ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯುಸಿ ವಿದ್ಯಾರ್ಥಿಗಳ ಮಾಹಿತಿ ಆನ್ ಲೈನ್ ನಲ್ಲೇ ಲಭ್ಯ

|
Google Oneindia Kannada News

ಬೆಂಗಳೂರು, ಜ. 30: ಪಿಯುಸಿ ವಿದ್ಯಾರ್ಥಿಗಳ ಸಕಲ ಮಾಹಿತಿಯನ್ನು ಆನ್ ಲೈನ್ ಮೂಲಕ ದಾಖಲು ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕಿ ಸುಷಮಾ ಗೋಡಬೋಲೆ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳ ಕುರಿತ ಮಾಹಿತಿಯನ್ನು ಕಾಲೇಜು ಸಿಬ್ಬಂದಿ ಆನ್‌ಲೈನ್‌ ಮೂಲಕ ದಾಖಲು ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಕಾಲೇಜು ಪ್ರಾಚಾರ್ಯರಿಗೆ ಐಡಿ ಮತ್ತು ಪಾಸ್‌ವರ್ಡ್‌ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.[ಸಿಇಟಿ ಆನ್ ಲೈನ್ ನೋಂದಣಿ ಜನವರಿ 30 ರಿಂದ ಆರಂಭ]

puc

ಈ ಯೋಜನೆಯಿಂದ ವಿದ್ಯಾರ್ಥಿಗಳ ಎಲ್ಲ ಮಾಹಿತಿಯು ಆನ್‌ಲೈನ್‌ನಲ್ಲೇ ಲಭ್ಯವಾಗುತ್ತದೆ. ಮುಂದಿನ ವರ್ಷ ಈ ವಿದ್ಯಾರ್ಥಿಗಳು ಸಿಇಟಿಗೆ ಅರ್ಜಿ ಸಲ್ಲಿಸುವಾಗ ಮತ್ತು ಸೀಟಿಗಾಗಿ ನಡೆಯುವ ಕೌನ್ಸೆಲಿಂಗ್‌ನ ಸಂದರ್ಭದಲ್ಲೂ ಈ ಮಾಹಿತಿಗಳು ನೆರವಾಗಲಿವೆ. ಸಿಇಟಿ ಹೊರತಾಗಿ ಶಿಷ್ಯ ವೇತನದ ವಿತರಣೆಗೂ ಈ ಮಾಹಿತಿಗಳನ್ನು ಬಳಸ­ಬಹುದಾಗಿದೆ. ಇದೇ ವ್ಯವಸ್ಥೆಯನ್ನು ಪದವಿ ಶಿಕ್ಷಣಕ್ಕೂ ವಿಸ್ತರಿಸುವ ಸಂಬಂಧ ಆಯುಕ್ತರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.[ಏಪ್ರಿಲ್ 29ರಿಂದ ಸಿಇಟಿ ಪರೀಕ್ಷೆ]

ನಿಯಮಗಳಿಗೆ ತಿದ್ದುಪಡಿ: ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಕಾಯಂ ಆಗಿ ನೇಮಕ ಪಡೆದಿರುವ 9 ಕಾಯಂ ಸಿಬ್ಬಂದಿ ಇದ್ದಾರೆ. ಗುತ್ತಿಗೆ ಆಧಾರಿತ 40 ಸಿಬ್ಬಂದಿ ಕಾರ್ಯ­ನಿರ್ವಹಿಸುತ್ತಿದ್ದಾರೆ. ನಮಗೆ ಕಾಯಂ ಸಿಬ್ಬಂದಿ ಅಗತ್ಯ ಇದೆ. ಹಾಗಾಗಿ ವೃಂದ ಮತ್ತು ನೇಮಕಾತಿ (ಸಿ ಆಂಡ್‌ ರೂಲ್‌) ನಿಯಮಗಳಿಗೆ ಶೀಘ್ರದಲ್ಲಿ ತಿದ್ದುಪಡಿ ತರಲಾಗುವುದು. ಸರ್ಕಾರದಿಂದ ಅನುಮತಿ ಪಡೆದು ಕೆಲವು ತಿಂಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಅವರು ಹೇಳಿದರು.

English summary
The Pre-university Education Department has asked all colleges offering PU courses to update admission details of students online from the next academic year. The data of students joining PUC from the academic year 2015-16 will help the department during second PUC examinations and during Common Entrance Test (CET).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X