ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಮಠದಲ್ಲಿ ಗುರುಗಳು ಹೇಗಿರುತ್ತಾರೆ: ವಿರೋಧಿಸುವ ಮನಸ್ಸುಗಳಿಗಾಗಿ

By ಗುರು ಗಜಾನನ ಭಟ್
|
Google Oneindia Kannada News

ಆರೋಗ್ಯ ಪೂರ್ಣ ಜೀವನಕ್ಕೆ ಯೋಗ ಧ್ಯಾನಗಳೆಲ್ಲವೂ ಬೇಕೇ, ಆದರೆ ಆಸ್ತಿಕತೆಯನ್ನು ಕಳೆದುಕೊಳ್ಳಬಾರದು. ಮನುಷ್ಯ ಹುಚ್ಚನಾಗುವುದು ನಾಸ್ತಿಕವಾದಕ್ಕೆ ಬಿದ್ದಮೇಲೆಯೇ...! ಇನ್ನೂ ಕೆಲವರಿಗೆ ಅದರಲ್ಲೂ ಇತ್ತೀಚೆಗೆ ವಿರೋಧಿಸುವ ಗೀಳಿದೆ, ಅಂದರೆ ಏನೇ ಆದರೂ ಅದನ್ನು ವಿರೋಧಿಸಲು ಕಾಯುತ್ತಾ ಇರುತ್ತಾರೆ.

ವಿರೋಧಕ್ಕಾಗಿಯೇ ವಿರೋಧ...! ಅದು ಒಳಿತೋ ಕೆಡುಕೋ ಅದಾವುದೂ ಗಮನಕ್ಕೆ ಇರುವುದಿಲ್ಲ. ರಾಮ ಹುಚ್ಚ ಕೃಷ್ಣ ಲಫಂಗ ಹೀಗೆ ಹೇಳುತ್ತಾ ಹುಚ್ಚರ ಹಾಗೆ ಓಡಾಡುತ್ತಾರೆ. ಇವರಿಗೆ ಪಾಪ್ಯುಲ್ಯಾರಿಟೀ ಎನ್ನುವ ಹುಚ್ಚು ಆವರಿಸಿದೆ.

ಅವರು ಮಿಡಿಯಾದಲ್ಲಿ ಬರಲು ಏನು ಬೇಕಾದರೂ ಹೇಳಿ ಬಿಡುತ್ತಾರೆ. ಅದನ್ನು ಅವರದ್ದೇ ರೀತಿಯಲ್ಲಿ ಸಮರ್ಥಿಸಿ ಕೊಳ್ಳುತ್ತಾರೆ. ಅವರಿಗೆ ನೀರಿಗೆ ಅಭಿಮುಖವಾಗಿ ಈಜುವ ಹುಚ್ಚು...!

ಶ್ರೀ ಮಠದಲ್ಲಿ ಗುರುಗಳಾದವರು ಹೇಗೆ ಬದುಕುತ್ತಾರೆ ಗೊತ್ತಾ ? ವಿರೋಧಿಸುವ ಮನಸ್ಸುಗಳಿಗೆ ಉತ್ತರವಿದೆ. ಶ್ರೀ ಮಠದಲ್ಲಿ ಗುರುಗಳನ್ನು ಹೇಗೆ ಆಯ್ಕೆ ಮಾಡುತ್ತಾರೆ ಗೊತ್ತಾ ? ಗುರು ಅಂದರೆ ಆತ್ಮ ಹೊತ್ತ ದೇಹವಷ್ಟೇ. ಆ ದೇಹದ ಪ್ರತಿ ಕಾರ್ಯಗಳನ್ನು ಪರಿಚಾರಕರೇ ಮಾಡಬೇಕು, ಅದು ನಿಯಮ. (ಪುರುಷತ್ವ ಪರೀಕ್ಷೆಗೆ ಹಾಜರಾಗದ ರಾಘವೇಶ್ವರ ಶ್ರೀಗಳು)

Raghaveshwara Seer not attended potency test : Article by Guru Gajanana Bhat 2

ಗುರುವಾಗ ಹೊರಟವರು ಕಾವಿಯನ್ನು ಆಂತರ್ಯಕ್ಕೆ ತೊಟ್ಟು ಬಿಡುತ್ತಾರೆ, ಬಾಹ್ಯಕ್ಕೆ ಪರಿಚಾರಕರು ತೊಡಿಸುತ್ತಾರೆ. ಯಾಕೆಂದರೆ ಶಿಷ್ಯ ಗುರುವನ್ನು ಗುರುತಿಸಲಿಕ್ಕಾಗಿ. ಬಾಯಾರಿಕೆ ಆಗಿದೆ ಎಂದು ನೀರು ಕುಡಿಯುವಂತಿಲ್ಲ, ಶಿಷ್ಯ ಕೊಟ್ಟರೆ ಕುಡಿಯಬೇಕು, ಹಸಿವಾಗಿದೆ ಹಣ್ಣು ತಿನ್ನುವ ಹಾಗಿಲ್ಲ, ಶಿಷ್ಯ ಕೊಟ್ಟರೆ ತಿನ್ನಬೇಕು, ಬಗೆ ಬಗೆಯ ತಿಂಡಿ ತಿನುಸುಗಳು ಪರಿಮಳ ಬೀರುತ್ತವೆ ಅದೆಲ್ಲವೂ ಭಕ್ತರಿಗಾಗಿಯೇ. ಯಾವುದನ್ನು ಆಹ್ವಾದಿಸುವಂತಿಲ್ಲ.

