ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಚಂದ್ರಾಪುರ ಮಠದ ಮೇಲೆ ಸರಕಾರದ ಕಣ್ಣು: ಶಪಥಪರ್ವ ಸಮಾವೇಶ

By Balaraj
|
Google Oneindia Kannada News

ಬೆಂಗಳೂರು, ಅ 6: ಕಾನೂನನ್ನು ಗಾಳಿಗೆ ತೂರಿ ಹೊಸನಗರ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸಲು ಮುಂದಾಗಿರುವ ಸರಕಾರದ ಕ್ರಮವನ್ನು ವಿರೋಧಿಸಿ 'ಶಪಥಪರ್ವ' ಪ್ರತಿಭಟನಾ ಕಾರ್ಯಕ್ರಮವನ್ನು ಹೊಸನಗರದ ರಾಮಚಂದ್ರಾಪುರ ಮಠದ ಆವರಣದಲ್ಲಿ ಶನಿವಾರ (ಅ 8) ಆಯೋಜಿಸಲಾಗಿದೆ.

ಶಂಕರಾಚಾರ್ಯರಿಂದ ಸ್ಥಾಪಿತವಾದ ಮತ್ತು ಏಕಮೇವ ಅವಿಚ್ಛಿನ್ನ ಪರಂಪರೆಯನ್ನು ಹೊಂದಿರುವ ರಾಮಚಂದ್ರಾಪುರ ಮಠವು ಸಾವಿರಾರು ವರ್ಷಗಳಿಂದ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾ ಬರುತ್ತಿದೆ. (ರಾಘವೇಶ್ವರ ಶ್ರೀಗಳ ಸಂದರ್ಶನ)

To protest against appointing Adminstrative officer, Shapatha Parva convention in Ramachandrapura Math, Hosanagara on Oct 8

ರಾಘವೇಶ್ವರ ಶ್ರೀಗಳ ಮಾರ್ಗದರ್ಶನದಲ್ಲಿ ಧರ್ಮಸಂರಕ್ಷಣೆಯ ಜೊತೆಗೆ ಗೋಸಂರಕ್ಷಣೆ, ವಿದ್ಯಾ ಸಹಾಯ, ವಿದ್ಯಾದಾನ ಮುಂತಾದ ಸಮಾಜಮುಖೀ ಕಾರ್ಯದಲ್ಲಿ ಮಠ ತೊಡಗಿಕೊಂಡಿದೆ. ಆದಾಗ್ಯೂ, ಸರಕಾರ ಇಂತಹ ಕ್ರಮಕ್ಕೆ ಮುಂದಾಗಿರುವುದಕ್ಕೆ ಮಠದ ಭಕ್ತರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

ನ್ಯಾಯ, ಧರ್ಮದ ಪಥದಲ್ಲಿ ರಾಮಚಂದ್ರಾಪುರ ಮಠವಿದ್ದು, ಸಮರ್ಥವಾದ ಆಡಳಿತ ವ್ಯವಸ್ಥೆಯನ್ನೂ ಹೊಂದಿದೆ. ಇಂತಹ ಧಾರ್ಮಿಕ ಶ್ರದ್ಧಾ ಕೇಂದ್ರದ ಮೇಲೆ ಸರ್ಕಾರವು ಅನಗತ್ಯವಾಗಿ ಹಸ್ತಕ್ಷೇಪಕ್ಕೆ ಮುಂದಾಗಿರುವುದು ಹವ್ಯಕ ಸಮಾಜ ಸೇರಿದಂತೆ ಲಕ್ಷಾಂತರ ಜನರ ಮನಸ್ಸಿಗೆ ಘಾಸಿಯನ್ನುಂಟುಮಾಡಿದೆ ಎಂದು ಹವ್ಯಕ ಮಹಾಸಭಾದ ಅಧ್ಯಕ್ಷರಾದ ಡಾ. ಗಿರಿಧರ ಕಜೆ ನೋವು ವ್ಯಕ್ತ ಪಡಿಸಿದ್ದಾರೆ.

