ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಲಿಂಗಾಯತರನ್ನು ಒಬಿಸಿಗೆ ಸೇರಿಸಿ', ಬೃಹತ್ ಕಾಲ್ನಡಿಗೆ ಜಾಥಾ

By Mahesh
|
Google Oneindia Kannada News

ಬಾಗಲಕೋಟೆ, ಮಾ.2: ಸಂವಿಧಾನ ವಿರೋಧಿ ಜಾತಿ ಜನಗಣತಿಯನ್ನು ವಿರೋಧಿಸಿ ಹಾಗೂ ಕೇಂದ್ರದಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಎಲ್ಲಾ ಲಿಂಗಾಯತ ಪಂಗಡಗಳನ್ನು ಸೇರಿಸಬೇಕೆಂದು ಆಗ್ರಹಿಸಿ ವೀರಶೈವ ಲಿಂಗಾಯತ ಯುವ ವೇದಿಕೆ ಹೋರಾಟಕ್ಕಿಳಿದಿದೆ. ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ಹೇಳಿದ್ದಾರೆ.

ವೀರಶೈವ ಸಮುದಾಯದ ಒಗ್ಗಟ್ಟಿಗಾಗಿ, ಸಮಾಜದ ಒಳಿತಿಗಾಗಿ, ಸಮಾಜದ ಉಳಿವಿಗಾಗಿ ರಾಜ್ಯದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಕಳೆದ ಮೂರ್ನಾಲ್ಕು ವರ್ಷಗಳಿಂದ ದುಡಿಯುತ್ತಿದೆ. ಯುವಕರ ಹಾಗೂ ವಿದ್ಯಾರ್ಥಿಗಳ ಮುನ್ನಡೆಗೆ ಸಾಕಷ್ಟು ಜನಪರ ಹೋರಾಟಗಳನ್ನುಮಾಡಿಕೊಂಡು ಬರುತ್ತಿದೆ. [ರಾಜ್ಯದಲ್ಲೇ ಪ್ರಥಮ, ಮಠಾಧೀಶರಿಗಾಗಿ ವಿಶ್ರಾಂತಿ ಗೃಹ]

ಮಾರ್ಚ್ 3ರಿಂದ ವಿಶ್ವಗುರು ಬಸವಣ್ಣನವರು ಐಕ್ಯವಾದ ಸ್ಥಳ ಕೂಡಲಸಂಗಮದಿಂದ ರಾಜಧಾನಿ ಬೆಂಗಳೂರಿನವರೆಗೆ ಬೃಹತ್ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.

ಮಾರ್ಚ್ 3 ರಂದು ಬೆಳಗ್ಗೆ 10. 30ಕ್ಕೆ ಕೂಡಲ ಸಂಗಮದಿಂದ ಆರಂಭಗೊಳ್ಳುವ ಕಾಲ್ನಡಿಗೆ ಜಾಥಾಕ್ಕೆ ಲಿಂಗಾಯತ ಪಂಚಮಸಾಲಿ ಮಹಾಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಚಾಲನೆ ನೀಡಲಿದ್ದಾರೆ. [ಜಾತಿ ಗಣತಿಯಲ್ಲಿ ಸರಿಯಾದ ಮಾಹಿತಿ ಕೊಡಿ]

ಅವರೊಂದಿಗೆ ಪಾಂಡೋಮಟ್ಟಿಯ ಶ್ರೀ ಗುರುಬಸವ ಸ್ವಾಮೀಜಿ, ಬುರಣಾಪುರದ ಸಿದ್ದರೂಢಾ ಆಶ್ರಮದ ಯೋಗೇಶ್ವರಿ ಮಾತಾಜೀ ಸೇರಿದಂತೆ ನಾಡಿನ ಹಲವಾರು ವೀರಶೈವ ಲಿಂಗಾಯತ ಮಠಾಧೀಶರು, ಚಿಂತಕರು ಇದರಲ್ಲಿ ಭಾಗಿಯಾಗಲಿದ್ದಾರೆ.

Minority status to Veerashaiva Lingayat community demand : Yuva Vedike

ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಒಟ್ಟು 703 ಕಿಮೀಗಳನ್ನು 23 ದಿನಗಳಲ್ಲಿ ಜಾಥಾ ಸಾಗಲಿದೆ. ಜಾಥಾ ಸಾಗುವ ಹಾದಿಯಲ್ಲಿ ಅಲ್ಲಲ್ಲಿ ಜನಜಾಗೃತಿ ಸಭೆ, ಚಿಂತನಗೋಷ್ಠಿ ಇನ್ನಿತರ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ.

