ಸಾವಿನ ಮನೆಯಲ್ಲೂ ಲಂಚಾವತಾರ, ಇದೆಂಥ ವಿಪರ್ಯಾಸ!

ರೈತನ ಸಾವಿನಿಂದ ಇಡೀ ಕುಟುಂಬವೂ ಕಂಗೆಟ್ಟಿದ್ದರೆ ಆತನ ಶವ ಸಾಗಿಸುವುದಕ್ಕೆ ಸಾವಿನ ಮನೆಯಲ್ಲೇ ಪಿ ಎಸ್ ಐ ಲಂಚ ಕೇಳಿರುವುದು ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

Written by: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ವಿಜಯಪುರ, ಏಪ್ರಿಲ್ 11: ಸಾಲ ಬಾಧೆ ತಾಳಲಾರದೆ ಇಂದು ಆತ್ಮಹತ್ಯೆ ಮಾಡಿಕೊಂಡ ವಿಜಯಪುರ ಜಿಲ್ಲೆ, ಸಿಂದಗಿ ತಾಲೂಕಿನ ಚಟ್ಟರಕಿ ಗ್ರಾಮದ ರೈತ ಸಂತೋಷ್ ಕುಲಕರ್ಣಿ(43) ಅವರ ಕಳೇಬರ ಸಾಗಿಸುವುದಕ್ಕೆ ಪಿ ಎಸ್ ಐ ಲಂಚಕೇಳಿದ ಘಟನೆ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದೆ.

ರೈತನ ಸಾವಿನಿಂದಾಗಿ ಇಡೀ ಕುಟುಂಬವೂ ಕಂಗೆಟ್ಟು, ಶೋಕ ಸಾಗರದಲ್ಲಿ ಮುಳುಗಿದ್ದರೆ, ದೇವರಹಿಪ್ಪರಗಿ ಠಾಣೆಯ ಪಿ ಎಸ್ ಐ ಕೆ.ಪಡೇಕನೂರ್ ಮೃತರ ಶವ ಸಾಗಿಸುವುದಕ್ಕೆ ಮತ್ತು ಶವದ ಮರಣೋತ್ತರ ಪರೀಕ್ಷೆಗೆ ಲಂಚ ನೀಡುವಂತೆ ಕುಟುಂಬಸ್ಥರನ್ನು ಕೇಳಿದ್ದಾರೆ![ವಿಜಯಪುರದಲ್ಲಿ ಸಾಲಬಾಧೆಗೆ ರೈತ ಆತ್ಮಹತ್ಯೆ]

PSI in Vijayapura demands money to shift deadbody of a farmer

ಈ ಮೂಲಕ ಲಂಚಾವತಾರಕ್ಕೆ ಸಾವಿನ ಮನೆಯೆಂಬ ಭೇದವೇನಿಲ್ಲ ಎಂಬುದನ್ನು ಈ ಪೊಲೀಸ್ ಅಧಿಕಾರಿ ತೋರಿಸಿಕೊಟ್ಟಿದ್ದಾರೆ!

ಬೆಳೆ ಹಾನಿ ಮತ್ತು ಸಾಲಭಾದೆಯಿಂದ ಕಂಗೆಟ್ಟಿದ್ದ ಸಂತೋಷ್ ಕುಲಕರ್ಣಿ 'ನನ್ನ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ' ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

English summary
K.Padekanur, a police sub-inspector demanded money to shift deadbody of a former in Chattaraki village, Sindagi taluk, Vijayapur district. The incident questions credibility of the police department.
Please Wait while comments are loading...