ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆಗೆ ವೆಂಕಯ್ಯ ಸಾಕಯ್ಯ: ವೆಂಕಯ್ಯ ನಾಯ್ಡು ತಿರುಗೇಟು

By Balaraj
|
Google Oneindia Kannada News

ಕರ್ನಾಟಕದ ಮೂಲಕ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ರಾಜ್ಯಸಭೆಗೆ ಸ್ಪರ್ಧಿಸುವ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ, ವೆಂಕಯ್ಯ ನಾಯ್ಡು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ನಗರದ ಆರ್ ಎಸ್ ಎಸ್ ಕೇಂದ್ರ ಕಚೇರಿ ಕೇಶವಕೃಪಾದಲ್ಲಿ ಶುಕ್ರವಾರ (ಮೇ 27) ಮಾತನಾಡುತ್ತಿದ್ದ ವೆಂಕಯ್ಯ ನಾಯ್ಡು, ಭಾರತದಲ್ಲಿ ಎಲ್ಲಿ ಬೇಕಾದರೂ ನಾನು ಸ್ಪರ್ಧಿಸಬಹುದಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೇ ಬೇಡವೇ ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ ಎಂದು ಹೇಳಿದ್ದಾರೆ. (ವೆಂಕಯ್ಯ ಆಯ್ಕೆಯಿಂದ ರಾಜ್ಯಕ್ಕೆ ಲಾಭ)

ಕನ್ನಡಪರ ಸಂಘಟನೆಗಳ ವಿರೋಧದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಯಾವಾಗ ನಾಮಪತ್ರ ಸಲ್ಲಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ.

ವಿದೇಶಿ ಮೂಲದ ಸೋನಿಯಾ ಗಾಂಧಿ ಸ್ಪರ್ಧಿಸಿದಾಗ ಚಕಾರವೆತ್ತದರು, ನಾನು ಸ್ಪರ್ಧಿಸುತ್ತಿರುವಾಗ ಪ್ರಶ್ನಿಸುವುದು ಎಷ್ಟು ಸರಿ. ನಾನು ಬೆಂಗಳೂರಿಗೆ ಬಂದಿದ್ದು ನಾಮಪತ್ರ ಸಲ್ಲಿಸಲು ಅಲ್ಲ. ಪಕ್ಷ ಎರಡು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಆಯೋಜಿಸಲಾಗಿರುವ ' ವಿಕಾಸಪರ್ವ' ಸಮಾವೇಶಕ್ಕಾಗಿ ಎಂದು ನಾಯ್ಡು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯ ಘಟಕ ವೆಂಕಯ್ಯ ನಾಯ್ಡು ಹೆಸರನ್ನು ಶಿಫಾರಸು ಮಾಡಿ ಕಳುಹಿಸಿದ್ದರೂ ಅವರ ಆಯ್ಕೆ ಇನ್ನೂ ಅಂತಿಮವಾಗಿಲ್ಲ ಎಂದು ವಿಜಯಪುರದಲ್ಲಿ ಎರಡು ದಿನಗಳ ಹಿಂದೆ ರಾಜ್ಯಾಧಕ್ಷ ಯಡಿಯೂರಪ್ಪ ಹೇಳಿದ್ದರೂ, ಶನಿವಾರ (ಮೇ 28) ವೆಂಕಯ್ಯ ನಾಯ್ಡು ನಾಮಪತ್ರ ಸಲ್ಲಿಸುವುದು ಬಹುತೇಕ ಅಂತಿಮ ಎನ್ನಲಾಗುತ್ತಿದೆ. (VenkayyaSakayya ರೊಚ್ಚಿಗೆದ್ದ ಕನ್ನಡಿಗರು)

ರಾಜ್ಯಕ್ಕೆ ನಾನು ಏನು ಮಾಡಿದ್ದೇನೆ, ನಾಯ್ಡು ಕಚೇರಿಯಿಂದ ಪಟ್ಟಿ ಬಿಡುಗಡೆ, ಮುಂದೆ ಓದಿ..

ಮಾಧ್ಯಮಗಳ ಪ್ರಶ್ನೆಗೆ ವೆಂಕಯ್ಯ ಉತ್ತರ

ಮಾಧ್ಯಮಗಳ ಪ್ರಶ್ನೆಗೆ ವೆಂಕಯ್ಯ ಉತ್ತರ

ನಾನು ಕರ್ನಾಟಕದಿಂದ ಮತ್ತೆ ಸ್ಪರ್ಧಿಸಲು ಬಯಸುತ್ತಿದ್ದೇನೆ. ಇಲ್ಲಿಂದ ಆಯ್ಕೆಯಾಗಿರುವ ಇತರ ರಾಜ್ಯಸಭಾ ಸದಸ್ಯರು ನನಗಿಂತ ಹೆಚ್ಚು ಸೇವೆ ಕರ್ನಾಟಕಕ್ಕೆ ಸಲ್ಲಿಸಿದ್ದರೆ ದಯವಿಟ್ಟು ಮಾಹಿತಿ ನೀಡಿ ಎಂದು ಮಾಧ್ಯಮದವರನ್ನು ವೆಂಕಯ್ಯ ನಾಯ್ಡು ಕೇಳಿಕೊಂಡಿದ್ದಾರೆ.

