ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೌಲ್ಯ ಮಾಪನ ವಿವಾದ : ಮುರಿದು ಬಿತ್ತು 4ನೇ ಸಂಧಾನ ಸಭೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 11 : ದ್ವಿತೀಯ ಪಿಯುಸಿ ಮೌಲ್ಯ ಮಾಪನ ವಿಚಾರ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಭಾನುವಾರ ಸರ್ಕಾರ ಮತ್ತು ಉಪನ್ಯಾಸಕರ ನಡುವೆ ನಡೆದ 4ನೇ ಸಂಧಾನ ಸಭೆ ಮುರಿದುಬಿದ್ದಿದೆ. ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಯಲಿದೆ.

ಭಾನುವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಉಪನ್ಯಾಸಕರ ಜೊತೆ ಸಂಧಾನ ಸಭೆ ನಡೆಸಿದರು. ಮುಷ್ಕರನಿರತ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಸಲೇಬೇಕು ಎಂದು ಪಟ್ಟು ಹಿಡಿದರು. ಆದ್ದರಿಂದ, ಸಂಧಾನ ಸಭೆ ವಿಫಲವಾಯಿತು. [ಮೌಲ್ಯಮಾಪನ ಭಾಗ್ಯಕ್ಕೆ ಕಾದಿವೆ ಪಿಯು ಉತ್ತರ ಪತ್ರಿಕೆಗಳು]

kimmane rathnakar

ಸಂಧಾನ ಸಭೆಯಲ್ಲಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಿದರೆ, ಇತರ ಇಲಾಖೆಗಳ ನೌಕರರೂ ಇದೇ ಬೇಡಿಕೆ ಮುಂದಿಡುತ್ತಾರೆ ಎಂದು ಸಚಿವರು ಮನವರಿಕೆ ಮಾಡಿಕೊಡಲು ಯತ್ನಿಸಿದರು. ಆದರೆ, ಉಪನ್ಯಾಸಕರ ಸಂಘದವರು ಪಟ್ಟು ಬಿಡಲಿಲ್ಲ. [ಮುಗಿಯದ ತಿಕ್ಕಾಟ, ಶುರುವಾಗದ ಪಿಯು ಮೌಲ್ಯಮಾಪನ]

ವೇತನ ತಾರತಮ್ಯ ನಿವಾರಣೆಗಾಗಿ ಕುಮಾರ ನಾಯಕ್‌ ವರದಿ ಜಾರಿಗೊಳಿಸಲು ಸರ್ಕಾರ ಒಪ್ಪುವ ತನಕ ಮುಷ್ಕರ ಕೈ ಬಿಡಲು ಸಾಧ್ಯವಿಲ್ಲ ಎಂದು ಹೇಳಿದರು. ತಮ್ಮ ಬೇಡಿಕೆಗಳನ್ನು ಈಡೇರಿಸಲು ಏ.13ರ ತನಕ ಗಡುವು ನೀಡಿದರು. [ಪಿಯುಸಿ ಮೌಲ್ಯ ಮಾಪನ ಬಹಿಷ್ಕಾರ, ದಿನ ಭತ್ಯೆ ಹೆಚ್ಚಳ]

'ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ ಬಳಿಕ ಸೋಮವಾರ ಮತ್ತೊಮ್ಮೆ ಸಭೆ ಕರೆಯುವುದಾಗಿ ಸಚಿವರು ಹೇಳಿದ್ದಾರೆ. ಸರ್ಕಾರದ ನಿರ್ಧಾರದ ಬಳಿಕ ಮುಷ್ಕರ ಕೈ ಬಿಡುವ ಬಗ್ಗೆ ತೀರ್ಮಾನ ಪ್ರಕಟಿಸಲಾಗುತ್ತದೆ' ಎಂದು ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಭೇಟಿ : ಭಾನುವಾರವೂ ಫ್ರೀಡಂಪಾರ್ಕ್‌ನಲ್ಲಿ ಉಪನ್ಯಾಸಕರು ಮುಷ್ಕರ ಮುಂದುವರೆಸಿದರು. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಷ್ಕರ ಕೈ ಬಿಡಬೇಕು ಎಂದು ಉಪನ್ಯಾಸಕರಿಗೆ ಮನವಿ ಮಾಡಿದರು.

English summary
Talks between the Primary and Secondary Education Minister Kimmane Ratnakar and PU lecturers, who have boycotted evaluation work broke down yet again on Sunday, April 10, 2016. Lecturers set April 13 as the deadline for the government to fulfill their demands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X