ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರಂಡಿ ದಾಟಲು ಸ್ಥಳೀಯರ ಹೆಗಲೇರಿದ ರಾಯಚೂರು ಜಿ.ಪಂ ಸಿಇಒ

ಹರಿಯುತ್ತಿದ್ದ ಚರಂಡಿಯನ್ನು ದಾಟಲು ರಾಯಚೂರು ಜಿಲ್ಲಾ ಪಂಚಾಯತ್ ಸಿಇಒಗೆ ಆಗುವುದಿಲ್ಲವಂತೆ. ಕಾರಣ ಕಾಲಿಗೆ ಕೊಳೆಯಾಗುತ್ತದೆ. ಇದಕ್ಕೆ ಸ್ಥಳೀಯರು ಅವರನ್ನು ಹೊತ್ತುಕೊಂಡು ಚರಂಡಿ ದಾಟಿಸಿದ್ದಾರೆ.

By Sachhidananda Acharya
|
Google Oneindia Kannada News

ರಾಯಚೂರು, ಮಾರ್ಚ್ 24: ಹರಿಯುತ್ತಿದ್ದ ಚರಂಡಿಯನ್ನು ದಾಟಲು ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಕುರ್ಮಾ ರಾವ್ ಗೆ ಆಗುವುದಿಲ್ಲವಂತೆ. ಕಾರಣ ಕಾಲಿಗೆ ಕೊಳೆಯಾಗುತ್ತದೆ. ಇದಕ್ಕೆ ಸ್ಥಳೀಯರು ಅವರನ್ನು ಹೊತ್ತುಕೊಂಡು ಚರಂಡಿ ದಾಟಿಸಿದ್ದಾರೆ. ರಾಯಚೂರಿನ ಲಿಂಗಸಗೂರಿನಲ್ಲಿ ಈ ಘಟನೆ ನಡೆದಿದೆ.

ಸರಕಾರ ಸಂಬಳ ತಿನ್ನುವ ಈ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರಾಮವಾಗಿ ಸ್ಥಳೀಯರ ಹೆಗಲೇರಿ ಚರಂಡಿ ದಾಟಿ ದರ್ಪ ಮೆರೆದಿದ್ದಾರೆ. ಚರಂಡಿ ದಾಟಲು ಸ್ಥಳೀಯರು ಭುಜ ಬಳಸಿದ ಸಿಇಒ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Raichur CEO Zila Panchayat crosses a drain with help of locals

ಯಾವುದಕ್ಕೂ ಈ ಸಿಇಒನ ಚರಂಡಿ ದಂಡ ಯಾತ್ರೆಯ ಈ ವೀಡಿಯೋ ನೋಡಿ ಕಣ್ತುಂಬಿಕೊಳ್ಳಿ..

ಈ ಹಿಂದೆ ನೆರೆ ವೀಕ್ಷಣೆಗೆ ಬಂದಿದ್ದ ಮಧ್ಯ ಪ್ರದೇಶ ಬಿಜೆಪಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರನ್ನು ಪೊಲೀಸರು ಹೊತ್ತುಕೊಂಡು ಹೋಗಿದ್ದು ಇದೇ ರೀತಿ ಭಾರೀ ವಿವಾದಕ್ಕೆ ಕಾರಣವಾಗಿತ್ತು.

Raichur CEO Zila Panchayat crosses a drain with help of locals
English summary
Kurma Roa, CEO Zila Panchayat crosses a drain with help from locals, in Raichur, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X