ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಕಚೇರಿಗಳಲ್ಲಿ ತಿಮ್ಮಪ್ಪನ ದರ್ಶನದ ಟಿಕೆಟ್ ಸಿಗುತ್ತೆ

|
Google Oneindia Kannada News

ಬೆಂಗಳೂರು, ಜನವರಿ 01 : ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹೋಗುವ ಭಕ್ತರಿಗೆ ಸಿಹಿ ಸುದ್ದಿ. ರಾಜ್ಯದ ಎಲ್ಲಾ ಪ್ರಧಾನ ಅಂಚೆ ಕಚೇರಿಗಳಲ್ಲಿ ಜನವರಿ 1ರಿಂದ ತಿಮ್ಮಪ್ಪನ ವಿಶೇಷ ದರ್ಶನದ ಆನ್‌ಲೈನ್‌ ಟಿಕೆಟ್‌ ವಿತರಣಾ ವ್ಯವಸ್ಥೆ ಜಾರಿಗೆ ಬರಲಿದೆ.

ಆಂಧ್ರಪ್ರದೇಶದ ಅಂಚೆ ಕಚೇರಿಗಳಲ್ಲಿ ಇಷ್ಟು ದಿನ ಜಾರಿಯಲ್ಲಿದ್ದ ಈ ವ್ಯವಸ್ಥೆಯನ್ನು ಈಗ ರಾಜ್ಯದಲ್ಲಿಯೂ ಜಾರಿಗೆ ತರಲಾಗಿದೆ. ರಾಜ್ಯ ವ್ಯಾಪ್ತಿಯ ಅಂಚೆ ಇಲಾಖೆ ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಜೊತೆ ಈ ಕುರಿತು ಒಪ್ಪಂದ ಮಾಡಿಕೊಂಡಿದೆ. [ಜಗದೊಡೆಯ ತಿರುಪತಿ ತಿಮ್ಮಪ್ಪನ ಬ್ರಹ್ಮೋತ್ಸವ ಸಂಭ್ರಮ]

tirupati

300 ರೂ. ಮತ್ತು ಅಗತ್ಯವಿರುವ ಸೇವಾ ಶುಲ್ಕವನ್ನು ಪಾವತಿ ಮಾಡಿ ತಿಮ್ಮಪ್ಪನ ದರ್ಶನದ ದಿನ ಮತ್ತು ಸಮಯವನ್ನು ನೀವು ಅಂಚೆ ಕಚೇರಿಗಳಲ್ಲಿಯೇ ತಿಳಿಯಬಹುದಾಗಿದೆ. ದರ್ಶನದ ಜೊತೆ ಕೊಠಡಿಗಳ ಬುಕ್ಕಿಂಗ್‌ ಸೇರಿದಂತೆ ದೇವಸ್ಥಾನದ ಸಮಿತಿ ಒದಗಿಸುವ ಬಹುತೇಕ ಸೇವೆಗಳ ಟಿಕೆಟ್‌ಗಳನ್ನು ಅಂಚೆ ಕಚೇರಿಗಳಲ್ಲಿ ಪಡೆಯಬಹುದಾಗಿದೆ. [ನಂದಿನಿ ತುಪ್ಪದ ಘಮಲು ಕಳೆದುಕೊಂಡ ತಿರುಪತಿ ಲಡ್ಡು!]

ಬುಕ್ ಮಾಡುವುದು ಹೇಗೆ? : ಅಂಚೆ ಕಚೇರಿಗಳಲ್ಲಿ ಭಕ್ತರು ಪ್ರತಿ ಟಿಕೆಟ್‌ಗೆ ನಿಗದಿ ಪಡಿಸಿರುವ ಹಣವನ್ನು ನೀಡಿ, ತಮ್ಮ ದರ್ಶನದ ದಿನ, ಸಮಯ ಖಾತ್ರಿ ಪಡಿಸಿಕೊಳ್ಳಬಹುದು. ಆಧಾರ್‌ ಕಾರ್ಡ್ ಅಥವ ಯಾವುದಾದರೂ ಗುರುತಿನ ಚೀಟಿ, 2 ಫೋಟೋ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಬಹುದಾಗಿದೆ. [ದೇವಾಲಯದ ಆನ್ ಲೈನ್ ಸೇವೆ ಬುಕ್ ಮಾಡುವುದು ಹೇಗೆ?]

ಬೆಂಗಳೂರಿನ ಅಂಚೆ ಕಚೇರಿಗಳು : ಬೆಂಗಳೂರಿನ ಜಿಪಿಒ ಪ್ರಧಾನ ಕಚೇರಿ, ಆರ್‌.ಟಿ.ನಗರ, ಬಸವನಗುಡಿ, ಜಯನಗರ, ಜಾಲಹಳ್ಳಿ, ರಾಜಾಜಿನಗರ ಅಂಚೆ ಕಚೇರಿಗಳಲ್ಲಿ ಈ ಸೇವೆ ಲಭ್ಯವಿದೆ. ರಾಜ್ಯದ 54 ಪ್ರಧಾನ ಅಂಚೆ ಕಚೇರಿಗಳಲ್ಲಿ ಈ ಸೇವೆಗಳು ಲಭ್ಯವಿದೆ.

English summary
Facility of online ticket bookings of TTD, Tirupati special darshan now available in Bengaluru GPO and 54 other head post offices in state. Karnataka postal circle begins this service in association with Tirupati Tirumala Devasthanam (TTD) and Andhra Pradesh postal circle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X