ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೆ ಕಾಂಗ್ರೆಸ್ ಸರ್ಕಾರದ ಸಾಧನೆಯೇ ಆಸ್ತಿ : ರಾಹುಲ್ ಗಾಂಧಿ

|
Google Oneindia Kannada News

ರಾಯಚೂರು, ಆ.12 : 'ಕಾಂಗ್ರೆಸ್ ಪಕ್ಷವು ನಮ್ಮ ಕೆಲಸದ ಮೂಲಕ ಜನರ ವಿಶ್ವಾಸ ಗಳಿಸಿ ಮತ್ತೆ ಚುನಾವಣೆಯಲ್ಲಿ ಗೆಲ್ಲಲಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಗೆ ಸರ್ಕಾರದ ಸಾಧನೆಗಳೇ ಆಸ್ತಿ' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ರಾಹುಲ್ ಗಾಂಧಿ ಶನಿವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದರು. ರಾಯಚೂರಿಗೆ ಅವರು ಆಗಮಿಸಿ 'ಹೈದರಾಬಾದ್ ಕರ್ನಾಟಕ ಭಾಗದ ಕಾರ್ಯಕರ್ತರ ಸಮಾವೇಶ' ಉದ್ದೇಶಿಸಿ ಮಾತನಾಡಿದರು.

ಬಿಜೆಪಿ,ಕಾಂಗ್ರೆಸ್ ರಾಜಕೀಯ ಮೇಲಾಟದಲ್ಲಿ ಬಡವಾದ ಹಸಿದ ಹೊಟ್ಟೆಗಳುಬಿಜೆಪಿ,ಕಾಂಗ್ರೆಸ್ ರಾಜಕೀಯ ಮೇಲಾಟದಲ್ಲಿ ಬಡವಾದ ಹಸಿದ ಹೊಟ್ಟೆಗಳು

ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು.

rahul gandhi

ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು

*ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಮಾನ್ಯತೆ ನೀಡಿದ್ದು ಕಾಂಗ್ರೆಸ್ ಸರ್ಕಾರ. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಹೆಚ್ಚು ಅನುದಾನ ನೀಡಿದ್ದು ನಾವೇ. ಈ ಭಾಗದ ಜನರಿಗೆ 60 ವೈದ್ಯಕೀಯ ಸೀಟುಗಳು ದೊರೆಯುತ್ತಿತ್ತು. ಸೀಟುಗಳ ಸಂಖ್ಯೆ 640ಕ್ಕೆ ಏರಲು ನಮ್ಮ ಸರ್ಕಾರವೇ ಕಾರಣ.

* ನಮ್ಮ ಆಡಳಿತವಿರುವ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ನಾನು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೆ. ನಾನು ಮನವಿ ಮಾಡಿದ ಎರಡೇ ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ.

ಇಲ್ಲಿ ಅಮಿತ್ ಶಾ, ಅಲ್ಲಿ ರಾಹುಲ್ : ಚುನಾವಣೆ ಬಂತಪ್ಪೋ ಚುನಾವಣೆಇಲ್ಲಿ ಅಮಿತ್ ಶಾ, ಅಲ್ಲಿ ರಾಹುಲ್ : ಚುನಾವಣೆ ಬಂತಪ್ಪೋ ಚುನಾವಣೆ

* 2 ಕೋಟಿ ಉದ್ಯೋಗ ಕೊಡುವ ಆಶ್ವಾಸನೆ ಕೊಟ್ಟಿದ್ದರು ಪ್ರಧಾನಿ ಮೋದಿ. ಎಲ್ಲಿ ಹೋದರೂ ಸುಳ್ಳು ಆಶ್ವಾಸನೆ ಕೊಡುತ್ತಾರೆ. ಸಿದ್ದರಾಮಯ್ಯ 30 ಸಾವಿರ ಸರ್ಕಾರಿ ಉದ್ಯೋಗ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಹೇಳಿದ್ದನ್ನು ಮಾಡುತ್ತದೆ, ರೈತರಿಗೆ ಗೊತ್ತು ನಾವು ನೆರವಾಗುತ್ತೇವೆ ಎಂದು. ನರೇಂದ್ರ ಮೋದಿಯವರು ಉದ್ಯೋಗ ಕೊಡಲಾರರು, ಇದು ಸಾಬೀತಾಗಿದೆ.

