ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುನಃ ಬಿಜೆಪಿಯತ್ತ ಮುಖಮಾಡಿದ ಮುತಾಲಿಕ್

|
Google Oneindia Kannada News

ಬೆಂಗಳೂರು, ಜೂ. 27 : ಬಿಜೆಪಿಗೆ ಸೇರ್ಪಡೆಗೊಂಡು ಕೆಲವು ಗಂಟೆಗಳಲ್ಲೇ ಪಕ್ಷದಿಂದ ಹೊರಬಂದಿದ್ದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಮತ್ತೊಮ್ಮೆ ಬಿಜೆಪಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಬಿಜೆಪಿಗೆ ಸೇರಲು ನಾನು ಬಯಸುತ್ತಿದ್ದೇನೆ ಎಂದು ಮುತಾಲಿಕ್ ಹೇಳಿದ್ದಾರೆ.

ಗೋವಾದಲ್ಲಿ ಗುರುವಾರ ಮುಕ್ತಾಯಗೊಂಡ ಅಖಿಲ ಭಾರತೀಯ ಹಿಂದೂ ಅಧಿವೇಶನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಮುತಾಲಿಕ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಶೀಘ್ರದಲ್ಲೇ ಮಾತುಕತೆ ನಡೆಸುತ್ತೇನೆ. ಕರ್ನಾಟಕ ಕೆಲವು ಬಿಜೆಪಿ ನಾಯಕರು ನನ್ನ ಬಗ್ಗೆ ಮಾಡಿರುವ ಆಧಾರ ರಹಿತ ಆರೋಪಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ತಿಳಿಸಿದರು.

Pramod Muthalik

ಪಬ್ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ ಮುತಾಲಿಕ್, 2009ರಲ್ಲಿ ನಡೆದ ಪಬ್ ದಾಳಿಯ ಬಗ್ಗೆ ನಾವು ರಾಜ್ಯದ ಜನರಲ್ಲಿ ಕ್ಷಮೆ ಕೇಳಿದ್ದೇವೆ. ಪಬ್ ಸಂಸ್ಕೃತಿಯ ವಿರುದ್ಧ ನಾವು ಪ್ರತಿಭಟಿಸಿದ ರೀತಿ ಸರಿಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು. [ಪ್ರಮೋದ್ ಮುತಾಲಿಕ್ ಬಿಜೆಪಿ ಸೇರ್ಪಡೆ ರದ್ದು]

ರಾಜ್ಯದ ನಾಯಕರು ಕಾರಣ : ಮಾ.23ರಂದು ಬಿಜೆಪಿ ಸೇರಿದ ಕೆಲವೇ ಘಂಟೆಗಳಲ್ಲಿ ಪಕ್ಷದಿಂದ ನಾನು ಹೊರಗೆ ಬರಲು ಕರ್ನಾಟಕದ ಬಿಜೆಪಿ ನಾಯಕರ ಲಾಬಿಯೇ ಕಾರಣ ಎಂದು ಆರೋಪಿಸಿದ ಅವರು, ನಾನು ಪಕ್ಷ ಸೇರಿದರೆ ಪ್ರಬಲ ನಾಯಕನಾಗಿ ಬೆಳೆಯುತ್ತೇನೆ ಎಂಬ ಕಾರಣದಿಂದ ಕೆಲವು ನಾಯಕರು ನನ್ನ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿದರು ಎಂದರು.

ಮುತಾಲಿಕ್ ಪಕ್ಷ ಸೇರ್ಪಡೆಯನ್ನು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ವಿರೋಧಿಸಿದ್ದಾರೆ ಎಂಬ ಮಾತುಗಳು ಸತ್ಯ. ಗೋವಾ ಸಿಎಂಗೆ ಕರ್ನಾಟಕ ನಾಯಕರು ಹಲವಾರು ತಪ್ಪು ಮಾಹಿತಿಗಳನ್ನು ನನ್ನ ವಿರುದ್ಧ ನೀಡಿದ್ದಾರೆ. ರಾಜನಾಥ್ ಸಿಂಗ್ ಅವರು ಅದನ್ನು ನಂಬಿ ನನ್ನನ್ನು ಪಕ್ಷದಿಂದ ಹೊರಹಾಕಿದರು. ಆದರೆ, ಕೆಲವು ತಿಂಗಳ ಹಿಂದೆ ನಾನು ಮನೋಹರ್ ಪಾರಿಕ್ಕರ್ ಅವರನ್ನು ಭೇಟಿಯಾಗಿ ಎಲ್ಲಾಗೊಂದಲಗಳನ್ನು ಬಗೆಹರಿಸಿದ್ದೇನೆ ಎಂದು ತಿಳಿಸಿದರು.

ರಾಜ್ಯನಾಯಕರು ಏನು ಮಾಡಬಹುದು : ಪ್ರಮೋದ್ ಮುತಾಲಿಕ್ ಲೋಕಸಭೆ ಚುನಾವಣೆಯ ಸಮಯದಲ್ಲಿ ಬಿಜೆಪಿ ಸೇರಿ ಅಂದೇ ಪಕ್ಷದಿಂದ ಹೊರಹೋಗಿದ್ದರು. ನಂತರ ಧಾರವಾಡ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಸದ್ಯ ಅವರು ಪಕ್ಷಕ್ಕೆ ಮರಳುತ್ತೇನೆ ಎಂದರೆ ಬಿಜೆಪಿ ನಾಯಕರು ಒಪ್ಪಿಗೆ ನೀಡುವರೆ? ಕಾದು ನೋಡಬೇಕು.

English summary
Sri Ram Sene chief Pramod Muthalik has said that, he would try to join BJP, from where he was unceremoniously removed only a few hours after his inclusion in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X