ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಟ್ಯೂಷನ್ ಮಾಫಿಯಾ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 31 : ಎರಡು ಬಾರಿ ರಸಾಯನಶಾಸ್ತ್ರ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪತ್ರಿಕೆ ಸೋರಿಕೆ ಬಗ್ಗೆ ತನಿಖೆ ನಡೆಸುವ ಅಧಿಕಾರಿಗಳು ಟ್ಯೂಷನ್ ಮಾಫಿಯಾ ಬಗ್ಗೆಯೂ ತನಿಖೆ ನಡೆಸಬೇಕಾಗಿದೆ.

ಟ್ಯೂಷನ್ ಎಂಬುವುದು ದೊಡ್ಡ ವ್ಯಾಪಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ವ್ಯಾಪಾರಕ್ಕೆ ಸ್ಪರ್ಧೆ ನೀಡುವವರು ಅಧಿಕವಾಗಿದ್ದಾರೆ. ಇತರರಿಗಿಂತ ನಾವು ಉತ್ತಮ ಎಂದು ಟ್ಯೂಷನ್ ಹೇಳುವವರು ತೋರಿಸಿಕೊಳ್ಳಲು ಬಳಸುವುದು ಪ್ರಶ್ನೆ ಪತ್ರಿಕೆಯನ್ನು. [ಪ್ರಶ್ನೆ ಪತ್ರಿಕೆ ಸೋರಿಕೆ : 10 ಪ್ರಮುಖ ಬೆಳವಣಿಗೆಗಳು]

exam

ಮಾಫಿಯಾ ಕೈವಾಡವಿತ್ತು : 2012ರಲ್ಲಿ ರಾಜ್ಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಅಧಿಕಾರಿಗಳು ಸೋರಿಕೆ ಹಿಂದೆ ಟ್ಯೂಷನ್ ಮಾಫಿಯಾದ ಕೈವಾಡವಿರುವುದನ್ನು ಪತ್ತೆ ಹಚ್ಚಿದ್ದರು. [ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯ ಸರ್ಕಾರವೇ ಫೇಲ್!]

ಟ್ಯೂಷನ್ ನಡೆಸುವ ಕೆಲವರು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿತ್ತು. ಅವರ ಜೊತೆ ಸಂಪರ್ಕದಲ್ಲಿದ್ದ ಮಾಫಿಯಾದವರು ಮುಂಚಿತವಾಗಿ ಪ್ರಶ್ನೆ ಪತ್ರಿಕೆ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದರು. [ಏಪ್ರಿಲ್ 12ಕ್ಕೆ ಮರು ಪರೀಕ್ಷೆ, ಎಕ್ಸಾಂ ಬರೆಯಲ್ಲ : ವಿದ್ಯಾರ್ಥಿಗಳು]

ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಹಲವು ಉಪನ್ಯಾಸಕರು ಖಾಸಗಿಯಾಗಿ ಟ್ಯೂಷನ್ ಹೇಳಿಕೊಡುತ್ತಾರೆ. ಇವರು ಪ್ರಶ್ನೆ ಪತ್ರಿಕೆ ತಯಾರು ಮಾಡುವ ತಂಡದಲ್ಲಿಯೂ ಇರುತ್ತಾರೆ. ಆದ್ದರಿಂದ, ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿಂದೆ ಟ್ಯೂಷನ್ ಮಾಫಿಯಾ ಇದೆ ಎಂಬ ತೀರ್ಮಾನಕ್ಕೆ ಕಾರಣವಾಗಿದೆ.

ಈಗ ಎರಡು ಬಾರಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿಂದೆಯೂ ಟ್ಯೂಷನ್ ಮಾಫಿಯಾವಿದೆ ಎಂದು ಹೇಳಲಾಗುತ್ತಿದೆ. ಆದರೆ, ಹಿಂದೆ ಈ ಬಗ್ಗೆ ನಡೆದ ಹಲವು ತನಿಖೆಗಳು ತಾರ್ಕಿಕ ಅಂತ್ಯವನ್ನು ಕಂಡಿಲ್ಲ.

ಪತ್ರಿಕೆ ಸೋರಿಕೆಯಾದ ಕಾರಣ ಗುರುವಾರ ನಡೆಯಬೇಕಿದ್ದ ಮರು ಪರೀಕ್ಷೆ ರದ್ದುಗೊಂಡಿದೆ. ಏ.12ರಂದು ಮರು ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ 40 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

English summary
If one needs to get to the bottom of the case relating to question paper leak in Karnataka, then a probe into the tuition mafia needs to be conducted. For a question paper to be leaked twice in a week there is something more than what meets the eye.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X