ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ಮನೆಯಲ್ಲಿಯೇ ಕುಳಿತು ಎಪಿಎಲ್ ಕಾರ್ಡ್ ಪಡೆಯಿರಿ

By Ramesh
|
Google Oneindia Kannada News

ಬೆಂಗಳೂರು, ಜನವರಿ. 06 : ಬಡತನ ರೇಖೆಗಿಂತ ಮೇಲೆ ಇರುವ ಕುಟುಂಬಗಳು ಇನ್ಮುಂದೆ ಎಪಿಎಲ್ ಪಡಿತರ ಚೀಟಿ ಪಡೆಯಲು ಸರಕಾರಿ ಕಚೇರಿಗಳಿಗೆ ತೆರಳಿ ಜಂಜಾಟದ ಮಧ್ಯೆ ಕಾರ್ಡ್ ಪಡೆಯುವ ಅಗತ್ಯವಿಲ್ಲ.

ಹೌದು.. ಏಕೆಂದರೆ, ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಎಪಿಎಲ್ ಕಾರ್ಡ್ ಪಡೆಯಬಹುದು. ಎಪಿಎಲ್ ಕಾರ್ಡ್ ಪಡೆಯಲು ಕುಟುಂಬದ ಒಬ್ಬ ಸದಸ್ಯರ ಆಧಾರ್ ಕಾರ್ಡ್ ಸಾಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

NOW, RATION CARDS DELIVERED AT YOUR DOORSTEP says UT Khader

ಜನವರಿ 9ರ ಬಳಿಕ ಜನರು ಮನೆಯಲ್ಲಿಯೇ ಕುಳಿತು ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಿ ಎಪಿಎಲ್ ಕಾರ್ಡ್ ಪಡೆಯಬಹುದಾಗಿದೆ. ವೆಬ್ ಸೈಟ್ ನಲ್ಲಿ ಪೂರಕ ದಾಖಲೆಗಳನ್ನು ಸಲ್ಲಿಸಿದರೆ 15 ದಿನದಲ್ಲಿ ಸಂಬಂಧಪಟ್ಟವರ ವಿಳಾಸಕ್ಕೆ ಎಪಿಎಲ್ ಕಾರ್ಡ್ ನ ಮೂಲಪ್ರತಿ ಅಂಚೆ ಮೂಲಕ ಮನೆ ಬಾಗಿಲಿಗೆ ಬಂದು ಬೀಳಲಿದೆ.

ಬಿಪಿಎಲ್ ಕಾರ್ಡ್ ಗೆ ಹೊಸದಾಗಿ ಅರ್ಜಿ ಹಾಕಿ : 'ಇದುವರೆಗೂ ಬಿಪಿಎಲ್ ಕಾರ್ಡ್ ಪಡೆಯಲು 10 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರು ಹೊಸದಾಗಿ ಪುನಃ ಅರ್ಜಿ ಸಲ್ಲಿಸಬೇಕಾಗಿದೆ' ಎಂದು ಯು.ಟಿ.ಖಾದರ್ ಹೇಳಿದರು.

ಬಿಪಿಎಲ್ ಕಾರ್ಡ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಎಪಿಎಲ್ ಕಾರ್ಡ್ ಪಡೆಯುವವರು ಕುಟುಂಬದಲ್ಲಿ ಒಬ್ಬರ ಆಧಾರ್ ಕಾರ್ಡ್ ನೀಡಿದರೆ ಸಾಕಾಗುತ್ತದೆ. ಉಳಿದಂತೆ ಕುಟುಂಬದವರ ಸಂಖ್ಯೆ ಮತ್ತು ವಿಳಾಸವನ್ನು ನೀಡಬೇಕು ಎಂದರು.

English summary
People can upload their family details sitting at home and cards will be delivered to their doorstep. After revising parameters for issuing of BPL Ration cards. Said Food and civil supplies minister UT Khader on Thursday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X