ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರೀಕ್ಷೆ ತಯಾರಿ: ಎಸ್‌ಎಸ್‌ಎಲ್‌ಸಿ 8.56 ಲಕ್ಷ ವಿದ್ಯಾರ್ಥಿಗಳಿಗೆ ಗುಡ್ ಲಕ್

By Mahesh
|
Google Oneindia Kannada News

ಬೆಂಗಳೂರು, ಮಾ.27: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಪೂರ್ಣಗೊಳಿಸಿದೆ. ಪರೀಕ್ಷೆ ಮಾ.30ರಿಂದ ಆರಂಭಗೊಂಡು ಏ.13ರ ವರೆಗೆ ನಡೆಯಲಿದೆ. ಎಕ್ಸಾಂ ತಯಾರಿಯಲ್ಲಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಗೂ ಎಲ್ಲಾ ಪೋಷಕರಿಗೆ ಒನ್ ಇಂಡಿಯಾ ಕಡೆಯಿಂದ ಬೆಸ್ಟ್ ಆಫ್ ಲಕ್.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತನ್ನ ಸಿದ್ಧತೆ ಬಗ್ಗೆ ಶುಕ್ರವಾರ ವಿವರಣೆ ನೀಡಿದೆ. ರಾಜ್ಯಾದ್ಯಂತ ಸುಮಾರು 8.56 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಊರ್ವದ ಪೊಂಪಾಯಿ ಶಾಲೆಯ 18 ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ಪರೀಕ್ಷೆ(ಏ.10) ತೆಗೆದುಕೊಂಡಿರುವುದು ಈ ಬಾರಿಯ ವಿಶೇಷ. [ತುಳು ಪರೀಕ್ಷೆಗೆ ವಿದ್ಯಾರ್ಥಿಗಳು ಸಿದ್ದ]

ಒಟ್ಟಾರೆ 3338 ಕೇಂದ್ರಗಳಲ್ಲಿ ನಡೆಯಲಿರುವ ಪರೀಕ್ಷೆಗೆ ಮಂಡಳಿ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಸೂಕ್ಷ್ಮ 148 ಕೇಂದ್ರಗಳು, ಅತಿಸೂಕ್ಷ್ಮ 50 ಕೇಂದ್ರಗಳ ಮೇಲೆ ತೀವ್ರ ನಿಗಾ ವಹಿಸಿದೆ. [ಎಸ್ಎಸ್ ಎಲ್ ಸಿ ಪರೀಕ್ಷೆ ಬಗ್ಗೆ ಗೊಂದಲವೇ, ಕರೆ ಮಾಡಿ]

Preparations on in full swing for SSLC exams

ಸಿಸಿಟಿವಿ ಅಳವಡಿಕೆ: ಖಾಸಗಿ ಶಾಲೆಗಳಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ಕೆಲವು ಸರ್ಕಾರಿ ಶಾಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಸಿಸಿಟಿವಿ ಅಳವಡಿಸದ ಪರೀಕ್ಷಾ ಕೇಂದ್ರಗಳ ಮೇಲೆ ನಕಲು ಮಾಡದಂತೆ ತಡೆಹಿಡಿಯಲು ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ಈ ಬಾರಿ ಒಟ್ಟು 709ಮೊಬೈಲ್ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ.ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. [ಎಸೆಸ್ಸೆಲ್ಸಿಯಲ್ಲಿ 'ಕ್ಲಾಸ್' ಬದಲಿಗೆ 'ಗ್ರೇಡ್']

ತೀವ್ರ್ ತಪಾಸಣೆ: ಮೊಬೈಲ್, ಐ-ಪಾಡ್ ಮುಂತಾದ ಸಾಧನಗಳನ್ನು ಬಳಸಿ ನಕಲು ಮಾಡುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಡುವಾಗಲೇ ಸಂಪೂರ್ಣ ತಪಾಸಣೆ ಮಾಡಲಾಗುವುದು. ಬಿಹಾರದಲ್ಲಿ ನಡೆದಂತೆ ಕಟ್ಟಡ ಹತ್ತಿ ಚೀಟಿ, ನೋಟ್ ಬುಕ್ ನೀಡುವುದನ್ನು ತಡೆಯಲು ಅಗತ್ಯ ಕ್ರಮ ಜರುಗಿಸಲಾಗಿದೆ. [ಎಸ್ ಎಸ್ಎಲ್ ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ]

ಮಾ.30ರಿಂದ ಏ.13ರ ವರೆಗೆ ಪರೀಕ್ಷೆಗಳು ನಡೆಯಲಿದ್ದು, ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು ಪರೀಕ್ಷೆಯ ಪ್ರಾರಂಭದಲ್ಲಿ 15 ನಿಮಿಷಗಳ ಕಾಲಾವಕಾಶ ಕಲ್ಪಿಸಲಾಗಿದೆ. ಈಗಾಗಲೇ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಿಸಲಾಗಿದ್ದು, ಯಾವುದೇ ಸಮಸ್ಯೆಗಳಿದ್ದರೆ ಪರೀಕ್ಷಾ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

English summary
Preparations on in full swing for Karnataka SSLC exam examinations scheduled between March 30 and April 13.For the first time in the history of SSLC examination, 18 students of Pompei High School Urwa, will write SSLC examination this year in Tulu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X