ಗುರುಗಳು ಏಕಾಂತದಲ್ಲಿದ್ದರೂ ಅಲ್ಲಿ ಶಿಷ್ಯರಿರುತ್ತಾರೆ, ಗುರುಗಳೆಂದು ಒಬ್ಬರೇ ಇರುವ ಹಾಗಿಲ್ಲ. ಅದೊಂದು ದೊಡ್ಡ ತಪಸ್ಸು. ಗುರು ತನಗಿಷ್ಟವಾಗಿ ಸ್ವೀಕರಿಸುವುದು ಗುರುಭಕ್ತಿಯನ್ನು ಮಾತ್ರ. ಗುರುವಿಗೆ ಮೋಸ, ಕೆಡುಕು ಮಾಡಲು ಬಂದವರ ಬಗ್ಗೆಯೂ ಅರಿವಿದೆ, ಆದರೂ ಅವರನ್ನು ಭಕ್ತರಂತೆ ಕಾಣಬೇಕು.

ಬಹಳ ಕಷ್ಟ, ಯಾವುದೋ ಕಟ್ಟೆಯಲ್ಲಿ ಕೂತು ಮಾಡುವ ಪಂಚಾಯಿತೆಯಲ್ಲ, ಪ್ರವಚನವಲ್ಲ. ಅದು ಶಕ್ತಿ ಪೀಠ 1300 ವರ್ಷ ಇತಿಹಾಸವುಳ್ಳ ಪೀಠ...! ಗುರುವನ್ನು ಬಂಧಿಸಿ ಎಂದು ಬೊಬ್ಬೆ ಹಾಕುವ ಸಂಘಟನೆಗಳ ಗಮನಕ್ಕೆ ಹೇಳುವುದಾದರೆ, ಬಂಧಿಸಲು ಗುರು ಆಗಲೇ ಬಂಧಿ , ಶಿಷ್ಯರಲ್ಲಿ , ರಾಮನಲ್ಲಿ ಬಂಧಿ. (ಶ್ರೀಗಳ ವಿರುದ್ದ ಚಾರ್ಜ್ ಶೀಟಿನಲ್ಲಿ ಏನಿದೆ)

ನೀವು ಕೇಳುವ ಪ್ರಶ್ನೆಯೇ ಹಾಸ್ಯಾಸ್ಪದ, ಯಾರೋ ಅತ್ಯಾಚಾರವನ್ನು ಮಾಡಿದರೆ ಬಂಧಿಸುತ್ತೀರಿ, ಇವರನ್ನು ಬಂಧಿಸಿ ಎಂದು...! ಇವರು ಶಂಕರ ಮಠದ ಗುರುಗಳು. ಇವತ್ತು ಇಲ್ಲಿಲ್ಲವಾದರೆ ಕೆಕ್ಕರಿನಲ್ಲೋ , ಗೋಕರ್ಣದಲ್ಲೋ, ಸಾಗರದಲ್ಲೋ ಇರುತ್ತಾರೆ .

ಅಡಗಿಕೊಳ್ಳುವುದಿಲ್ಲ... ತುಂಬಿದ ಸಭೆಯನ್ನೋ, ಭಕ್ತರ ಮನೆಯನ್ನೋ ಅಲಂಕರಿಸಿರುತ್ತಾರೆ. ಸದಾ ಸಮಾಜದ ಮುಂದೆಯೇ ಇದ್ದಾಗ ಬಂಧಿಸುವ ಅವಶ್ಯಕತೆಯಿಲ್ಲ. ಅಪರಾಧ ತೀರ್ಮಾನವಾಗಿಲ್ಲ. ಲೋಕಕಲ್ಯಾಣಕ್ಕೆ ಒಡಲ ಬಂಧನವನ್ನೇ ಬಿಟ್ಟು ಬಂದವರಿಗೆ ಕಾವಿಕಿತ್ತೆಸೆದು ಹೊರಡುವುದು ದೊಡ್ಡಮಾತಲ್ಲ.

ಆದರೆ ಹೊತ್ತಿರುವ ಜವಾಬ್ದಾರಿ ಮತ್ತು ಕಾರ್ಯವನ್ನು ಬಿಟ್ಟು ಹೋಗುವಹಾಗಿಲ್ಲ. ನಿಮ್ಮನಾಲ್ಕು ಜನಕ್ಕಿಂತ ಹೊತ್ತ ಲಕ್ಷ ಭಕ್ತರ ಭಕ್ತಿ ಮತ್ತು ಪ್ರೀತಿ ಅಲ್ಲೇ ಉಳಿಯುವಂತೆ ಮಾಡಿಬಿಡುತ್ತದೆ.

1300 ವರ್ಷ ಇತಿಹಾಸವುಳ್ಳ , ಅವಿಚ್ಛಿನ್ನ ಪರಂಪರೆಯನ್ನು ಹೊತ್ತ ಪೀಠ, ಮೊನ್ನೆ ಬರೆದು ಮಡಚಿಟ್ಟ ಕಾನೂನಿನ ಎದುರು ಬಲಿಯಾಗಲು ಬಿಡಬಾರದು ಎನ್ನುವ ಉದ್ದೇಶದಿಂದ ಬರೆದದ್ದು ಇದು. ಅರಿವಿನ ಹರಿವಿದ್ದರೆ ಅರ್ಥವಾದೀತು...!

English summary
Raghaveshwara Seer of Ramachandrapura Mutt not attended potency test : Article by Guru Gajanana Bhat - Part 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X