ಪಾಂಡವಪುರದಲ್ಲಿ ಪಾಳುಬಿದ್ದ ವಸತಿ ಗೃಹ, ತಹಸೀಲ್ದಾರಿಗೆ ನೆಲೆಯೇ ಇಲ್ಲ

Written by: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ,ಮಾರ್ಚ್,30: ಇಲ್ಲೊಂದು ವಸತಿ ಗೃಹ ಪಾಳು ಬಿದ್ದಿದೆ. ಅನೈತಿಕ ಚಟುವಟಿಕೆಗಳು ಯಾರ ಭಯವಿಲ್ಲದೆ ನಡೆಯುತ್ತಿವೆ. ಮಂಡ್ಯದ ಪಾಂಡವಪುರದಲ್ಲಿರುವ ತಹಸೀಲ್ದಾರ್ ಅವರ ವಸತಿ ಗೃಹವು ಹಲವಾರು ವರ್ಷಗಳಿಂದ ಹಾಳುಕೊಂಪೆಯಾಗಿದ್ದು ಅವಸಾನದತ್ತ ಸಾಗಿದೆ.

ಹೃದಯಭಾಗದಲ್ಲಿರುವ ತಹಸೀಲ್ದಾರ್ ಅವರ ಈ ವಸತಿಗೃಹವು ಕಸದ ತಿಪ್ಪೆಗಳ ರಾಶಿಗಳಿಂದ ತುಂಬಿಹೋಗಿದ್ದು, ಸುತ್ತಮುತ್ತಲೂ ಗಿಡ-ಗಂಟಿಗಳು ಹಾಗೂ ಬೇಲಿ ಬೆಳೆದಿದೆ. ಇದರಿಂದ ಇಲ್ಲಿನ ತಹಸೀಲ್ದಾರ್ ಬಿ.ಶಂಕರಯ್ಯ ಅವರಿಗೆ ನೆಲೆ ಇದ್ದಂತಾಗಿದೆ.[ತ್ಯಾಜ್ಯ ವಿಂಗಡನೆ ಕಡ್ಡಾಯ, ತಪ್ಪಿದರೆ ದಂಡ]

No shelter to tahsildar, residential house at worst stage in Mandya

ವಸತಿ ಗೃಹದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಭೂತ ಬಂಗಲೆಯಂತೆ ಗೋಚರಿಸುತ್ತಿದೆ. ಇಲ್ಲಿ ಸರಿಸೃಪಗಳು ವಾಸಿಸುತ್ತಿವೆ. ಹೀಗಾಗಿ ತಹಸೀಲ್ದಾರ್ ಅವರ ಈ ವಸತಿಗೃಹದತ್ತ ಯಾರೂ ಕೂಡ ಸುಳಿದಾಡಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.[ನಗರ ಸ್ವಚ್ಛವಾಗಿಡಿ.. ಇಲ್ಲದಿದ್ದರೆ ಇವನಿಗಾದಂತೆ ಆದೀತು!]

ಇದೀಗ ತಹಸೀಲ್ದಾರ್ ಬಿ.ಶಂಕರಯ್ಯ ಅವರು ಪಟ್ಟಣದ ಕೃಷ್ಣಾನಗರದಲ್ಲಿರುವ ಪ್ರವಾಸಿ ಮಂದಿರವನ್ನೇ ತಮ್ಮ ಸ್ವಂತ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಪಾಳುಬಿದ್ದಿರುವ ತಹಸೀಲ್ದಾರ್ ಹಾಗೂ ನೀರಾವರಿ ಇಲಾಖೆ ಎಇಇ ಅವರ ಈ ವಸತಿಗೃಹಗಳ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳುವತ್ತ ಗಮನ ಹರಿಸಬೇಕಾಗಿದೆ. ಈಗಾಗಲೇ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ ವಸತಿ ಗೃಹ ದುರಸ್ತಿಗೆ ಮನವಿ ಸಲ್ಲಿಸಲಾಗಿದೆ.

English summary
No shelter to tahsildar B. Shankaraiah. There have one residential house but now its worst stage, at Pandavapura Patna, Mandya
Please Wait while comments are loading...