ಜಾಥಾ ಹಾದಿ: ಕೂಡಲ ಸಂಗಮದಿಂದ ಹೊರಟು ಬೇವೂರ, ಬಾಗಲಕೋಟೆ, ಬಾದಾಮಿ, ರೋಣ, ಅಬ್ಬಿಗೇರೆ, ಗದಗ, ಅನ್ನಿಗೆರೆ, ಹುಬ್ಬಳ್ಳಿ, ತಿಮ್ಮಾಪುರ, ಶಿಗ್ಗಾಂವಿ, ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಭರಮಸಾಗರ, ಚಿತ್ರದುರ್ಗ, ಐಮಂಗಲ, ಹಿರಿಯೂರು, ಶಿರಾ, ಸಿಬಿ, ತುಮಕೂರು, ದಾಬಸಪೇಟೆ ಕ್ರಾಸ್, ನೆಲಮಂಗಲ ಮಾರ್ಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪೂರ್ಣಗೊಳ್ಳಲಿದೆ. [ಜಾತಿ ಗಣತಿ : ಏಕೆ, ಏನು, ಇದೆಲ್ಲಾ ಬೇಕೆ?]

ಮಾರ್ಚ್ 25 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿದೆ. ನಡೆದಾಡುವ ದೇವರೆಂದೇ ಕರೆಸಿಕೊಳ್ಳುವ ಸಿದ್ದಗಂಗಾ ಮಠದ ಶ್ರೀ ಡಾ. ಶಿವಕುಮಾರಸ್ವಾಮಿಗಳು, ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಶ್ರೀ ಗದುಗಿನ ತೋಂಟದ ಸ್ವಾಮಿಗಳು, ಪಂಚಮಸಾಲಿ ಮಹಾಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು, ಪಾಂಡೋಮಟ್ಟಿಯ ಶ್ರೀ ಗುರುಬಸವ ಸ್ವಾಮೀಜಿಗಳು ಅಲ್ಲದೇ, ನಾಡಿನ ಹಲವಾರು ಮಠಾಧೀಶರು, ಚಿಂತಕರು ಹಾಗೂ ಸಮಾಜದ ಸಾಧಕರು ಭಾಗಿಯಾಗಲಿದ್ದಾರೆ.

ಈ ಬಹಿರಂಗ ಸಭೆಗೆ ನಾಡಿನ ಮೂಲೆ ಮೂಲೆಯಿಂದ 30ಸಾವಿರಕ್ಕೂ ಹೆಚ್ಚು ಸಮುದಾಯದ ಬಂಧುಗಳು ಪಾಲ್ಗೊಳ್ಳಲಿದ್ದಾರೆ ಈ ಬಹಿರಂಗ ಸಭೆ ಮೂಲಕ ಸರ್ಕಾರ ತರಲು ಮುಂದಾಗಿರುವ ಜಾತಿ ಜನಗಣತಿಯನ್ನು ವಿರೋಧಿಸಿ ಹಾಗೂ ಕೇಂದ್ರ ಎಲ್ಲಾ ಲಿಂಗಾಯತ ಉಪಪಂಗಡಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಹಕ್ಕೋತ್ತಾಯ ಮಾಡಲಾಗುವುದು. [ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಶರಣ, ಶರಣೆಯರು]

ಇದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ನಾಡಿನ ಎಲ್ಲಾ ವೀರಶೈವ ಲಿಂಗಾಯತ ಮಠಾಧೀಶರೊಂದಿಗೆ ಬೃಹತ್ ಪ್ರಮಾಣದಲ್ಲಿ ಭಾರೀ ಹೋರಾಟ ಮಾಡಲಾಗುವುದೆಂದು ಎಚ್ಚರಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಪ್ರಶಾಂತ್ ಕಲ್ಲೂರ್,ರಾಜ್ಯಾಧ್ಯಕ್ಷರು,
ವೀರಶೈವ ಲಿಂಗಾಯತ ಯುವ ವೇದಿಕೆ
ದೂ: 99721 29393 / 92424 44444

ಒನ್ ಇಂಡಿಯಾ ಸುದ್ದಿ

English summary
Veerashaiva Lingayat Yuva Vedike has urged Siddaramaiah Government abolish Caste based census and include all Lingayat caste and tribe in to OBC category. Yuva vedike has organised a Padayatra from Kudala Sangama, Bagalkot to Bengaluru from March 3 said State president Prashanth Kallur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X