ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1401 ವೈದ್ಯರ ನೇಮಕಾತಿಗೆ ಅಧಿಸೂಚನೆ ಪ್ರಕಟ

|
Google Oneindia Kannada News

ಬೆಂಗಳೂರು, ಜುಲೈ 24 : ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು, ತಜ್ಞ ವೈದ್ಯರು ಮತ್ತು ದಂತವೈದ್ಯರ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅರ್ಜಿ ಸಲ್ಲಿಸಲು ಆಗಸ್ಟ್ 9, 2015 ಕೊನೆಯ ದಿನವಾಗಿದೆ.

ಗುರುವಾರದ ವಿಧಾನಸಭೆ ಕಲಾಪದಲ್ಲಿ ಇಲಾಖಾ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ವೈದ್ಯರ ನೇಮಕಾತಿಗಾಗಿ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿದೆ ಎಂದು ಹೇಳಿದರು. 2 ರಿಂದ 3 ತಿಂಗಳಿನಲ್ಲಿ ಈ ನೇಮಕಾತಿ ಪೂರ್ಣಗೊಳ್ಳಲಿದೆ ಎಂದರು. [ನೇಮಕಾತಿ ಆದೇಶ ಇಲ್ಲಿದೆ ನೋಡಿ]

ut khader

983 ತಜ್ಞ ವೈದ್ಯ, 331 ಎಂಬಿಬಿಎಸ್‌ ಮತ್ತು 87 ದಂತ ವೈದ್ಯ ಹುದ್ದೆಗಳನ್ನು ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಲಾಗುತ್ತಿದೆ ಎಂದು ಸಚಿವರು ಸದನಕ್ಕೆ ವಿವರಣೆ ನೀಡಿದರು. ನೇಮಕಾತಿ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಯಲಿದೆ ಎಂದು ಹೇಳಿದರು. [ಅರ್ಜಿ ಸಲ್ಲಿಸಲು ವಿಳಾಸ]

ಪ್ರಮುಖ ಮಾಹಿತಿಗಳು [KPSC ನೇಮಕಾತಿ : ಅರ್ಜಿ ಸಲ್ಲಿಸಲು ಒಂದೇ ವಾರ ಬಾಕಿ]

*1401 ವೈದ್ಯರ ನೇಮಕಾತಿಗೆ ಅಧಿಸೂಚನೆ
* 983 ತಜ್ಞ ವೈದ್ಯ, 331 ಎಂಬಿಬಿಎಸ್‌, 87 ದಂತ ವೈದ್ಯ ಹುದ್ದೆ ಭರ್ತಿ
* ಆ.9 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
* ಆ.10 ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನ
English summary
Minister for health and family welfare UT Khader on Thursday told the legislative assembly that Karnataka Public Service Commission (KPSC) has Notification issued for 1401 doctors recruitment. August 9, 2015 last date for submit application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X