ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಿ ಮಹಿಳೆಯರಿಗೆ ನೈಟ್ ಶಿಫ್ಟ್ ಇಲ್ಲ: ಶೀಘ್ರದಲ್ಲೇ ಕಾನೂನು ಜಾರಿ?

ಸಮಿತಿಯ ಮುಖ್ಯಸ್ಥ ಎನ್.ಎ. ಹ್ಯಾರಿಸ್ ಅವರ ಪ್ರಕಾರ, ಮಹಿಳೆಯರಿಗೆ ಗಂಡಸರಿಗಿಂತ ಹೆಚ್ಚಿನ ಜವಾಬ್ದಾರಿಗಳಿರುತ್ತವೆ. ಹಾಗಾಗಿ, ರಾತ್ರಿ ಪಾಳಿಯಲ್ಲಿ ಅವರನ್ನು ದುಡಿಸಿಕೊಳ್ಳುವುದರಿಂದ ವಿನಾಯ್ತಿ ನೀಡಲು ಶಿಫಾರಸು ಸಲ್ಲಿಸಲಾಗಿದೆ.

|
Google Oneindia Kannada News

ಬೆಂಗಳೂರು, ಮಾರ್ಚ್ 30: ಉದ್ಯೋಗಸ್ಥ ಮಹಿಳೆಯರ ಅನುಕೂಲಕ್ಕಾಗಿ, ಖಾಸಗಿ ಹಾಗೂ ಸರ್ಕಾರಿ ವಲಯಗಳಲ್ಲಿ ರಾತ್ರಿ ಪಾಳಿ ಕರ್ತವ್ಯವನ್ನು ಬಲವಂತವಾಗಿ ಹೇರುವಂತಿಲ್ಲ ಎಂದು ರಾಜ್ಯ ಸರ್ಕಾರ ನೇಮಿಸಿರುವ ಸಮಿತಿಯೊಂದು ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದೆ.

ಮಹಿಳೆಯರು ಮನೆಯಲ್ಲಿರಬೇಕಿರುವುದು ಅತ್ಯವಶ್ಯಕ. ಹಾಗಾಗಿ, ಅವರ ಮೇಲೆ ಕಡ್ಡಾಯವಾಗಿ ರಾತ್ರಿ ಪಾಳಿಯನ್ನು ಯಾವುದೇ ಕಂಪನಿಯು ಹೇರುವಂತಿಲ್ಲ ಎಂದು ಸಮಿತಿಯು ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

No night shift for women: Proposal to Karnataka Government

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮಿತಿಯ ಮುಖ್ಯಸ್ಥ ಎನ್.ಎ. ಹ್ಯಾರಿಸ್, ''ಮಹಿಳೆಯರಿಗೆ ಗಂಡಸರಿಗಿಂತ ಹೆಚ್ಚಿನ ಜವಾಬ್ದಾರಿಗಳಿರುತ್ತವೆ. ಮನೆಯಲ್ಲಿ ಅಡುಗೆ ಮನೆಯನ್ನು ನಿಭಾಯಿಸುವುದರಿಂದ ಹಿಡಿದು, ಪತಿ, ಮಕ್ಕಳನ್ನು, ಮನೆಯಲ್ಲಿರುವ ಹಿರಿಯರನ್ನೂ ನೋಡಿಕೊಳ್ಳುವ ಜವಾಬ್ದಾರಿಗಳಿರುತ್ತವೆ. ಇನ್ನು, ಉದ್ಯೋಗಸ್ಥ ಮಹಿಳೆಯರಿಗೆ ಜವಾಬ್ದಾರಿ ಹೆಚ್ಚು. ಹಾಗಾಗಿ, ಉದ್ಯೋಗಸ್ಥ ಮಹಿಳೆಯರಿಗೆ ಕಡ್ಡಾಯವಾಗಿ ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳುವುದು ಸರಿಯಲ್ಲ. ಹಾಗಾಗಿಯೇ, ಈ ಬಗ್ಗೆ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದೇವೆ'' ಎಂದು ತಿಳಿಸಿದರು.

ಆದರೆ, ಸಮಿತಿಯ ಈ ಶಿಫಾರಸಿಗೆ ಖಾಸಗಿ ಔದ್ಯೋಗಿಕ ವಲಯ ಹಾಗೂ ಕೆಲವಾರು ತಜ್ಞರಿಂದ ವಿರೋಧ ವ್ಯಕ್ತವಾಗಿದೆ. ಸಮಿತಿ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡರೆ ಅದು ಮಹಿಳೆಯರಿಗೆ ಒಳಿತು ಆದೀತು. ಆದರೆ, ಮುಂಬರುವ ದಿನಗಳಲ್ಲಿ ಇದು ಮಹಿಳೆಯರಿಗೆ ಮಾರಕವಾಗುವ ಸಂಭವವೇ ಹೆಚ್ಚು. ಇಂಥ ನಿಯಮಗಳು ಕೆಲವು ಆಯ್ದ ಕ್ಷೇತ್ರಗಳಲ್ಲಿ ಮಹಿಳೆಯರ ನೇಮಕಾತಿಯ ಪ್ರಮಾಣ ಗಣನೀಯವಾಗಿ ಇಳಿಯುವಂತೆ ಮಾಡುತ್ತದೆ ಎಂದು ಕೆಲವರು ಇದನ್ನು ವಿರೋಧಿಸಿದ್ದಾರೆ.

English summary
Today's Top News, Breaking News, News in Brief March 30: Women should not be forced to work on the night shift if they do not want to - and companies should as far as possible avoid women on the night shift, a committee of legislators has proposed in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X