ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಇಂಡಿಯಾ ಸಂಸ್ಥೆಯ ಪರಿಚಯ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಆಗಸ್ಟ್ 17 : ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಇಂಡಿಯಾ ಸಂಸ್ಥೆ ವಿರುದ್ಧ ರಾಜದ್ರೋಹ ಪ್ರಕರಣ ದಾಖಲಾಗಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಸ್ಥೆಯನ್ನು ನಿಷೇಧಿಸುವಂತೆ ಬೆಂಗಳೂರಿನಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದೆ.

ಬೆಂಗಳೂರಿನ ಯುನೈಟೆಡ್‌ ಥಿಯಾಲಾಜಿಕಲ್‌ ಕಾಲೇಜಿನಲ್ಲಿ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಸಂಸ್ಥೆ ಆಗಸ್ಟ್ 13ರಂದು 'ಬ್ರೋಕನ್‌ ಫ್ಯಾಮಿಲೀಸ್‌' ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಇಲ್ಲಿ ದೇಶ ವಿರೋಧಿ ಘೋಷಣೆ ಕೂಗಲಾಗಿದೆ ಎಂಬುದು ಆರೋಪವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.[ರಾಜದ್ರೋಹದ ಆರೋಪದಲ್ಲಿ ವಿಡಿಯೋ ಪ್ರಮುಖ ಸಾಕ್ಷಿ]

Amnesty

ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಇಂಡಿಯಾ ಸಂಸ್ಥೆ ಹುಟ್ಟಿದ್ದು ಹೇಗೆ?, ಇದರ ಕಾರ್ಯಗಳೇನು ಇಲ್ಲಿದೆ ಸಂಕ್ಷಿಪ್ತ ಮಾಹಿತಿ...[English ನಲ್ಲಿ ಓದಿ]

ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಇಂಡಿಯಾ ಒಂದು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ. ಮಾನವ ಹಕ್ಕುಗಳ ರಕ್ಷಣೆಗಾಗಿ ಇದು ಹೋರಾಟ ಮಾಡುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಯಾದರೆ ಅದನ್ನು ಸರಿಪಡಿಸಲು ಜನಾಂದೋಲನ ನಡೆಸುತ್ತದೆ. ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಈ ಸಂಸ್ಥೆ ಒಟ್ಟು 7 ಮಿಲಿಯನ್ ಸದಸ್ಯರನ್ನು ಹೊಂದಿದೆ.

ಲಂಡನ್‌ನಲ್ಲಿ 1961ರಲ್ಲಿ ಈ ಸಂಸ್ಥೆಯನ್ನು ಪೀಟರ್ ಬೆನೆಸನ್ ಆರಂಭಿಸಿದರು. ಈ ಸಂಘಟನೆಯು 1977 ರಲ್ಲಿ 'ಚಿತ್ರಹಿಂಸೆಯ ವಿರುದ್ಧ ನಡೆಸಿದ ಪ್ರಚಾರಾಂದೋಲನಕ್ಕಾಗಿ' ನೋಬಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದೆ. ಮಾನವ ಹಕ್ಕುಗಳ ಬಗ್ಗೆ ಹೋರಾಟ ಮಾಡುವ ಸಂಸ್ಥೆಗಳ ಪೈಕಿ ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರುಗಳಿಸಿದೆ.[ರಾಜದ್ರೋಹದ ಆರೋಪ, ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸ್ಪಷ್ಟನೆಗಳು]

ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಸತ್ಯಕ್ಕಾಗಿ ಹುಡುಕಾಟ ನಡೆಸುತ್ತದೆ. ಏನು ನಡೆಯುತ್ತಿದೆ ಎಂಬುದನ್ನು ಬಹಿರಂಗ ಪಡಿಸುತ್ತದೆ. ಅಗತ್ಯವಿದ್ದರೆ ಹಕ್ಕುಗಳ ರಕ್ಷಣೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಜನಾಂದೋಲನವನ್ನು ರೂಪಿಸುತ್ತದೆ. ಭಾರತದಲ್ಲಿ 65 ಸಾವಿರಕ್ಕೂ ಅಧಿಕ ಸದಸ್ಯರನ್ನು ಸಂಸ್ಥೆ ಹೊಂದಿದೆ.[ದೇಶ ವಿರೋಧಿ ಘೋಷಣೆ, ಬೆಂಗಳೂರು ಪೊಲೀಸರಿಂದ FIR]

