ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಬದಿ ಸವಾರರಿಗೂ ಹೆಲ್ಮೆಟ್, ಜನರ ಆಕ್ರೋಶ

|
Google Oneindia Kannada News

ಬೆಂಗಳೂರು, ಜ.19 : ಬೈಕ್‌ ಸವಾರರ ಜೊತೆ ಹಿಂಬದಿಯಲ್ಲಿ ಕೂರುವವರು ಸಹ ಹೆಲ್ಮೆಟ್‌ ಧರಿಸಬೇಕಾಗುತ್ತದೆ ಎಂಬ ಸಾರಿಗೆ ಇಲಾಖೆಯ ಪ್ರಸ್ತಾವನೆಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ಕಾನೂನನ್ನು ಜಾರಿಗೆ ತರುವುದರಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ ಬೈಕ್‌ ಸವಾರರ ಜೊತೆ ಹಿಂಬದಿಯಲ್ಲಿ ಕೂರುವವರು ಹೆಲ್ಮೆಟ್‌ ಧರಿಸಬೇಕು ಎಂಬ ನಿಯಮ ಜಾರಿಗೆ ತರಲು ಸಾರಿಗೆ ಇಲಾಖೆ ಮುಂದಾಗಿದ್ದು, ಸರ್ಕಾರಕ್ಕೆ ಈ ಕುರಿತ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಬೆಂಗಳೂರು ಪೊಲೀಸರ ಫೇಸ್‌ಬುಕ್ ಪುಟದಲ್ಲಿ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. [ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವಾಗಲಿದೆ!]

helmets mandatory

ಇದು ಅರ್ಥವಿಲ್ಲದ ನಿಯಮ ಇಂತಹ ಆಲೋಚನೆ ಕೈಬಿಡಿ ಎಂದು ಕೆಲವು ಜನರು ಹೇಳಿದ್ದರೆ, ಸಾರಿಗೆ ಇಲಾಖೆ ಹೆಲ್ಮೆಟ್ ಕಂಪನಿ ಜೊತೆ ಸೇರಿಕೊಂಡು ಇಂತಹ ನಿಯಮ ಜಾರಿಗೆ ತರಲು ಹೊರಟಿದೆ ಎಂದು ಕೆಲವರು ದೂರಿದ್ದಾರೆ. ಈ ಬಗ್ಗೆ ಫೇಸ್‌ಬುಕ್ ಪುಟದಲ್ಲಿ ಜನರು ಹೇಳಿದ್ದೇನು ಇಲ್ಲಿದೆ ವಿವರ. [ಹಿಂಬಂದಿ ಸವಾರರಿಗೆ ಹೆಲ್ಮೆಟ್ ಬೇಕಾ? ನೀವು ವೋಟ್ ಮಾಡಿ]

* ಪ್ರೇಮ್ ಬಾಲ್ ಎನ್ನುವವರು ಹಿಂಬದಿ ಸವಾರಿಗೂ ಹೆಲ್ಮೆಟ್ ಕಡ್ಡಾಯ ಣ 'Not a good move' ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ಲಂಚಗುಳಿತನವನ್ನು ಹೆಚ್ಚಿಸುವ ಕಾನೂನು ಎಂದು ಹೇಳಿದರು ಅವರು, ಈಗಿರುವ ನಿಯಮಗಳನ್ನು ಬೆಂಗಳೂರಿನ ಫ್ರೇಜರ್ ಟೌನ್ ಮತ್ತು ಕಮ್ಮನಹಳ್ಳಿಯಲ್ಲಿ ಮೊದಲು ಜಾರಿಗೆ ತನ್ನಿ ಎಂದು ಸಲಹೆ ನೀಡಿದ್ದಾರೆ. [ಬೈಕ್ ಸವಾರರ ತಲೆಗೆ ಹೆಲ್ಮೆಟ್ ಹಾಕಿದ ಸರ್ಕಾರ!]