* ಮೇಕ್ ಇನ್ ಇಂಡಿಯಾ ಬಗ್ಗೆ ದೊಡ್ಡದಾಗಿ ಪ್ರಚಾರ ಮಾಡಲಾಯಿತು. ಮೇಕ್ ಇನ್ ಇಂಡಿಯಾದಿಂದ ಕರ್ನಾಟಕದಲ್ಲಿ ಮಾತ್ರ ಯಾರಿಗೂ ಕೆಲಸ ಸಿಕ್ಕಿಲ್ಲ. ನಾವು ಕೆಲಸ ಕೊಟ್ಟಿದ್ದೇವೆ, ಇದೇ ನಮಗೂ, ಬಿಜೆಪಿಗೂ ಇರುವ ವ್ಯತ್ಯಾಸ. ಮೇಕ್ ಇನ್ ಇಂಡಿಯಾದಿಂದ ಎಷ್ಟು ಜನಕ್ಕೆ ಉದ್ಯೋಗ ದೊರೆತಿದೆ ಹೇಳಿ? 10, 20 ಸಾವಿರ ಜನರಿರಲಿ, ಒಬ್ಬರಿಗೂ ನೌಕರಿ ದೊರೆತಿಲ್ಲ.

* ಕಾಂಗ್ರೆಸ್ ಪಕ್ಷವು ನಮ್ಮ ಕೆಲಸದ ಮೂಲಕ ಜನರ ವಿಶ್ವಾಸ ಗಳಿಸಿ ಮತ್ತೆ ಚುನಾವಣೆಯಲ್ಲಿ ಗೆಲ್ಲಲಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಗೆ ಸರ್ಕಾರದ ಸಾಧನೆಗಳೇ ಆಸ್ತಿ. ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿ. ಎಲ್ಲರೂ ಒಗ್ಗೂಡಿ ನಾವು ಪಕ್ಷವನ್ನು ಗೆಲ್ಲಿಸಬೇಕಿದೆ. ಹಾಗೆ ಗೆದ್ದೇ ಗೆಲ್ಲಿಸುತ್ತೇವೆಂಬ ವಿಶ್ವಾಸವೂ ಇದೆ.

'ಆಗಸ್ಟ್ ತಿಂಗಳ ಆರಂಭದಲ್ಲಿ ನಮ್ಮ ಪಕ್ಷಕ್ಕೆ ಗ್ರಹಣ ಆವರಿಸಿತ್ತು'

* ಬಡವರಿಗಾಗಿ, ದುರ್ಬಲರಿಗಾಗಿ, ಹಿಂದುಳಿದವರಿಗೆ ಬೇಕಾದ ಸಹಾಯ ಮಾಡಬೇಕಿದೆ. ಇದನ್ನೇ ನಾವು ಕಳೆದ ಐದು ವರ್ಷಗಳಿಂದ ಕರ್ನಾಟಕದಲ್ಲಿ ಮಾಡಿದ್ದೇವೆ. ಮುಂದಿನ ಐದು ವರ್ಷಗಳಲ್ಲೂ ನಾವು ಇಂಥ ಸಾಮಾಜಿಕ ಕೆಲಸ ಮಾಡಬೇಕಿದೆ.

ಸಿದ್ದರಾಮಯ್ಯ ಮಾತು:

* ಹೈದರಾಬಾದ್-ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ 2,500 ಕೋಟಿ ಅನುದಾನ ನೀಡಲಾಗಿದೆ. ಇನ್ನು 1,500 ಕೋಟಿ ವೆಚ್ಚ ಮಾಡುವ ಉದ್ದೇಶವಿದೆ.

English summary
Congress Vice President Rahul Gandhi in Karnataka. On August 12, 2017 he adressed party workers rally at Raichur. Here are the speech highlights of Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X