summary
Karnataka state Railway Police has opened accounts on several social networking sites to reach out to people who can lodge a complaint through Whatsapp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X