ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತರ ಪದಚ್ಯುತಿಗೆ ಶಾಸಕರ ಸಹಿ ಸಂಗ್ರಹ

|
Google Oneindia Kannada News

ಬೆಂಗಳೂರು, ಜು. 03 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಹಣದ ಬೇಡಿಕೆ ಹಗರಣದ ವಿರುದ್ಧ ಪ್ರತಿಪಕ್ಷಗಳು ಹೋರಾಟ ಆರಂಭಿಸಿದ್ದು, ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರನ್ನು ಪದಚ್ಯುತಿಗೊಳಿಸಲು ಶಾಸಕರ ಸಹಿ ಸಂಗ್ರಹಕ್ಕೆ ಮುಂದಾಗಿವೆ. ವಿಧಾನಪರಿಷತ್ ಸದಸ್ಯರು ಶಾಸಕರ ಸಹಿ ಇರುವ ಪತ್ರವನ್ನು ಡಿ.ಎಚ್.ಶಂಕರಮೂರ್ತಿ ಅವರಿಗೆ ನೀಡಿದ್ದಾರೆ.

ಗುರುವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿರುವ ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಎಚ್.ಡಿ.ಕುಮಾರಸ್ವಾಮಿ, ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. [ಕರ್ನಾಟಕ ಲೋಕಾಯುಕ್ತದಲ್ಲಿ ಇದೇನಿದು ಹಗರಣ?]

y bhaskar rao

ನ್ಯಾ.ಭಾಸ್ಕರರಾವ್ ಅವರ ಪುತ್ರ ಅಶ್ವಿನ್‌ರಾವ್ ವಿರುದ್ಧ ಭ್ರಷ್ಟಾಚಾರದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ. ಎಫ್‌ಐಆರ್ ದಾಖಲಾಗಿದೆ. ನೈತಿಕ ಹೊಣೆ ಹೊತ್ತು ಭಾಸ್ಕರರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಆದರೆ, ಅವರು ರಾಜೀನಾಮೆ ನೀಡದಿರುವುದರಿಂದ ಪದಚ್ಯುತಿ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಶೆಟ್ಟರ್ ಮತ್ತು ಕುಮಾರಸ್ವಾಮಿ ತಿಳಿಸಿದರು. [ಅಶ್ವಿನ್ ರಾವ್ ವಿರುದ್ಧ FIR]

33 ಶಾಸಕರ ಸಹಿ : ವಿಧಾನಪರಿಷತ್‌ನಲ್ಲಿನ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಲೋಕಾಯುಕ್ತರ ಪದಚ್ಯುತಿಗೆ ಒತ್ತಾಯಿಸಿ 33 ಶಾಸಕರ ಸಹಿ ಇರುವ ಪತ್ರವನ್ನು ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಗುರುವಾರ ಸಲ್ಲಿಕೆ ಮಾಡಿದ್ದಾರೆ. ಸೋಮವಾರದ ಕಲಾಪದಲ್ಲಿ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. [ಲೋಕಾಯುಕ್ತರ ರಾಜೀನಾಮೆಗೆ ಆಪ್ ಬಿಗಿಪಟ್ಟು]

ಎಷ್ಟು ಶಾಸಕರ ಸಹಿ ಬೇಕು? : ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಪ್ರಕಾರ ಲೋಕಾಯುಕ್ತರನ್ನು ದುರ್ವರ್ತನೆ ಮತ್ತು ಅಸಮರ್ಥತೆ ಆಧಾರದ ಮೇಲೆ ಪದಚ್ಯುತಗೊಳಿಸಲು ಪ್ರತಿಪಕ್ಷಗಳು ಮುಂದಾಗಿವೆ. ಇದಕ್ಕಾಗಿ ನಿರ್ಣಯ ಮಂಡಿಸಲು ಅವಕಾಶ ನೀಡುವಂತೆ ಸಭಾಪತಿಗಳಿಗೆ ಶಾಸಕರ ಸಹಿ ಇರುವ ಮನವಿ ಪತ್ರ ಸಲ್ಲಿಸಲಾಗುತ್ತದೆ.

ಪದಚ್ಯುತಿ ನಿರ್ಣಯವನ್ನು ಮಂಡಿಸಲು ಸ್ಪೀಕರ್ ಅವಕಾಶ ನೀಡಿದರೆ, ಪ್ರತಿಪಕ್ಷ ನಾಯಕರು ನಿರ್ಣಯವನ್ನು ಮಂಡಿಸಬಹುದಾಗಿದೆ. ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಒಟ್ಟು ಸದಸ್ಯ ಬಲದ ಶೇ. 20ರಷ್ಟು ಸದಸ್ಯರ ಸಹಿ ಇರುವ ಪತ್ರವನ್ನು ಸ್ಪೀಕರ್‌ಗೆ ಸಲ್ಲಿಸಬೇಕಾಗುತ್ತದೆ.

English summary
Karnataka legislative council opposition members on Thursday submitted a memorandum to the D.H. Shankaramurthy, urging him to allow a motion to remove justice Bhaskar Rao from the post of lokayukta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X