ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನಿ ಟ್ರ್ಯಾಪ್‌ ಜಾಲ ಬೆಂಗಳೂರಿನಲ್ಲಿ ಮಾತ್ರ ಇಲ್ಲ!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 23 : ಮಹಿಳೆಯರನ್ನು ಬಳಸಿಕೊಂಡು ಶ್ರೀಮಂತರಿಂದ ಹಣ ಸುಲಿಗೆ ಮಾಡುವ 'ಹನಿ ಟ್ರ್ಯಾಪ್‌' ದಂಧೆಯ ಜಾಲವೊಂದು ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದೆ. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧ ನಗರಗಳಲ್ಲಿಯೂ ಇಂತಹ ಜಾಲ ಕೆಲಸ ಮಾಡುತ್ತಿದೆ.

ಬೆಂಗಳೂರಿನಲ್ಲಿ ಗುರುವಾರ 'ಹನಿ ಟ್ರ್ಯಾಪ್‌' ದಂಧೆಯ ಜಾಲವೊಂದನ್ನು ಪತ್ತೆ ಹಚ್ಚಿದ್ದ ಸಿಸಿಬಿ ಪೊಲೀಸರು, ಈ ದಂಧೆಯಲ್ಲಿ ತೊಡಗಿದ್ದ ಮೂವರು ಪೊಲೀಸರು ಹಾಗೂ ಇಬ್ಬರು ಯುವತಿಯರನ್ನು ಬಂಧಿಸಿದ್ದರು. ಈ ಜಾಲ ಇಂತಹ 8 ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. [ಹನಿ ಟ್ರ್ಯಾಪ್ ಮೂಲಕ ಲೇಡಿ ಉಗ್ರರ ಎಂಟ್ರಿ?]

honey trap

ಹನಿ ಟ್ರ್ಯಾಪ್‌ನ ಹಲವು ಪ್ರಕರಣಗಳಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ಗಳು ಭಾಗಿಯಾಗಿರುತ್ತಾರೆ. ಇಂತಹ ಹಲವು ಪ್ರಕರಣಗಳು ರಾಜ್ಯದ ವಿವಿಧ ನಗರಗಳಲ್ಲಿ ನಡೆದಿವೆ. ಮಂಡ್ಯ ಮತ್ತು ಮೈಸೂರಿನಲ್ಲಿಯೂ ಇಂತಹ ಜಾಲ ಕೆಲಸ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. [ಹನಿ ಟ್ರ್ಯಾಪಿಂಗ್ ಮಾಡಿದ್ದ ನಟಿ ನಯನಾ]

ಹೇಗೆ ಕೆಲಸ ಮಾಡುತ್ತಿತ್ತು ಗ್ಯಾಂಗ್? : ಬೆಂಗಳೂರಿನಲ್ಲಿ ಮೂವರು ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಇಬ್ಬರು ಮಹಿಳೆಯರನ್ನು ಹನಿ ಟ್ರ್ಯಾಪ್‌ ದಂಧೆಯಲ್ಲಿ ತೊಡಗಿದ ಕಾರಣಕ್ಕೆ ಬಂಧಿಸಲಾಗಿದೆ. ದಂಧೆಯಲ್ಲಿ ಭಾಗಿಯಾದ ಪೊಲೀಸ್ ಪೇದೆಗಳು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು.

ದಂಧೆಯಲ್ಲಿ ತೊಡಗಿರುವ ಮಹಿಳೆ ಮೊದಲು ಶ್ರೀಮಂತರು, ಉದ್ಯಮಿಗಳು, ಸರ್ಕಾರಿ ನೌಕರರನ್ನು ರಹಸ್ಯವಾಗಿ ಕ್ಯಾಮರಾ ಇಟ್ಟಿರುವ ಅಪಾರ್ಟ್‌ಮೆಂಟ್‌ಗೆ ಕರೆಯುತ್ತಿದ್ದಳು. ಅವರು ಬಂದ ಬಳಿಕ ಪೊಲೀಸ್ ಪೇದೆಗಳು ದಾಳಿ ನಡೆಸುವ ನೆಪದಲ್ಲಿ ಅಲ್ಲಿಗೆ ತೆರಳುತ್ತಿದ್ದರು. ಇಬ್ಬರನ್ನು ಹಿಡಿಯುತ್ತಿದ್ದ ಅವರು ಪ್ರಕರಣದ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದರು.

ಸಿಕ್ಕಿಬಿದ್ದ ವ್ಯಕ್ತಿಯ ಬಳಿ ಹಣಕೊಟ್ಟರೆ ಪ್ರಕರಣ ದಾಖಲು ಮಾಡುವುದಿಲ್ಲ ಎಂದು ಹೇಳಿ ಹಣ ವಸೂಲಿಗೆ ಮುಂದಾಗುತ್ತಿದ್ದರು. ಅವರ ಬಳಿ 1.2 ರಿಂದ 2 ಲಕ್ಷದ ವರೆಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಈ ತಂಡ 8ಕ್ಕೂ ಅಧಿಕ ಹನಿ ಟ್ರ್ಯಾಪ್‌ ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಹಲವು ಗ್ಯಾಂಗ್‌ಗಳಿವೆ : ರಾಜ್ಯದ ಇತರ ನಗರಗಳಲ್ಲಿ ಇಂತಹ ಹಲವು ಗ್ಯಾಂಗ್‌ಗಳು ಕಾರ್ಯನಿರ್ವಹಿಸುತ್ತಿವೆ. ಕೆಜೆ ನಗರದಲ್ಲಿ ಡಾಕ್ಟರ್‌ಗೆ ಬೆದರಿಕೆ ಹಾಕುತ್ತಿದ್ದ ಇಂತಹ ಗ್ಯಾಂಗ್‌ ಅನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಹನಿ ಟ್ರ್ಯಾಪ್‌ನ ಹಲವು ಪ್ರಕರಣಗಳಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ಗಳು ಭಾಗಿಯಾಗಿರುತ್ತಾರೆ.

ಇಂತಹ ಜಾಲಕ್ಕೆ ಸಿಲುಕುವ ಜನರು ದೂರು ಕೊಡಲು ಮುಂದೆ ಬಂದರೆ ಬಂಧಿಸಲು ಸಹಾಯಕವಾಗುತ್ತದೆ ಎನ್ನುತ್ತಾರೆ ಪೊಲೀಸರು. ಆದರೆ, ಜಾಲಕ್ಕೆ ಸಿಲುಕುವ ಜನರು ಮರ್ಯಾದೆಗೆ ಅಂಜಿ ದೂರು ಕೊಡುವುದಿಲ್ಲ.

English summary
The CCB, Bengaluru recently busted a racket involving three police personnel who were involved in laying honey traps and allegedly blackmailing people. Sources say that this is not a racket restricted to Bengaluru alone, but similar incidents have taken place in various other parts of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X