ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಗಳಿಗೆ ವೈದ್ಯಕೀಯ ಪರೀಕ್ಷೆ ಆಗಲೇಬೇಕು

|
Google Oneindia Kannada News

ಬೆಂಗಳೂರು, ನ.27 : ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವೈದ್ಯಕೀಯ ಪರೀಕ್ಷೆ ಆಗಲೇಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೈಕೋರ್ಟ್‌ನಲ್ಲಿ ವಾದ ಮಂಡಿಸಿವೆ.

ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ತಡೆ ನೀಡಿರುವ ಕುರಿತ ವಿಚಾರಣೆ ಹೈಕೋರ್ಟ್‌ನಲ್ಲಿ ನ್ಯಾ.ಎ.ಎನ್.ವೇಣುಗೋಪಾಲ ಗೌಡ ಅವರ ಪೀಠದಲ್ಲಿ ನಡೆಯುತ್ತಿದ್ದು, ಬುಧವಾರ ಸಿಐಡಿ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ವೈದ್ಯ ಪರೀಕ್ಷೆಯ ಸಾಂವಿಧಾನಿಕ ವಿಧಿಬದ್ಧತೆ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವುದು ತನಿಖೆ ವಿಳಂಬ ಮಾಡಲು ಎಂದು ಹೇಳಿದರು. [ರಾಘವೇಶ್ವರ ಶ್ರೀ ಸಮರ್ಥ ಪುರುಷರು, ಪರೀಕ್ಷೆ ಏಕೆ?]

Raghaveshwara Swamiji

ಕೃಷ್ಣ ಎಸ್.ದೀಕ್ಷಿತ್ ವಾದ : ವಿಚಾರಣೆ ವೇಳೆ ಕಾನೂನು ಆಯೋಗದ ಶಿಫಾರಸಿನ ಅನ್ವಯ, ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳನ್ನು ಕಡ್ಡಾಯವಾಗಿ ವೈದ್ಯ ಪರೀಕ್ಷೆಗೆ ಒಳಪಡಿಸಲೆಂದೇ 2006ರಲ್ಲಿ ಸಿಆರ್‌ಪಿಸಿ ಕಾಯಿದೆ 53ಕ್ಕೆ ತಿದ್ದುಪಡಿ ತಂದು ಸೆಕ್ಷನ್ 'ಎ' ಪರಿಚಯಿಸಲಾಗಿದೆ ಎಂದು ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಕೃಷ್ಣ ಎಸ್.ದೀಕ್ಷಿತ್ ವಾದ ಮಂಡಿಸಿದ್ದಾರೆ. [ರಾಘವೇಶ್ವರ ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ತಡೆ]

ವೈದ್ಯ ಪರೀಕ್ಷೆ ನಡೆಸಲು ಅಧಿಕಾರವಿರುವ ಅಪರಾಧ ದಂಡ ಸಂಹಿತೆ ಸೆಕ್ಷನ್ 53 ಹಾಗೂ 53 ಎ ಸಂವಿಧಾನದ ವಿಧಿಬದ್ಧತೆ ಪ್ರಶ್ನಿಸಿ ರಾಘವೇಶ್ವರ ಶ್ರೀಗಳ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆ ನಡೆಯಲಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪರ ವಕೀಲರು ವಾದ ಮಂಡನೆ ಮಾಡಲಿದ್ದಾರೆ. [ಗಾಯಕಿ ಬಟ್ಟೆಯಲ್ಲಿ ವೀರ್ಯಾಣು ಪತ್ತೆ]

ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಗಾಯಕಿ ಪ್ರೇಮಲತಾ ದಿವಾಕರ್ ಅವರ ಬಟ್ಟೆಯಲ್ಲಿ ವೀರ್ಯಾಣು ಪತ್ತೆಯಾಗಿದ್ದು, ಅದು ಯಾರದ್ದು ಎಂದು ತಿಳಿಯಲು ಶ್ರೀಗಳ ಪರೀಕ್ಷೆ ಮಾಡಬೇಕಾಗಿದೆ. ಆದರೆ, ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

English summary
Raghaveshwara Bharathi Swamiji of Ramachandrapura Mutt must compulsorily undergo a medical test, both the Union and Karnataka governments told the High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X