ಮಠದ ಮೇಲಾಗುತ್ತಿರುವ ಆಕ್ರಮಣಗಳನ್ನು, ಅನ್ಯಾಯವನ್ನು ವಿರೋಧಿಸಿ ಅಕ್ಟೋಬರ್ 8 ಶನಿವಾರ ಹೊಸನಗರದ ರಾಮಚಂದ್ರಾಪುರಮಠದಲ್ಲಿ "ಶಪಥಪರ್ವ" ಸಮಾವೇಶ ನಡೆಯಲಿದ್ದು, ಮೌನ ಪ್ರತಿಭಟನೆ ಹಾಗೂ ಉಪವಾಸದ ಮೂಲಕ ಮಠದ ಮೇಲಾಗುತ್ತಿರುವ ಅನಾಚಾರವನ್ನು ಪ್ರತಿಭಟಿಸಲಾಗುವುದು ಎಂದು ಕಜೆ ಹೇಳಿದ್ದಾರೆ. (ಮತ್ತೆ ಮುಜರಾಯಿ ತೆಕ್ಕೆಗೆ ಗೋಕರ್ಣ ದೇವಾಲಯ)

'ಶಪಥಪರ್ವ' ಸಮಾವೇಶಕ್ಕೆ ಅಖಿಲ ಹವ್ಯಕ ಮಹಾಸಭಾದ ಸಂಪೂರ್ಣ ಬೆಂಬಲವಿದ್ದು, ಧಾರ್ಮಿಕ ಶ್ರದ್ಧಾ ಕೇಂದ್ರದ ಮೇಲಾಗುತ್ತಿರುವ ಅನ್ಯಾಯವನ್ನು "ಶಪಥಪರ್ವ" ಸಮಾವೇಶದಲ್ಲಿ ಭಾಗವಹಿಸುವುದರ ಮೂಲಕ ತೀವ್ರ ಪ್ರತಿರೋಧ ವ್ಯಕ್ತ ಪಡಿಸಬೇಕೆಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಿ ಎ ವೇಣು ವಿಘ್ನೇಶ ಮನವಿ ಮಾಡಿದ್ದಾರೆ.

To protest against appointing Adminstrative officer, Shapatha Parva convention in Ramachandrapura Math, Hosanagara on Oct 8

ಶಪಥಪರ್ವ ಕಾರ್ಯಕ್ರಮದ ವಿವರ ಇಂತಿದೆ:
ದಿನಾಂಕ, ಸಮಯ : 08.10.2016, 9ಗಂಟೆಯಿಂದ

9.00 - ಹೊಸನಗರ ಪಟ್ಟಣದಿಂದ ಮಠಕ್ಕೆ ಮೌನ ಪಾದಯಾತ್ರೆ
10.00 - ಶ್ರೀಗಳಿಂದ ರಾಮದೇವರಲ್ಲಿ ಪ್ರಾರ್ಥನೆ, ಶಪಥ ಸಂಕಲ್ಪ
10.30 - ಮೌನವಾಗಿ ಆದಿತ್ಯ ಹೃದಯ ಪಠಣ, 21ಬಾರಿ ಮಠದ ಪ್ರದಕ್ಷಿಣೆ, ಕಾಣಿಕೆ ಅರ್ಪಣೆ, ಪರಶುರಾಮ ರಥ
12.00 - ಮೌನವಾಗಿ ಆದಿತ್ಯ ಹೃದಯ ಪಠಣ
14.30 - ಮತ್ತೆ ಮೌನವಾಗಿ ಆದಿತ್ಯ ಹೃದಯ ಪಠಣ
15.00 - ಶ್ರೀಗಳಿಂದ ಆಶೀರ್ವಚನ, ಶಪಥ ಬೋಧನೆ, ಪ್ರಸಾದ ವಿತರಣೆ

English summary
To protest against possible appointing of Administrative officer by GoK, Havyaka Community and Math followers organized 'Shapatha Parva' convention in Ramachandrapura Math, Hosanagara on Oct 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X