* ನವೀನ್ ರೆಡ್ಡಿ ಎಂಬುವವರು ಯಾರನ್ನಾದರೂ ಸ್ವಲ್ಪ ದೂರ ಕರೆದುಕೊಂಡು ಹೋಗಬೇಕಾದರೆ ನಾವು ಹೆಲ್ಮೆಟ್ ತೆಗೆದುಕೊಂಡು ಹೋಗಬೇಕು, ಇಂತಹ ನಿಯಮ ಜಾರಿಗೆ ತರುವುದು ಬೇಡ ಎಂದು ಪ್ರಸ್ತಾವನೆಯನ್ನು ವಿರೋಧಿಸಿದ್ದಾರೆ. [ಬೆಂಗಳೂರು ಪೊಲೀಸರ ಫೇಸ್ ಬುಕ್ ಪುಟ]

* ವಿಜೆ ದಳವಾಯಿ ಅವರು ಸಾರಿಗೆ ಇಲಾಖೆ ಪ್ರಸ್ತಾವನೆ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ರೇಜರ್ ಟೌನ್ ಮತ್ತು ಕಮ್ಮನಹಳ್ಳಿಯಲ್ಲಿ ಮೊದಲು ಇರುವ ನಿಯಮ ಜಾರಿಗೆ ತನ್ನಿ ಎಂದು ಹೇಳಿದ್ದಾರೆ. ಇಲ್ಲಿ ಬೈಕ್‌ನಲ್ಲಿ ಮೂವರು ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಾರೆ, ಚಿಕ್ಕ ಮಕ್ಕಳು ಕಾರು ಓಡಿಸುತ್ತಾರೆ. ಈ ಪ್ರದೇಶಗಳು ಬೆಂಗಳೂರು ವ್ಯಾಪ್ತಿಯಲ್ಲಿಲ್ಲವೇ ಎಂಬ ಅನುಮಾನ ಮೂಡುತ್ತಿದೆ ಎಂದು ಕಮೆಂಟ್ ಹಾಕಿದ್ದಾರೆ.

* ಸೋಮನಾಥ್ ಹಾಸನ್ ಎನ್ನುವವರು 'Super' ಇಂತಹ ನಿಯವ ಜಾರಿಗೆ ಬರಬೇಕು ಎಂದು ಇಲಾಖೆ ಪ್ರಸ್ತಾವನೆಗೆ ಬೆಂಬಲ ಸೂಚಿಸಿದ್ದಾರೆ.

* ನಾಗರಾಜ್ ಅವಿರಾಜ್ ಎನ್ನುವವರು ಇದು ಸಾರಿಗೆ ಇಲಾಖೆ ಹೆಲ್ಮೆಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಜಾರಿಗೆ ತರಲು ಹೊರಟಿರುವ 'adjustment' ಎಂದು ಕಮೆಂಟ್ ಮಾಡಿದ್ದಾರೆ.

* ಪರ್ವೇಜ್ ಆಲಂ ಎನ್ನುವವರು ಇದೊಂದು ತಲೆ ಬುಡವಿಲ್ಲದ ಪ್ರಸ್ತಾವನೆ ಎಂದು ಕಿಡಿ ಕಾರಿದ್ದಾರೆ. ಬೈಕ್ ಸವಾರ ಇನ್ನೊಂದು ಹೆಲ್ಮೆಟ್‌ಅನ್ನು ಹೇಗೆ ತಗೆದುಕೊಂಡು ಹೋಗಲು ಸಾಧ್ಯ? ಇಂತಹ ಕಾನೂನು ಜಾರಿಗೆ ತರುವ ಮುನ್ನ ಸರಿಯಾಗಿ ಆಲೋಚಿಸಿ ಎಂದು ಸಲಹೆ ನೀಡಿದ್ದಾರೆ.

* ವಿಜಯ್ ಗಾಯಕ್‌ವಾಡ್ ಅವರು ಈ ಪ್ರಸ್ತಾವನೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದು, ಇಂತಹ ನಿಯಮ ಜಾರಿಗೆ ತರುವ ಮುನ್ನ ಒಮ್ಮೆ ಚಿಂತಿಸಿ ಎಂದು ಹೇಳಿದ್ದಾರೆ. 'Think how much practical is that for public to follow' ಎಂದು ವಿಜಯ್ ಕಮೆಂಟ್ ಮಾಡಿದ್ದಾರೆ.

English summary
Many people opposed Transport Department proposal of Helmets for pillion riders in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X