ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು: ಪ್ರಶ್ನೆ ಪತ್ರಿಕೆ ಸೋರಿಕೆ ರಾಜ್ಯಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು,ಮಾರ್ಚ್,31: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಮರು ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ರಾಜ್ಯಾದ್ಯಂತ ಪ್ರತಿಭಟನೆ ಕೈಗೊಂಡಿದ್ದಾರೆ. ಶಿಕ್ಷಣ ಇಲಾಖೆಯ ಅವ್ಯವಸ್ಥೆಯನ್ನು ಪ್ರಶ್ನಿಸಿ ಬೀದಿಗಿಳಿದ್ದಾರೆ.

ಹುಬ್ಬಳ್ಳಿ, ಹಾಸನ, ತುಮಕೂರು, ಬೆಂಗಳೂರು ಹೀಗೆ ನಾನಾ ಕಡೆ ವಿದ್ಯಾರ್ಥಿಗಳು ತಮ್ಮ ಕೋಪವನ್ನು ಹೊರಹಾಕಿದ್ದು, ನೀವು ಮಾಡಿದ್ದು ಸರಿಯೇ, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಕೊಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.[ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ : 10 ಪ್ರಮುಖ ಬೆಳವಣಿಗೆಗಳು]

pu students take protest all over karnataka against state government

ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ನಾವು ಮರುಪರೀಕ್ಷೆ ಬರೆಯುವುದಿಲ್ಲ ಎಂದು ಕೂಗುತ್ತಿರುವಾಗಲೇ ಏಪ್ರಿಲ್ 12ರಂದು ಮರುಪರೀಕ್ಷೆ ನಡೆಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ದಿನಾಂಕ ನಿಗದಿಪಡಿಸಿದೆ.

pu students take protest all over karnataka against state government

ಹುಬ್ಬಳ್ಳಿಯ ವಿದ್ಯಾರ್ಥಿಗಳ ಕೂಗಿಗೆ ಎಬಿವಿಪಿ ಸೇರಿಂದಂತೆ ನಾನಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಮುಂದೂಡಲ್ಪಟ್ಟಿದ ರಸಾಯನಶಾಸ್ತ್ರ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದಕ್ಕೆ ತಕ್ಷಣ ಬೇಜವಾಬ್ದಾರಿ ಅಧಿಕಾರಿ ಪಿಯು ಮಂಡಳಿಯ
ನಿರ್ದೇಶಕಿ ಪಲ್ಲವಿ ಅಕುರಾತಿಯವರನ್ನು ವಜಾಗೊಳಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.[ಏಪ್ರಿಲ್ 12ಕ್ಕೆ ಮರು ಪರೀಕ್ಷೆ, ಎಕ್ಸಾಂ ಬರೆಯಲ್ಲ: ವಿದ್ಯಾರ್ಥಿಗಳು]

pu students take protest all over karnataka against state government

ಒಟ್ಟಿನಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಸಮಾಧಾನಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಪ್ರತಿಭಟನೆ ಕಾರಣ ಹುಬ್ಬಳ್ಳಿಯ ವಾಹನ ಸಂಚಾರ ಕೆಲವು ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತ್ತು.

ಅಲ್ಲದೇ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಸಿಐಡಿ ವಶಕ್ಕೆ ಒಪ್ಪಿಸಲಾಗಿದ್ದು, ಸಿಐಡಿಯ ಡಿಐಜಿ ಸೋನಿಯಾ ನಾರಂಗ್ ಅವರು ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ತನಿಖೆ ನಡೆಸಲು ಐದು ತಂಡವನ್ನು ರಚನೆ ಮಾಡಿದ್ದಾರೆ.[ಪ್ರಶ್ನೆ ಪತ್ರಿಕೆ ಸೋರಿಕೆ, ಪಿಯು ವಿದ್ಯಾರ್ಥಿಗಳಲ್ಲಿ ಭುಗಿಲೆದ್ದ ಆಕ್ರೋಶ]

English summary
pu students take protest all over karnataka against state government. 2nd pu chemistry question paper leak on Thursday, March 31. Reexam on April 12th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X