ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್‌ಇಡಿ, ಸಿಎಫ್ಎಲ್, ಸಾಮಾನ್ಯ ಬಲ್ಬ್‌ ನಡುವಿನ ವ್ಯತ್ಯಾಸ

|
Google Oneindia Kannada News

ಬೆಂಗಳೂರು, ಅಕ್ಟೋಬರ್. 05: ವಿದ್ಯುತ್ ಅಭಾವದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಎಲ್ ಇಡಿ ಬಲ್ಬ್ ಕಡ್ಡಾಯ ಮಾಡಲು ಮುಂದಾಗಿದೆ. ಅಲ್ಲದೇ 2016ರ ಜನವರಿಯಿಂದ ಎಲ್ ಇಡಿ ಬಲ್ಬ್ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಪ್ರಕಟಿಸಿದ್ದಾರೆ.

ಆದರೆ ಜನರಲ್ಲಿ ಈ ಎಲ್ ಇಡಿ, ಸಿಎಫ್ ಎಲ್ ಮತ್ತು ಸಾಮಾನ್ಯ ಬಲ್ಬ್ ಗಳ ನಡುವಿನ ವ್ಯತ್ಯಾಸದ ಬಗ್ಗೆ ಗೊಂದಲಗಳಿವೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಬಲ್ಬ್ ಗಳ ನಡುವಿನ ಸಾಮ್ಯತೆ ಮತ್ತು ವ್ಯತ್ಯಾಸದ ವಿವರಣೆಯನ್ನು ಯಾರೂ ನೀಡುತ್ತಿಲ್ಲ. ಸರ್ಕಾರ ಜಾಹೀರಾತು ಹೊರಡಿಸುತ್ತಿದೆಯೇ ವಿನಃ ಏತಕ್ಕಾಗಿ ಉಪಯೋಗ ಮಾಡಬೇಕು ಎಂಬುದನ್ನು ಪರಿಣಾಮಕಾರಿಯಾಗಿ ತಿಳಿಸಿ ಹೇಳುತ್ತಿಲ್ಲ.[ಎಲ್ ಇಡಿ ಬಲ್ಬ್ ಬಳಕೆಯಿಂದ ಒದಗುವ 9 ಅನುಕೂಲಗಳು]

karnataka

ಇನ್ನು ಮುಂದೆ ಮಾರುಕಟ್ಟೆಯಲ್ಲಿ ಕೇವಲ ಎಲ್ ಇಡಿ ಮಾತ್ರ ಸಿಗುತ್ತದೆಯೇ? ಅಥವಾ ಹಳೆಯ ಮಾದರಿ ಬಲ್ಬ್ ಗಳು ಸಿಗುತ್ತವೆಯೇ? ದರ ಏಷ್ಟು? ಎಂಬ ಅನೇಕ ಪ್ರಶ್ನೆಗಳಿವೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.[ನೋಂದಣಿ ಸಂಖ್ಯೆ ಇದ್ರೆ ಸಾಕು, ಒಂದೆ ಕ್ಲಿಕ್ ನಲ್ಲಿ ಎಲ್ಲ ಮಾಹಿತಿ]

ವಿವರ ಎಲ್ ಇಡಿ
ಸಾಮಾನ್ಯ
ಸಿಎಫ್ ಎಲ್
ಆಯುಷ್ಯ 50 ಸಾವಿರ ಗಂಟೆ
1200 ಗಂಟೆ
8000 ಗಂಟೆ
ತೆಗೆದುಕೊಳ್ಳುವ ವಿದ್ಯುತ್(60 ವಾಟ್ ನ ಬಲ್ಬ್ ಅಂದುಕೊಂಡರೆ)
6-8 ವಾಟ್
60 ವಾಟ್
13-15 ವಾಟ್
ವರ್ಷಕ್ಕೆ ಎಷ್ಟು?
329 ಕಿಲೋ ವಾಟ್
3285 ಕಿಲೋ ವಾಟ್
767 ಕಿಲೋ ವಾಟ್
ಹೊರ ಹಾಕುವ ಕಾರ್ಬನ್ ಡೈ ಆಕ್ಸೈಡ್(ವರ್ಷಕ್ಕೆ)
451 ಪೌಂಡ್ಸ್
4500 ಪೌಂಡ್ಸ್
1051 ಪೌಂಡ್ಸ್
ಕಡಿಮೆ ಉಷ್ಣತೆಯಲ್ಲಿ ಕೆಲಸ ಮಾಡುತ್ತದೆಯೇ?
ಮಾಡುತ್ತದೆ. ಸಮಸ್ಯೆ ಇಲ್ಲ
ಕೆಲವೊಮ್ಮೆ ಕೈ ಕೊಡಬಹುದು
-10 ಡಿಗ್ರಿಗಿಂತ ಕಡಿಮೆ ಉಷ್ಣತೆಯಲ್ಲಿ ಕೆಲಸ ಮಾಡುವುದಿಲ್ಲ
ಹ್ಯುಮಿಡಿಟಿ (ತೇವಾಂಶ)ಪರಿಣಾಮ
ಇಲ್ಲ ಕೆಲವೊಮ್ಮೆ
ಇದೆ
ಬಳಕೆಯಲ್ಲಿನ ವ್ಯತ್ಯಾಸ ಪರಿಣಾಮ ಬೀರುತ್ತದೆಯೇ?
ಇಲ್ಲ ಕೆಲವೊಮ್ಮೆ ಹೌದು, ಒಟ್ಟು ಅವಧಿ ಕಡಿಮೆ ಆಗಬಹುದು

ಅಪಘಾತ ಸಂಭವ

ಬಹಳ ಕಡಿಮೆ
ಬೆಂಕಿ ತಗುಲುವ ಸಾಧ್ಯತೆ ಹೆಚ್ಚು
ಅವಧಿ ಮುಗಿಯುತ್ತಿರವ ವೇಳೆ ಬೆಂಕಿ ಹೊತ್ತಿಕೊಳ್ಳಬಹುದು

ಬಳಕೆ

ಬಳಕೆ ಬಹಳ ಸುಲಭ
ಬಳಕೆ ಕಷ್ಟ ಸಾಧ್ಯ, ಒಡೆದು ಹೋಗುವ ಸಾಧ್ಯತೆ ಹೆಚ್ಚು
ಇದು ಸಹ ಗಾಜಿನದ್ದಾದ್ದರಿಂದ ಎಚ್ಚರಿಕೆಯಿಂದಿರಬೇಕು
English summary
If you're still on the fence over which energy-efficient alternative to choose, you're running out of time. Incandescent bulbs are being phased out and will be a thing of the past by next year. Since lighting our homes accounts for about one-quarter of our electric bills, the new energy-efficient bulbs are going to save us money in the long run. But which should we choose? Here is the difference between all kind of bulbs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X