ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ನಗರಗಳಲ್ಲಿ ಕೆಎಸ್ಆರ್‌ಟಿಸಿ ನಗರ ಸಾರಿಗೆ ಬಸ್ ಸಂಚಾರ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್ 25 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ಉಡುಪಿ ಸೇರಿದಂತೆ ಆರು ನಗರಗಳಲ್ಲಿ 'ನಗರ ಸಾರಿಗೆ' ಬಸ್ಸುಗಳನ್ನು ಓಡಿಸಲು ಸಿದ್ಧತೆ ನಡೆಸಿದೆ. ಈ ಉದ್ದೇಶಕ್ಕಾಗಿಯೇ 437 ಹೊಸ ಬಸ್ಸುಗಳನ್ನು ಖರೀದಿ ಮಾಡಲಾಗುತ್ತಿದೆ.

ಪಟ್ಟಣ ಪ್ರದೇಶಗಳಲ್ಲಿ ಸಮೂಹ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ 'ನಗರ ಸಾರಿಗೆ' ಎಂಬ ಹೊಸ ಕಲ್ಪನೆಯನ್ನು ಕೆಎಸ್ಆರ್‌ಟಿಸಿಯು 2011 ರಲ್ಲಿ ಹುಟ್ಟು ಹಾಕಿತು. ಇದರಿಂದ ಉತ್ತೇಜಿತಗೊಂಡ ದೇಶದ ನಾನಾ ರಾಜ್ಯಗಳ ಸಾರಿಗೆ ಸಂಸ್ಥೆಗಳು ಸಹ ತಾಲೂಕು ಮತ್ತು ಪಟ್ಟಣ ಪ್ರದೇಶಗಳಲ್ಲಿ ಬಸ್ ಸಂಚಾರ ಆರಂಭಿಸಿವೆ. [16 ಪ್ರಮುಖ ನಗರಗಳಲ್ಲಿ ನಗರ ಸಾರಿಗೆ ಬಸ್ ಸೌಲಭ್ಯ]

ksrtc

ಕೆಎಸ್ಆರ್‌ಟಿಸಿ ಹೊಸದಾಗಿ ಚಾಮರಾಜನಗರ, ಮಂಡ್ಯ, ಶಿವಮೊಗ್ಗ, ರಾಮನಗರ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ನಗರಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಲಿದೆ. ಇದರಿಂದ ಈ ಜಿಲ್ಲೆಗಳ ತಾಲೂಕು ಕೇಂದ್ರಗಳಲ್ಲಿ ಸಂಚಾರ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗಲಿದೆ. [ಐಟಿ ಉದ್ಯೋಗಿಗಳ ಸಂಚಾರಕ್ಕೆ KSRTC ಬಸ್‌!]

437 ಹೊಸ ಬಸ್‌ಗಳ ಖರೀದಿ : ಕೇಂದ್ರ ಸರಕಾರದ ನರ್ಮ್ ಸೇರಿದಂತೆ ವಿವಿಧ ಯೋಜನೆಯಡಿ ನಗರ ಭೂಸಾರಿಗೆ ನಿರ್ದೇಶನಾಲಯವು 437 ಬಸ್ಸುಗಳ ಖರೀದಿಗೆ ಹಣಕಾಸು ನೆರವು ನೀಡಲಿದೆ. ಈ 437 ಬಸ್‌ಗಳನ್ನು ಆರು ನಗರಗಳಲ್ಲಿ ಮಾತ್ರವಲ್ಲದೆ, ಈಗಾಗಲೇ ಕಾರ್ಯಾಚರಣೆ ಆರಂಭಿಸಿರುವ 11 ನಗರ ಪ್ರದೇಶಗಳ ಮಾರ್ಗಗಳಲ್ಲಿ ಹೆಚ್ಚುವರಿಯಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಖಾಸಗಿ ಬಸ್ಸುಗಳಿಗೆ ಪೆಟ್ಟು : ಕೆಎಸ್ಆರ್‌ಟಿಸಿಯ ನಗರ ಸಾರಿಗೆ ಬಸ್‌ಗಳು ತಾಲೂಕು ಮತ್ತು ಪಟ್ಟಣ ಪ್ರದೇಶಗಳಲ್ಲಿ ಓಡಾಡುತ್ತಿದ್ದ ಖಾಸಗಿ ಬಸ್, ಟೆಂಪೋ ಟ್ರಾವೆಲ್‌ಗಳಿಗೆ ಪೆಟ್ಟು ನೀಡಲಿವೆ. ಈ ವಾಹನಗಳು ಸುರಕ್ಷಿತವಲ್ಲದಿದ್ದರೂ, ಜನರು ಬೇರೆ ವ್ಯವಸ್ಥೆ ಇಲ್ಲದ ಕಾರಣ ಇದರಲ್ಲಿ ಸಂಚಾರ ನಡೆಸುತ್ತಿದ್ದರು. ನಗರ ಸಾರಿಗೆ ಬಸ್‌ಗಳ ಸಂಚಾರ ಆರಂಭವಾದ ಬಳಿಕ ಖಾಸಗಿ ವಾಹನಗಳಿಗೆ ಕಡಿವಾಣ ಬೀಳುವ ಸಾಧ್ಯತೆ ಇದೆ.

English summary
Karnataka State Road Transport Corporation(KSRTC) all set to launch city bus service in Udupi and other 5 districts of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X