ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ಕಡೆಗೆ ವರ್ಗಾವಣೆ ಕೋರಿ ದಂಪತಿ ಸಲ್ಲಿಸಿದ್ದ ಅರ್ಜಿ ರದ್ದು

By Prithviraj
|
Google Oneindia Kannada News

ವಿಜಯಪುರ: ಅಕ್ಟೋಬರ್, 28: ತಾನು ಇದ್ದ ಸ್ಥಳಕ್ಕೆ ಹತ್ತಿರವಾಗುವಂತೆ ಪತ್ನಿಯನ್ನೂ ವರ್ಗಾವಣೆ ಮಾಡಿ ಎಂದು ವಿಜಯಪುರ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ಅಷ್ಟೇ ಅಲ್ಲದೇ ಅರ್ಜಿದಾರರು ಪತ್ನಿಯನ್ನು ವರ್ಗಾವಣೆ ಮಾಡುವುದು ಮೂಲಭೂತ ಹಕ್ಕುಗಳನ್ನು ಪ್ರಶ್ನಿಸುವಂತಿದೆ ಎಂದು ಉಲ್ಲೇಖಿಸಿದ್ದಾರೆ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

Proximity to wife not a fundamental right: Karnataka HC

ಸರ್ಕಾರಿ ನೌಕರರಾಗಿರುವ ಶ್ರೀ ಶೈಲ ಮುದುಕಪ್ಪ ಅಂಬಲನೂರ್ ಎಂಬುವವರು ತಮ್ಮ ಪತ್ನಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಪತ್ನಿಯನ್ನು ತಾನು ಕೆಲಸ ನಿರ್ವಹಿಸುತ್ತಿರು ಸ್ಥಳಕ್ಕೆ ಸನಿಹವಾಗುವಂತೆ ವರ್ಗಾವಣೆ ಮಾಡಿ ಎಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಸಿದ್ದರು.

ಶ್ರೈಶೈಲ ಅವರ ಪತ್ನಿ ವಿಜಯಲಕ್ಷ್ಮಿ ಅಡವಿಯವರು ಕೋಲಾರದ ಸರ್ಕಾರಿ ಶಾಲೆಯೊಂದರಲ್ಲಿ ಕಳೆದ ಐದು ವರ್ಷಗಳಿಂದ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ರಾಜ್ಯ ಸರ್ಕಾರ ಅಂತಿಮಗೊಳಿಸಿದ ವರ್ಗಾವಣೆ ಪಟ್ಟಿಯಲ್ಲಿ ತಮ್ಮ ಪತ್ನಿ ವಿಜಯಲಕ್ಷ್ಮೀ ಅವರ ಹೆಸರನ್ನೂ ತೀರಾ ಕೆಳಗೆ ಉಲ್ಲೇಖಿಸಿದ್ದು, 235ನೇ ನೌಕರರಾಗಿ ಗುರುತಿಸಿದ್ದರು ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದರು.

ಸರ್ಕಾರದ ಈ ಕ್ರಮದಿಂದ ನನ್ನ ಪತ್ನಿಗೆ ವರ್ಗಾವಣೆ ಸಿಗದಂತಾಗಿದೆ ಎಂದು ಶ್ರೀಶೈಲ ಅವರು ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.
ಆದರೂ, ಒಂದೇ ಊರಿನಲ್ಲಿ ಕೆಲಸ ಪತಿ ಪತ್ನಿಯರು ಕೆಲಸಮಾಡಬೇಕು ಎಂಬುದು ಮೂಲಭೂತ ಹಕ್ಕು ಅಲ್ಲ ಆದ್ದರಿಂದ ಶ್ರೀಶೈಲ ಅವರ ಅರ್ಜಿಯನ್ನು ರದ್ದುಪಡಿಸಲಾಗಿದೆ ಎಂದು ಕೋರ್ಟ್ ತಿಳಿಸಿದೆ.

English summary
In a setback for a married couple in Vijayapura, the Karnataka High Court on Thursday dismissed a petition filed by the husband, seeking the transfer of his wife close to his place of work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X