ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.4 ಪೇಜಾವರಶ್ರೀಗಳ ಪರ್ಯಾಯ ಪೀಠ ಪುರಪ್ರವೇಶ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಉಡುಪಿ, ಡಿಸೆಂಬರ್, 29: ಪೇಜಾವರ ಮಠಾಧೀಶರಾದ ಪೇಜಾವರ ಶ್ರೀಗಳ ಪರ್ಯಾಯ ಪೀಠ ಪುರಪ್ರವೇಶ ಉತ್ಸವ ಜನವರಿ 4ರಂದು ನಡೆಯಲಿದ್ದು, ಇದರ ಅಂಗವಾಗಿ ಜನವರಿ 10ರಂದು ಹೊರೆ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಿಗದಿಪಡಿಸಲಾಗಿದೆ.

ಜನವರಿ 17ರ ಪರ್ಯಾಯ ದಿನ ಬೆಳ್ಳಿಗ್ಗೆ ಪೇಜಾವರ ರಕ್ತದಾನ ಸಮಿತಿ ಸಹಭಾಗಿತ್ವದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಸಂಸ್ಕೃತ ಕಾಲೇಜಿನ ಆವರಣದಲ್ಲಿ ರಕ್ತದಾನ ಶಿಬಿರ ನಡೆಯಲಿದ್ದು, ಪೇಜಾವರ ಶ್ರೀಗಳು ಚಾಲನೆ ನೀಡಲಿದ್ದಾರೆ ಎಂದು ಸಮಿತಿ‌ ಅಧ್ಯಕ್ಷ ಹಾಜಿ. ಕೆ. ಅಬೂಬಕ್ಕರ್ ಹೇಳಿದರು.[ಪೇಜಾವರ ಶ್ರೀಗಳಿಗೆ 'ನಿನ್ನ ತಿಥಿ ದಿನವೇ ಬಾಬ್ರಿ ಮಸೀದಿ ಕಟ್ತೇವೆ' ಅಂದವರ್ಯಾರು?]

Pejawar seer

ಜಿ. ಶಂಕರ್ ಟ್ರಸ್ಟ್‌ವತಿಯಿಂದ 6 ತಿಂಗಳ ಕಾಲಾವಧಿ 30,000ರೂ ಉಚಿತ ಆರೋಗ್ಯ ವಿಮೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೆ.ಎಮ್.ಸಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರು ಹಾಗೂ ಖ್ಯಾತ ವೈದ್ಯರಾದ ಡಾ.ಕ್ಯಾಪ್ಟನ್.ಎಲ್.ರಾಮಚಂದ್ರ ಇವರಿಬ್ಬರ ಆದರ್ಶ ವ್ಯಕ್ತಿತ್ವ ಮತ್ತು ಜನಸೇವೆ ಗುರುತಿಸಿ ನಮ್ಮ ಸಮಿತಿ ವತಿಯಿಂದ ಸನ್ಮಾನಿಸಲಾಗುವುದು ಎಂದರು.[ಪೇಜಾವರ ಮಠಾಧಿಪತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸಂದರ್ಶನ]

ಈ ಸಂದರ್ಭದಲ್ಲಿ ಮುಸ್ಲಿಂ ಪರ್ಯಾಯ ಸೌಹಾರ್ದ ಸಮಿತಿ ಉಪಾಧ್ಯಕ್ಷ ಮೊಹಮ್ಮದ್ ರಫೀಕ್ ದೊಡ್ಡಣಗುಡ್ಡೆ, ಮುಸ್ಲಿಂ ಪರ್ಯಾಯ ಸೌಹಾರ್ದ ಸಮಿತಿ ಪ್ರಧಾನ ಕಾರ್ಯದರ್ಶಿ ಹಮ್ಜತ್ ಹೆಮಾಡಿ ಕೋಡಿ, ಮೊಹಮ್ಮದ್ ನಬೀಲ್, ಮೊಹಮ್ಮದ್ ಆರೀಫ್ ಉಪಸ್ಥಿತರಿದ್ದರು.

ಹೊರೆ ಕಾಣಿಕೆ ನೀಡಲು ಇಚ್ಛಿಸುವ ಮುಸ್ಲಿಂ ಬಾಂಧವರು ನಿಗದಿತ ದಿನದೊಳಗೆ ನೀಡಬೇಕು. ಉಡುಪಿ ಜಿಲ್ಲಾ ಮುಸ್ಲಿಂ ಪರ್ಯಾಯ ಸೌಹಾರ್ಧ ಸಮಿತಿಯ ವತಿಯಿಂದ ನಿರ್ದಿಷ್ಟ ಸ್ಥಳದಲ್ಲಿ ತಂಪು ಪಾನೀಯ ವಿತರಿಸಲಾಗುವುದು ಎಂದು ತಿಳಿಸಿದರು.

English summary
Pejawar seer Paryaya peeta purapravesha procession held in Udupi on January 04th 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X