ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ನದಿ ಮೇಲೆ ಹಾರಾಡಿದ ಹೆಲಿಕಾಪ್ಟರ್‌ನಲ್ಲಿ ಯಾರಿದ್ದರು?

|
Google Oneindia Kannada News

ಮಂಡ್ಯ, ಮಾ.12 : ಶ್ರೀರಂಗಪಟ್ಟಣದ ಸಂಗಮಕ್ಕೆ ಬಂದು ಅಸ್ಥಿ ರೀತಿಯ ವಸ್ತುವನ್ನು ಹೆಲಿಕಾಪ್ಟರ್‌ನಲ್ಲಿ ವಿಸರ್ಜಿಸಿರುವ ಬಗ್ಗೆ ಗೊಂದಲಗಳು ಮುಂದುವರೆದಿವೆ. ಹೆಲಿಕಾಪ್ಟರ್‌ನಲ್ಲಿ ಯಾವುದೇ ಆಕ್ಷೇಪಾರ್ಹ ವಸ್ತುಗಳು ಇರಲಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ್‌ ಬೊರಸೆ ಸ್ಪಷ್ಟನೆ ನೀಡಿದ್ದಾರೆ.

ಕಳೆದ ವಾರ ಕಾವೇರಿ ನದಿಯ ಸಂಗಮದಲ್ಲಿ ಅನಾ­ಮಿಕರು ಹೆಲಿ­ಕಾಪ್ಟರ್‌ನಲ್ಲಿ ಬಂದು ಅಸ್ಥಿ­ಯಂ­ತಹ ವಸ್ತುವನ್ನು ವಿಸರ್ಜನೆ ಮಾಡಿ ಹೋಗಿರುವ ಪ್ರಕರಣದ ಬಗ್ಗೆ ಮಂಡ್ಯದಲ್ಲಿ ಇನ್ನೂ ಚರ್ಚೆ ನಡೆಯುತ್ತಿದೆ. ಆದರೆ, ಅಸ್ಥಿ ವಿಸರ್ಜನೆ ಮಾಡಲು ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Mandya

ನದಿ ಮಟ್ಟದಿಂದ ಸುಮಾರು 50 ಮೀಟರ್‌ ಎತ್ತರದಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಿರುವ ಮತ್ತು ಬಿಳಿ ಬಣ್ಣದ ದೂಳಿನಂತಹ ವಸ್ತುವನ್ನು ನದಿಗೆ ಸುರಿಯುತ್ತಿರುವ 44 ಸೆಕೆಂಡ್‌ಗಳ ವಿಡಿಯೋ ಮೊಬೈಲ್‌ನಲ್ಲಿ ಹರಿದಾಡುತ್ತಿದೆ. ಸ್ಥಳೀಯ ವ್ಯಾಪಾರಿಗಳು ಈ ದೃಶ್ಯವನ್ನು ಸೆರೆ ಹಿಡಿದಿದ್ದು, ಮಾಧ್ಯಮಗಳಿಗೂ ನೀಡಿದ್ದಾರೆ. [ಕಾವೇರಿ ತೀರದಲ್ಲಿ ಕಾಮುಕನಿಗೆ ಚಪ್ಪಲಿ ಸೇವೆ]

ಎಸ್ಪಿ ಹೇಳುವುದೇನು? : ಶ್ರೀರಂಗಪಟ್ಟಣದ ಸಂಗಮದ ಬಳಿ ಬಂದ ಹೆಲಿಕಾಪ್ಟರ್‌ ಡೆಕ್ಕನ್ ಚಾರ್ಟರ್ಸ್ ಕಂಪೆನಿಗೆ ಸೇರಿದ್ದು, ಆದರೆ, ಇದರಲ್ಲಿ ಯಾವುದೇ ಆಕ್ಷೇಪಾರ್ಹ ವಸ್ತುಗಳು ಇರಲಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ್‌ ಬೊರಸೆ ಸ್ಪಷ್ಟನೆ ನೀಡಿದ್ದಾರೆ. [ಹೆಲಿಕಾಪ್ಟರ್ ಅವಘಡದಿಂದ ಸಿದ್ದು ಪಾರಾದದ್ದು ಹೇಗೆ?]

ಈ ಹೆಲಿಕಾಪ್ಟರ್‌ನಲ್ಲಿ ಇಬ್ಬರು ಪೈಲಟ್, ನಾಲ್ವರು ಪ್ರಯಾ­­ಣಿ­ಕರಿದ್ದರು. ಹೆಲಿ­ಕಾಪ್ಟರ್ ಏರ್‌ಟ್ರಾಫಿಕ್‌ ಕಂಟ್ರೋಲ್‌, ಏರ್ ಡಿಫೆನ್ಸ್‌ ಕ್ಲಿಯ­ರೆನ್ಸ್ ಪಡೆ­ದಿತ್ತು. ಎಲ್ಲಾ ರೀತಿಯ ರಕ್ಷಣಾ ತಪಾಸಣೆಗೂ ಒಳ­ಪಟ್ಟಿತ್ತು ಎಂದು ಹೇಳಿರುವ ಎಸ್ಪಿ ಅದರಲ್ಲಿದ್ದ ಪ್ರಯಾಣಿಕರು ಯಾರೂ ಎಂಬ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. [ಚಿತ್ರಕೃಪೆ : ಪಬ್ಲಿಕ್ ಟಿವಿ]

ಹೆಲಿಕಾಪ್ಟರ್ ಹಾರಾಟದ ವಿಡಿಯೋ ನೋಡಿ

English summary
Mandya : A video footage of a helicopter, flying low and dropping some powder-kind materials into the Cauvery River, being widely circulated through WhatsApp in Srirangapatna. Mandya police contacted the Department of Civil Aviation at Bengaluru and Mysuru to dig information about the helicopter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X