ವೆಂಕಯ್ಯ ನಾಯ್ಡು ಕಚೇರಿಯಿಂದ ಅಭಿವೃದ್ದಿಗಳ ಪಟ್ಟಿ

ವೆಂಕಯ್ಯ ನಾಯ್ಡು ಕಚೇರಿಯಿಂದ ಅಭಿವೃದ್ದಿಗಳ ಪಟ್ಟಿ

ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ 'ಸಂಸದರ ಆದರ್ಶ ಗ್ರಾಮ ಯೋಜನೆ' ಯಡಿಯಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲಿಯೂರು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ ಅಭಿವೃದ್ಧಿಗೊಳಿಸಲಾಗುತ್ತಿದೆ.

ವಿಶಾಖಪಟ್ಟಣ ಜಿಲ್ಲೆಯ ಚೇಪಲ ಉಪ್ಪಡ ಗ್ರಾಮ

ವಿಶಾಖಪಟ್ಟಣ ಜಿಲ್ಲೆಯ ಚೇಪಲ ಉಪ್ಪಡ ಗ್ರಾಮ

ಆಂಧ್ರದ ಗ್ರಾಮವನ್ನು ದತ್ತು ಪಡೆದುಕೊಂಡಿದ್ದಾರೆ ಎನ್ನುವ ತಕರಾರಿಗೆ ನಾಯ್ಡು ಕಚೇರಿ ಸ್ಪಷ್ಟನೆ ನೀಡಿದ್ದು, ಚಂಡಮಾರುತದ ಪರಿಣಾಮವಾಗಿ ವಿಶಾಖಪಟ್ಟಣ ಜಿಲ್ಲೆಯ ಚೇಪಲ ಉಪ್ಪಡ ಗ್ರಾಮ ಸಾಕಷ್ಟು ಹಾನಿಗೀಡಾಗಿತ್ತು.

ನಾಯ್ಡು ಒಂದು ತಿಂಗಳ ವೇತನ ನೀಡಿದ್ದರು

ನಾಯ್ಡು ಒಂದು ತಿಂಗಳ ವೇತನ ನೀಡಿದ್ದರು

ಮೀನುಗಾರಿಕೆಯನ್ನೇ ಅವಲಂಬಿಸಿರುವ ಚೇಪಲ ಉಪ್ಪಡ ಗ್ರಾಮವನ್ನು ವೆಂಕಯ್ಯ ನಾಯ್ಡು ಅವರ ಸ್ನೇಹಿತರು ಅಭಿವೃದ್ಧಿಪಡಿಸಲು ದತ್ತು ಪಡೆದಿದ್ದರು. 1 ತಿಂಗಳ ವೇತನವನ್ನು ವೆಂಕಯ್ಯ ನಾಯ್ಡು ನೀಡಿದ್ದರು. ಆದರೆ, ಇದು ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಅಲ್ಲ.

ಪೆರಿಫೆರಲ್ ರಿಂಗ್ ರಸ್ತೆ

ಪೆರಿಫೆರಲ್ ರಿಂಗ್ ರಸ್ತೆ

ಸುಮಾರು ಹನ್ನೆರಡು ಸಾವಿರ ಕೋಟಿ ರೂಪಾಯಿ ಮೊತ್ತದ 65 ಕಿಲೋಮೀಟರ್ ಉದ್ದದ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ, ನಾಯ್ಡು ಮುತುವರ್ಜಿ ವಹಿಸಿ ಮುನ್ನಡೆಸಿದ್ದು.

ಮೆಟ್ರೋಗೆ ಅನುದಾನ ಮತ್ತು ಇತರ ಕೆಲಸಗಳು

ಮೆಟ್ರೋಗೆ ಅನುದಾನ ಮತ್ತು ಇತರ ಕೆಲಸಗಳು

ಬೆಂಗಳೂರು ನಮ್ಮ ಮೆಟ್ರೋ ಯೋಜನೆಗೆ 2,236 ಕೋಟಿ ರೂ. ಪರಿಷ್ಕೃತ ಅನುದಾನ
ರಾಜ್ಯದ 30 ನಗರಗಳಲ್ಲಿ 1,701 ಬಸ್ ಖರೀದಿಗೆ 194.28 ಕೋಟಿ ರೂ. ಬಿಡುಗಡೆ
ಹುಬ್ಬಳ್ಳಿ ಧಾರವಾಡ ಬಿಆರ್​ಟಿಎಸ್ ಯೋಜನೆ, ಸಾಲ ಅವಧಿ ವಿಸ್ತರಣೆ (ಮಾಹಿತಿ: ವಿಜಯವಾಣಿ)

ಸ್ಮಾರ್ಟ್ ಸಿಟಿ ಯೋಜನೆ

ಸ್ಮಾರ್ಟ್ ಸಿಟಿ ಯೋಜನೆ

ಹುಡ್ಕೊ, ಗೃಹ ಮಂಡಳಿ ಸೇರಿ ಅನೇಕ ಯೋಜನೆಗಳಲ್ಲಿ ಕರ್ನಾಟಕಕ್ಕೆ ಪ್ರಾಧನ್ಯತೆ
ಮೈಸೂರಿನಲ್ಲಿ ಪಿಬಿಎಸ್ ಯೋಜನೆ ಜಾರಿ ಮಾಡಿ 550 ಬೈಕ್​ಗಳ ಸೇರ್ಪಡೆ
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಂಗಳೂರು ಹೆಸರು ಇಲ್ಲದಿದ್ದರೂ, ಕೇಂದ್ರದಿಂದ ಹಣ ಬಿಡುಗಡೆ. (ಮಾಹಿತಿ: ವಿಜಯವಾಣಿ)

English summary
Pro kannada organization Venkayya Sakayya protest on Venkaiah Naidu nomination for Rajya Sabha from Karnataka: Union Minister Venkaiah Naidu clarification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X