1970ರಲ್ಲಿ ಆಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಕೈದಿಗಳಿಗೆ ನ್ಯಾಯ ಒದಗಿಸುವ ಹೋರಾಟವನ್ನು ಮಾಡಿತು. 'ನ್ಯಾಯಯುತ-ವಿಚಾರಣೆ" ಮತ್ತು ವಿಚಾರಣೆನಡೆಸದೇ ಅವರನ್ನು ದೀರ್ಘಕಾಲ ಇರಿಸಿಕೊಳ್ಳುವುದನ್ನು ವಿರೋಧಿಸಿತು. ಕೈದಿಗಳಿಗೆ ನೀಡುವ ಚಿತ್ರಹಿಂಸೆಯನ್ನು ತಡೆಯಲು ಸಲಹೆಗಳನ್ನು ನೀಡಿತು.[Amnesty International India ವೆಬ್ ಸೈಟ್]

1980ರ ಸುಮಾರಿಗೆ ಆಮ್ನೆಸ್ಟಿ ಇಂಟರ್ ನ್ಯಾಶನಲ್ ಹೆಚ್ಚು ಟೀಕೆಗಳಿಗೆ ಗುರಿಯಾಯಿತು. ಯುಎಸ್‌ಎಸ್‌ಆರ್ ಸಂಸ್ಥೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿತು. ಮೊರೊಕ್ಕೊನ್ ಸರ್ಕಾರವು ಸಂಸ್ಥೆಯನ್ನು ಕಾನೂನು ಉಲ್ಲಂಘಿಸುವ ಒಬ್ಬ ಪ್ರತಿಪಾದಕ ಎಂದು ಟೀಕಿಸಿತು.

ವೇಗವಾಗಿ ಬೆಳೆಯಿತು : 1990ರ ದಶಕದಲ್ಲಿ ಆಮ್ನೆಸ್ಟಿ ಇಂಟರ್ ನ್ಯಾಶನಲ್ ವೇಗವಾಗಿ ಬೆಳೆಯಿತು. ಸುಮಾರು 150 ದೇಶಗಳ 2.2 ದಶಲಕ್ಷ ಜನರು ಇದರ ಸದಸ್ಯರಾದರು. ದಕ್ಷಿಣ ಆಫ್ರಿಕಾದಲ್ಲಿನ ವರ್ಣದ್ವೇಷ, ಜನಾಂಗೀಯ ಕಲಹದ ಬಗ್ಗೆ ಮತ್ತು ಪೊಲೀಸರ ದಬ್ಬಾಳಿಕೆ ಬಗ್ಗೆ ಸರ್ಕಾರದ ಗಮನ ಸೆಳೆಯಿತು.

ಆಮ್ನೆಸ್ಟಿ ಇಂಟರ್ ನ್ಯಾಶನಲ್ ಪ್ರಮುಖವಾಗಿ ಮಹಿಳೆಯರ ಹಕ್ಕುಗಳು, ಮಕ್ಕಳ ಹಕ್ಕುಗಳು, ಚಿತ್ರಹಿಂಸೆಗಳಿಗೆ ಕಡಿವಾಣ, ಮರಣ ದಂಡನೆ ಶಿಕ್ಷೆ ಕ್ರಮವನ್ನು ರದ್ದುಪಡಿಸುವುದು, ನಿರಾಶ್ರಿತರುಗಳ ಹಕ್ಕುಗಳ ರಕ್ಷಣೆ, ಕೈದಿಗಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಕೆಲಸ ಮಾಡುತ್ತದೆ.[ಕನ್ನಡದಲ್ಲಿ ಹೆಚ್ಚಿನ ವಿವರಗಳನ್ನು ಓದಿ]

ಸದ್ಯ ಪ್ರಪಂಚದ ಅನೇಕ ದೇಶಗಳಲ್ಲಿ ಆಮ್ನೆಸ್ಟಿ ಇಂಟರ್ ನ್ಯಾಶನಲ್ ಸದಸ್ಯರನ್ನು ಹೊಂದಿದೆ. ಬೇರೆ-ಬೇರೆ ದೇಶಗಳಲ್ಲಿರುವ ಸದಸ್ಯರನ್ನು ಸಂಘಟಿತ 'ಸೆಕ್ಸೆನ್ಸ್' ಎಂಬ ವಿಭಾಗದ ಮೂಲಕ ಗುರುತಿಸಲಾಗುತ್ತದೆ. ಈ ಸೆಕ್ಸೆನ್‌ಗಳು ಸಂಸ್ಥೆಯ ಮೂಲತತ್ವಗಳು ಮತ್ತು ಕಾರ್ಯಗಳನ್ನು ಕೈಗೆತ್ತಿಕೊಂಡು ಗುಂಪುಗಳನ್ನು ಸೃಷ್ಟಿಸಿಕೊಂಡು ಕೆಲಸ ಮಾಡುತ್ತಾರೆ.

English summary
Charges of sedition filed against Amnesty International India in Bengaluru. Know about Amnesty International.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X