ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮತದಾನ ಕಡ್ಡಾಯ' ಸ್ಪಷ್ಟನೆ ಕೇಳಿದ ವಜುಭಾಯಿ ವಾಲಾ

|
Google Oneindia Kannada News

ಬೆಂಗಳೂರು, ಏ. 21 : ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕದ ಬಗ್ಗೆ ಕೆಲವೊಂದು ಸ್ಪಷ್ಟೀಕರಣ ಕೇಳಿರುವ ರಾಜ್ಯಪಾಲರು ಅದನ್ನು ಸರ್ಕಾರಕ್ಕೆ ಪುನಃ ವಾಪಸ್ ಕಳಿಸಿದ್ದಾರೆ. ಈ ವಿಧೇಯಕವನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ವಾಪಸ್ ಕಳಿಸುತ್ತಿರುವುದು ಇದು ಎರಡನೇ ಬಾರಿ.

ಇತ್ತೀಚೆಗೆ ಮುಕ್ತಾಯಗೊಂಡ ಬಜೆಟ್ ಅಧಿವೇಶನದಲ್ಲಿ 'ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ 2015'ದನ್ನು ಉಭಯ ಸದನಗಳಲ್ಲಿಯೂ ಅಂಗೀಕರಿಸಿ ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿ ಕೊಡಲಾಗಿತ್ತು. ಆದರೆ, ರಾಜ್ಯಪಾಲರು ವಿಧೇಯಕದಲ್ಲಿ ಸ್ಪಷ್ಟೀಕರಣ ಕೇಳಿದ್ದಾರೆ. [ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮತದಾನ ಕಡ್ಡಾಯ]

Vajubhai Vala

ವಿಧೇಯಕದ ಅಂಶಗಳು : ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಮತದಾನ ಕಡ್ಡಾಯಗೊಳಿಸುವುದು. ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸುವುದು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಅವಧಿಯನ್ನು 5 ವರ್ಷಕ್ಕೆ ಏರಿಕೆ ಮಾಡುವ ಅಂಶಗಳು ವಿಧೇಯಕದಲ್ಲಿವೆ.

ವಿಧೇಯಕದಲ್ಲಿರುವ 'ಮತದಾನ ಕಡ್ಡಾಯ' ಎಂಬ ಅಂಶದ ಬಗ್ಗೆ ರಾಜ್ಯಪಾಲರು ಸ್ಪಷ್ಟೀಕರಣ ಕೇಳಿ ಕೆಲವು ದಿನಗಳ ಹಿಂದೆ ವಿಧೇಯಕ ವಾಪಸ್ ಕಳಿಸಿದ್ದರು. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಇದಕ್ಕೆ ಉತ್ತರ ನೀಡಿ ರಾಜಭವನಕ್ಕೆ ಪತ್ರ ಬರೆದಿದ್ದರು.

ಸೋಮವಾರ ಗುಜರಾತ್‌ಗೆ ಹೋಗುವ ಮೊದಲು ರಾಜ್ಯಪಾಲ ವಜುಭಾಯಿ ವಾಲಾ ವಿಧೇಯಕದ ಕುರಿತು ಪುನಃ ಸ್ಪಷ್ಟೀಕರಣ ಕೇಳಿದ್ದಾರೆ. ಸಚಿವರು ನೀಡಿರುವ ಉತ್ತರ ರಾಜಕೀಯ ದೃಷ್ಟಿಕೋನದಿಂದ ಕೂಡಿದೆ. ರಾಜ್ಯದ ಅಡ್ವೊಕೇಟ್ ಜನರಲ್ ಮೂಲಕ ಕಾನೂನಾತ್ಮಕ ಉತ್ತರ ನೀಡುವಂತೆ ವಿಧೇಯಕವನ್ನು ವಾಪಸ್ ಕಳಿಸಿದ್ದಾರೆ.

ಸ್ಪಷ್ಟೀಕರಣ ಬೇಕಾದ ಅಂಶವೇನು? : ಚುನಾವಣೆಗಳಲ್ಲಿ 'ಮತದಾನ ಕಡ್ಡಾಯ' ಎಂದಾದರೆ, ಚುನಾವಣೆಗಳಲ್ಲಿ ಶೇ 80ರಷ್ಟು ಮತದಾನವಾಗಿದೆ ಅಂದುಕೊಂಡರೆ ಮತಹಾಕದವರಿಗೆ ಯಾವ ಶಿಕ್ಷೆ ನೀಡುತ್ತೀರಿ?. ಮತಹಾಕದ ಶೇ 20ರಷ್ಟು ಜನರನ್ನು ಗುರುತಿಸುವುದು ಹೇಗೆ? ಎಂಬ ಬಗ್ಗೆ ವಿವರಣೆ ನೀಡುವಂತೆ ಸರ್ಕಾರವನ್ನು ಕೇಳಿದ್ದಾರೆ.

English summary
Karnataka Governer Vajubhai Rudabhai Vala has sought clarifications from the government on Karnataka Panchayat Raj (amendment) Bill 2015, that seeks to make voting mandatory for panchayat elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X